ಐಪಿಎಲ್ ಕುರಿತು ಮತ್ತೊಂದು ಮಹತ್ವದ ನಿರ್ಣಯ ತೆಗೆದುಕೊಂಡ ಸೌರವ್ ಗಂಗೂಲಿ ! ನಿರಾಸೆ ಮೂಡಿಸಿದರೂ ಉತ್ತಮ ನಿರ್ಧಾರ ಎಂದ ನೆಟ್ಟಿಗರು

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಕೋರಾನಾ ಪ್ರಭಾವದಿಂದ ಈ ಬಾರಿಯ ಐಪಿಎಲ್ ಮಾರ್ಚ್ 29 ನೇ ತಾರೀಖಿನಿಂದ ನಡೆಯುವುದಿಲ್ಲ, ಬದಲಾಗಿ 17 ದಿನಗಳ ಕಾಲ ಮುಂದೂಡಿ ಏಪ್ರಿಲ್ 15 ರಿಂದ ಆರಂಭವಾಗಲಿದೆ.

ದೇಶದಲ್ಲಿ ಇದೀಗಷ್ಟೇ ಕೋರೋನಾ ಪ್ರಭಾವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಿಸಿಸಿಐ ನಿರ್ಧಾರ ಉತ್ತಮ ಎಂದು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇನ್ನು ಕೆಲವರು ಟೂರ್ನಿ ಕ್ಯಾನ್ಸಲ್ ಮಾಡುವಂತೆ ಆಗ್ರಹಿಸಿದ್ದರು. ಇನ್ನು ಕೆಲವರು ಬಿಸಿಸಿಐ ಸಂಸ್ಥೆಯ ನಿರ್ಧಾರದ ಕುರಿತು ಆಕ್ಷೇಪ ವ್ಯಕ್ತಪಡಿಸಿ, ಹಣಕ್ಕಾಗಿ ಐಪಿಎಲ್ ಟೂರ್ನಿ ಮುಂದೂಡಲು ಅಥವಾ ಕ್ಯಾನ್ಸಲ್ ಮಾಡಲು ಬಿಸಿಸಿಐ ಸಂಸ್ಥೆ ಹಿಂದೇಟು ಹಾಕುತ್ತಿದೆ ಎಂದು ತಮ್ಮದೇ ಆದ ಅಭಿಪ್ರಾಯಗಳನ್ನು ಹೊರಹಾಕಿದ್ದರು. ಆದರೆ ಇದೀಗ ಈ ಎಲ್ಲಾ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿರುವ ಸೌರವ್ ಗಂಗೂಲಿ ರವರು ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ.

ಇದೀಗ ಇದರ ಕುರಿತು ಮಾತನಾಡಿರುವ ಸೌರವ್ ಗಂಗೂಲಿ ರವರು ಏಪ್ರಿಲ್ 15 ಕ್ಕೆ ಟೂರ್ನಿ ಮುಂದೂಡಲಾಗಿರುವ ಕಾರಣ ಕೆಲವು ಪಂದ್ಯಗಳನ್ನು ನಾವು ಕಡಿತಗೊಳಿಸುವುದು ಸಾಮಾನ್ಯ, ಆದರೆ ಎಷ್ಟು ಪಂದ್ಯಗಳನ್ನು ಕಡಿತಗೊಳಿಸಬೇಕು ಎಂಬುದು ಇನ್ನೂ ನಿರ್ಧಾರ ಮಾಡಿಲ್ಲ ಇದಕ್ಕೆ ನನ್ನ ಬಳಿಯೂ ಉತ್ತರವಿಲ್ಲ. ಆದರೆ ಈ ನಿರ್ಧಾರಕ್ಕೂ ಮುನ್ನ ಪಂದ್ಯಗಳು ನಡೆಯಬೇಕು ಎಂದರೇ ಭಾರತದಲ್ಲಿ ಕೋರೋನಾ ಪ್ರಭಾವ ಸಂಪೂರ್ಣವಾಗಿ ಕಡಿಮೆಯಾಗಬೇಕು, ಇಲ್ಲವಾದಲ್ಲಿ ಯಾವುದೇ ಕಾರಣಕ್ಕೂ ಎಷ್ಟು ಸಾವಿರ ಕೋಟಿ ನಷ್ಟ ಆದರೂ ಕೂಡ ಒಂದು ಪಂದ್ಯ ಕೂಡ ನಡೆಸುವುದಿಲ್ಲ. ಅಭಿಮಾನಿಗಳ ಸುರಕ್ಷತೆ ಆಟಗಾರರ ಬಗ್ಗೆ ಕಾಳಜಿ ಅತ್ಯಂತ ಮುಖ್ಯ, ಕೇವಲ ಈ ಪಂದ್ಯಗಳಲ್ಲಿ ಅಲ್ಲ ಕೋರೋನಾ ಪ್ರಭಾವ ಕಡಿಮೆಯಾಗುವವರೆಗೂ ಯಾವುದೇ ದೇಶಿಯ ಪಂದ್ಯಗಳು ನಡೆಯುವುದಿಲ್ಲ. ಈ ಕುರಿತು ಯಾವುದೇ ನಿರ್ಣಯ ಇನ್ನೂ ಕೈಗೊಂಡಿಲ್ಲ, ಫ್ರಾಂಚೈಸಿಗಳು ಬಳಿ ಈಗಾಗಲೇ ಮಾತನಾಡಿದ್ದಾಗಿದೆ. ಸುರಕ್ಷತೆಗೆ ನಮ್ಮ ಮೊದಲ ಆದ್ಯತೆ ಎಂದು ಸ್ಪಷ್ಟಪಡಿಸಿದ್ದಾರೆ.

cricketIPLIPL 2020Kannada NewsKarunaada VaaniSourav GangulySportsಐಪಿಎಲ್