5 ವರ್ಷ ಮುಂದೆ ಹೋಗಿ 2025 ರ ಶ್ರೇಷ್ಠ 11ರ ಬಳಗ ಘೋಷಿಸಿದ ಫಾಕ್ಸ್ ಸಂಸ್ಥೆ ! ಕೊಹ್ಲಿ ಇಲ್ಲದೇ ಸ್ಥಾನ ಪಡೆದ ಯುವ ಭಾರತೀಯರು ಯಾರು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಪ್ರತಿಷ್ಠಿತ ಖ್ಯಾತ ಕ್ರಿಕೆಟ್ ವಿಶ್ಲೇಷಕ ಸಂಸ್ಥೆಗಳಲ್ಲಿ ಒಂದಾಗಿರುವ ಫಾಕ್ಸ್ ಕ್ರಿಕೆಟ್ ಸಂಸ್ಥೆಯು ಇದೀಗ ಮುಂದಿನ ಐದು ವರ್ಷಗಳ ನಂತರ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಇರಬಹುದಾದ 11 ಅತ್ಯುತ್ತಮ ಆಟಗಾರರ ಪಟ್ಟಿಯನ್ನು ಆಯ್ಕೆ ಮಾಡಿ 2025 ರ ಬೆಸ್ಟ್ ಟೆಸ್ಟ್ ಇಲೆವೆನ್ ತಂಡದ ಎಂದು ಘೋಷಣೆ ಮಾಡಿದೆ.

ಅಚ್ಚರಿಯೆಂದರೇ ಈ ತಂಡದಲ್ಲಿ ಇನ್ನು ಹಲವಾರು ವರ್ಷಗಳ ಕಾಲ ಕ್ರಿಕೆಟ್ ಜಗತ್ತನ್ನು ಆಳುವ ಕಿಂಗ್ ಕೊಹ್ಲಿ ಅಥವಾ ಭಾರತದ ಸ್ಟಾರ್ ಬ್ಯಾಟ್ಸ್ಮನ್ ಗಳಲ್ಲಿ ಒಬ್ಬರಾಗಿರುವ ರೋಹಿತ್ ಶರ್ಮಾ ರವರು ಸ್ಥಾನ ಪಡೆದುಕೊಂಡಿಲ್ಲ, ಬದಲಾಗಿ ಇನ್ನು ಕೆಲವೇ ಕೆಲವು ಟೆಸ್ಟ್ ಪಂದ್ಯಗಳಲ್ಲಿ ಆಟವಾಡಿರುವ ಇಬ್ಬರು ಯುವ ಆಟಗಾರರು ಫಾಕ್ಸ್ ಕ್ರಿಕೆಟ್ ಸಂಸ್ಥೆಯ ತಂಡದಲ್ಲಿ ಆಯ್ಕೆಯಾಗುವ ಮೂಲಕ ಅಚ್ಚರಿ ಮೂಡಿಸುವ ಜೊತೆಗೆ, ಭವಿಷ್ಯದ ತಾರೆಗಳು ಎಂಬ ಆತ್ಮವಿಶ್ವಾಸ ಮೂಡಿಸಿದ್ದಾರೆ. ಅಂದಹಾಗೆ ಈ ತಂಡದಲ್ಲಿ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಂಸನ್ ರವರಿಗೂ ಕೂಡ ಸ್ಥಾನ ನೀಡಲಾಗಿಲ್ಲ.

ಆರಂಭಿಕರಾಗಿ ಭಾರತದ ಇಬ್ಬರು ಯುವ ತಾರೆಗಳಾಗಿರುವ ಪೃಥ್ವಿ ಶಾ ಹಾಗೂ ಶುಭಂ ಗಿಲ್ ರವರು ಸ್ಥಾನ ಪಡೆದುಕೊಂಡಿದ್ದಾರೆ, ಇನ್ನು ಆಸ್ಟ್ರೇಲಿಯಾ ತಂಡದ ಮಾರ್ನಸ್ ಲ್ಯಾಬುಸ್ಟಾಗ್ನೆ ರವರು ಮೂರನೇ ಕ್ರಮಾಂಕದಲ್ಲಿ ಸ್ಥಾನ ಪಡೆದು ಕೊಂಡಿದ್ದಾರೆ, ಇವರು ಟೆಸ್ಟ್ ವೃತ್ತಿ ಜೀವನದಲ್ಲಿ ಅತ್ಯುತ್ತಮ ಆರಂಭವನ್ನು ಪಡೆದು ಬಾರಿ ಸದ್ದು ಮಾಡಿದ್ದರು. ಇವರ ನಂತರ ವಿರಾಟ್ ಕೊಹ್ಲಿ ಹಾಗೂ ಸ್ಟೀವ್ ಸ್ಮಿತ್ ರವರ ನಡುವೆ ನಾಲ್ಕನೇ ಸ್ಥಾನಕ್ಕೆ ಆಯ್ಕೆ ನಡೆಯುವಾಗ ಕೊನೆಯದಾಗಿ ಸ್ಟೀವ್ ಸ್ಮಿತ್ ರವರು ಆಯ್ಕೆಯಾಗಿದ್ದಾರೆ.

ಇನ್ನುಳಿದಂತೆ ಪಾಕಿಸ್ತಾನದ ಆಟಗಾರ ಬಾಬರ್ ಅಜಂ ಮತ್ತು ಇಂಗ್ಲೆಂಡ್ ಆಲ್-ರೌಂಡರ್ ಬೆನ್ ಸ್ಟೋಕ್ಸ್ ರವರು ನಂತರದ ಸ್ಥಾನಗಳಲ್ಲಿ ಕಾಣಿಸಿ ಕೊಂಡಿದ್ದಾರೆ. ವಿಕೆಟ್ ಕೀಪರ್ ಕೋಟಾದಲ್ಲಿ ದಕ್ಷಿಣ ಆಫ್ರಿಕಾ ತಂಡದ ಕ್ವಿಂಟನ್ ಸ್ಥಾನ ಪಡೆದು ಕೊಂಡಿದ್ದು, ಪ್ಯಾಟ್ ಕಮಿನ್ಸ್ ರವರು ಮೊದಲ ವೇಗದ ಬೌಲರ್ ಆಗಿ ಆಯ್ಕೆಯಾಗಿದ್ದಾರೆ.

ಇನ್ನು ಜಸ್ವಿತ್ ಬುಮ್ರಾ ಹಾಗೂ ಕಗಿಸೋ ರಬಾಡ ರವರು ಸೇರಿದಂತೆ ಒಟ್ಟಾಗಿ ಮೂರು ವೇಗದ ಬೌಲರ್ಗಳು ಈ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಸ್ಪಿನ್ನರ್ ಗಳ ಕೋಟಾದಲ್ಲಿ ಆಫ್ಘಾನಿಸ್ತಾನ ತಂಡದ ಭರವಸೆಯ ಬೌಲರ್ ರಶೀದ್ ಖಾನ್ ರವರು ಸ್ಥಾನ ಪಡೆದು ಕೊಂಡಿದ್ದು ಮುಂಬರುವ ಭವಿಷ್ಯದಲ್ಲಿ ಅಗ್ರ ಸ್ಪಿನ್ನರ್ ಆಗಿ ಹೊರಹೊಮ್ಮಲಿದ್ದಾರೆ ಎಂದು ಫಾಕ್ಸ್ ಕ್ರಿಕೆಟ್ ಸಂಸ್ಥೆ ಹೇಳಿದೆ. ಒಟ್ಟಾರೆಯಾಗಿ ತಂಡ ಈ ಕೆಳಗಿನಂತೆ ಇದ್ದು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸಿ.

2025 ರ ಫಾಕ್ಸ್ ಕ್ರಿಕೆಟ್‌ನ ವಿಶ್ವ ಇಲೆವೆನ್: ಪೃಥ್ವಿ ಶಾ, ಶುಬ್ಮನ್ ಗಿಲ್, ಸ್ಟೀವ್ ಸ್ಮಿತ್, ಬಾಬರ್ ಅಜಮ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಬೆನ್ ಸ್ಟೋಕ್ಸ್, ಕ್ವಿಂಟನ್ ಡಿ ಕಾಕ್ (ಡಬ್ಲ್ಯೂಕೆ), ಜಸ್ಪ್ರೀತ್ ಬುಮ್ರಾ, ಕಗಿಸೊ ರಬಾಡಾ, ಪ್ಯಾಟ್ ಕಮ್ಮಿನ್ಸ್, ರಶೀದ್ ಖಾನ್.

cricketKannada NewsKarunaada VaaniVirat Kohliಕನ್ನಡಕನ್ನಡ ನ್ಯೂಸ್ಕರುನಾಡ ವಾಣಿಕ್ರಿಕೆಟ್ವಿರಾಟ್ ಕೊಹ್ಲಿ