ಸಾರ್ವಕಾಲಿಕ ಶ್ರೇಷ್ಠ ಭಾರತೀಯ ಐಪಿಎಲ್ ತಂಡ ಘೋಷಣೆ ಮಾಡಿದ ಶೇನ್ ವಾರ್ನ್ ! ಅಚ್ಚರಿಯಾಗಿ ಹಲವಾರು ಆಯ್ಕೆಗಾರರು ಆಯ್ಕೆ ! ಯಾರ್ಯಾರು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ಆಸ್ಟ್ರೇಲಿಯ ತಂಡದ ಕ್ರಿಕೆಟ್ ದಿಗ್ಗಜರಲ್ಲಿ ಒಬ್ಬರಾಗಿರುವ ಸ್ಪಿನ್ ದಂತಕತೆ ಶೇನ್ ವಾರ್ನ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮದೇ ಆದ ಸಾರ್ವಕಾಲಿಕ ಶ್ರೇಷ್ಠ ಭಾರತೀಯ ಐಪಿಎಲ್ ತಂಡವನ್ನು ಘೋಷಣೆ ಮಾಡಿದ್ದಾರೆ.

ಹಲವು ಭಾರತೀಯ ಆಟಗಾರರನ್ನು ಗಣನೆಗೆ ತೆಗೆದುಕೊಂಡು ಹಲವಾರು ಅಚ್ಚರಿಯ ಆಯ್ಕೆಗಳ ಮೂಲಕ ಈ ತಂಡವನ್ನು ಆಯ್ಕೆ ಮಾಡಿದ್ದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಜನರು ತಮ್ಮದೇ ಆದ ಅಭಿಪ್ರಾಯಗಳನ್ನು ಹೊರ ಹಾಕುತ್ತಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಆಟಗಾರನಾಗಿ, ಕೋಚ್ ಆಗಿ ಹಾಗೂ ಬ್ರಾಂಡ್ ಅಂಬಾಸಿಡರ್ ಆಗಿ ಕಾರ್ಯನಿರ್ವಹಣೆ ಮಾಡಿರುವ ಅನುಭವವಿರುವ ಶೇನ್ ವಾರ್ನ್ ರವರು, ಆಲ್ರೌಂಡರ್ ಕೋಟಾದಲ್ಲಿ ಇಫ್ರಾನ್ ಪಠಾಣ್, ಹಾರ್ದಿಕ್ ಪಾಂಡ್ಯ ಸೇರಿದಂತೆ ಹಲವಾರು ಆಟಗಾರರು ಇದ್ದರೂ ಕೂಡ ಯೂಸುಫ್ ಪಠಾಣ್ ರವರಿಗೆ ಮಣೆ ಹಾಕಿದ್ದಾರೆ. ಇನ್ನು ಐಪಿಎಲ್ ನಲ್ಲಿ ಸದಾ ಉತ್ತಮ ಪ್ರದರ್ಶನ ನೀಡುವ ಬುಮ್ರಾ, ಭುವನೇಶ್ವರ್ ಅವರನ್ನು ಪಕ್ಕಕ್ಕೆ ಇಟ್ಟು ಯುವ ಆಟಗಾರ ಸಿದ್ಧಾರ್ಥ್ ತ್ರಿವೇದಿ ರವರಿಗೆ ಮಣೆ ಹಾಕುವ ಮೂಲಕ ಅಚ್ಚರಿಯ ಆಯ್ಕೆ ಮಾಡಿದ್ದಾರೆ..

ಸಂಪೂರ್ಣ ತಂಡ ಹೀಗಿದೆ: ರೋಹಿತ್ ಶರ್ಮಾ, ವೀರೇಂದ್ರ ಸೆಹ್ವಾಗ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಯೂಸುಫ್ ಪಠಾಣ್, ಮಹೇಂದ್ರ ಸಿಂಗ್ ಧೋನಿ, ರವೀಂದ್ರ ಜಡೇಜಾ, ಹರ್ಭಜನ್ ಸಿಂಗ್, ಜಹೀರ್ ಖಾನ್, ಸಿದ್ಧಾರ್ಥ್ ತ್ರಿವೇದಿ, ಮುನಾಫ್ ಪಟೇಲ್.