ಮುಂದುವರೆದ ಭಾರತೀಯ ವನಿತೆಯರ ಅಧಿಪತ್ಯ ! ಬೌಲಿಂಗ್ ನಲ್ಲಿ ರಾಧಾ ಫುಲ್ ಶೈನ್ ! ಬೌಂಡರಿ ಮೂಲಕ ಇನ್ನಿಂಗ್ಸ್ ಆರಂಭಿಸಿ ಶೆಫಾಲಿ ಮಿಂಚಿ ಗಳಿಸಿದ್ದು ಎಷ್ಟು ರನ್ ಗೊತ್ತಾ?

ನಮಸ್ಕಾರ ಸ್ನೇಹಿತರೇ, ಒಂದು ತಂಡ ಎಂದರೇ ಹೇಗಿರಬೇಕು ಎಂಬುದನ್ನು ಇದೀಗ ಭಾರತೀಯ ವನಿತೆಯರು ವಿಶ್ವಕಪ್ ಟೂರ್ನಿಯಲ್ಲಿ ಸಾಬೀತು ಪಡಿಸುತ್ತಿದ್ದಾರೆ. ಇಂದು ನಡೆದ ಶ್ರೀಲಂಕಾ ವಿರುದ್ದದ ಪಂದ್ಯದಲ್ಲಿ ವನಿತೆಯರು ಭರ್ಜರಿ 7 ವಿಕೆಟ್ ಗಳಿಂದ ಗೆಲುವು ಸಾಧಿಸಿದ್ದಾರೆ.

ಇಂದಿನ ಪಂದ್ಯದಲ್ಲಿ ಇಷ್ಟು ದಿವಸ ಅದ್ಭುತವಾಗಿ ಬೌಲಿಂಗ್ ಮಾಡುತ್ತಿದ್ದ ಶೈಕ ಪಾಂಡೆ ರವರು ಕೊಂಚ ದುಬಾರಿ ಎನಿಸಿದರು ಹಾಗೂ 20ನೇ ಓವರ್ ನವರೆಗೂ ಒಂದು ವಿಕೆಟ್ ಕೂಡ ಪಡೆಯಲಿಲ್ಲ. ಮತ್ತೊಂದೆಡೆ ವಿಶ್ವಕಪ್ ನಲ್ಲಿ ಮಿಂಚುತ್ತಿರುವ ಪೂನಮ್ ಯಾದವ್ ರವರ ಓವರ್ಗಳಲ್ಲಿ ಶ್ರೀಲಂಕಾದ ಬ್ಯಾಟ್ಸ್ಮನ್ಗಳು ಎಚ್ಚರಿಕೆಯ ಆಟವಾಡಿದ ಕಾರಣ 19ನೇ ಓವರ್ ನವರೆಗೂ ಪೂನಮ್ ಯಾದವ್ ಅವರಿಗೂ ಕೂಡ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ, ಕೊನೆಯ ಓವರ್ ನ ಕೊನೆಯ ಎಸೆತದಲ್ಲಿ ಒಂದು ವಿಕೆಟ್ ಪಡೆದು ಕೊಂಡರು. ಆದರೆ ಗಾಯಕ್ವಾಡ ರವರು ತಮ್ಮ ನಾಲ್ಕು ಓವರ್ಗಳಲ್ಲಿ ಕೇವಲ 18 ರನ್ ನೀಡಿ 2 ವಿಕೆಟ್ ಪಡೆದು ಕೊಂಡರೇ, ಮತ್ತೊಂದೆಡೆ ರಾಧ ಯಾದವ್ ಅವರು 4 ಓವರ್ಗಳಲ್ಲಿ 23 ರನ್ ನೀಡಿ ನಾಲ್ಕು ವಿಕೆಟ್ ಪಡೆದು ಕೊಂಡು ಮಿಂಚಿದರು.

ಇದಾದ ಬಳಿಕ 114 ರನ್ ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡಕ್ಕೆ ಎಂದಿನಂತೆ ಶೆಫಾಲಿ ವರ್ಮ ರವರು ಅದ್ಭುತ ಆರಂಭ ನೀಡಿದರು. ಪಂದ್ಯದ ಮೊದಲ ಎಸೆತದಲ್ಲಿಯೇ ಬೌಂಡರಿ ಬಾರಿಸುವ ಮೂಲಕ ವೀರೇಂದ್ರ ಸೆಹ್ವಾಗ್ ರವರ ರೀತಿ ಇನಿಂಗ್ಸ್ ಆರಂಭಿಸಿದ ಶೆಫಾಲಿ ವರ್ಮಾ ರವರು, ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಬಹಳ ಸರಾಗವಾಗಿ ಬ್ಯಾಟ್ ಬೀಸಿದ ಶೆಫಾಲಿ ವರ್ಮ ರವರು, ಕೇವಲ 34 ಎಸೆತಗಳಲ್ಲಿ 47 ರನ್ ಗಳಿಸಿ ರನ್ ಔಟ್ ಆಗುವ ಮೂಲಕ ಮತ್ತೊಮ್ಮೆ ಅರ್ಧಶತಕ ವಂಚಿತರಾದರು. ಇನ್ನುಳಿದಂತೆ ಸ್ಮ್ರಿತಿ ಮಂದನಾ 17, ಹರ್ಮನ್ಪ್ರೀತ್ ಕೌರ್, ಜೆಮಿಮಃ ರೋಡ್ರಿಗೆಸ್, ದೀಪ್ತಿ ಶರ್ಮ ತಲಾ 15 ರನ್ ಗಳಿಸುವ ಮೂಲಕ ತಂಡವನ್ನು ಗುರಿ ಮುಟ್ಟಿಸುವಲ್ಲಿ ಯಶಸ್ವಿಯಾದರು.