ಮೈದಾನದ ಹೊರಗಡೆಯೂ ಮುಂದುವರೆದ ‘ದಾದಾ’ ಗಿರಿ ! ಉಲ್ಟಾ ಹೊಡೆದಿದ್ದ ಪಾಕ್ ಅನ್ನು ಮತ್ತೊಮ್ಮೆ ತಲೆಬಾಗುವಂತೆ ಮಾಡಿದ ಬಿಸಿಸಿಐ !

ನಮಸ್ಕಾರ ಸ್ನೇಹಿತರೇ, ಮೈದಾನದಲ್ಲಿ ಸೌರವ್ ಗಂಗೂಲಿ ರವರ ‌’ದಾದಾ’ ಗಿರಿಯ ನಿಮಗೆ ಹೆಚ್ಚಾಗಿ ಹೇಳುವ ಅವಶ್ಯಕತೆ ಇಲ್ಲ ಎನಿಸುತ್ತದೆ. ಇದೀಗ ಈ ದಾದಾಗಿರಿ ಮೈದಾನದ ಹೊರಗಡೆಯೂ ‌ಮುಂದುವರೆದಿದೆ.

ಕಳೆದ ಕೆಲವು ದಿನಗಳ ಹಿಂದೆ ನಿಮಗೆಲ್ಲರಿಗೂ ತಿಳಿದಿರುವಂತೆ ಪಾಕಿಸ್ತಾನ ದೇಶವು ಏಷ್ಯಾಕಪ್ ಸರಣಿಯನ್ನು ದುಬೈನಲ್ಲಿ ಆಯೋಜಿಸಿ ಎಂಬ ಐಸಿಸಿ ಆದೇಶಕ್ಕೆ ‌ಮಣಿದು ಒಪ್ಪಿಕೊಂಡಿತ್ತು. ಆದರೆ ಆದೇಶ ಪ್ರಕಟಿಸಿದ ಕೆಲವೇ ಕೆಲವು ಗಂಟೆಗಳಲ್ಲಿ ಮತ್ತೊಮ್ಮೆ ಯು-ಟರ್ನ್ ಹೊಡೆದ ಯಾವುದೇ ಕಾರಣಕ್ಕೂ ಪಾಕಿಸ್ತಾನ ನೆಲದಲ್ಲಿ ನಡೆಯಬೇಕಾದ ಸರಣಿಯನ್ನು ದುಬೈ ದೇಶಕ್ಕೆ ಸ್ಥಳಾಂತರಿಸಲು ಸಾಧ್ಯವಿಲ್ಲ. ಒಂದು ವೇಳೆ ಭಾರತ ದೇಶ ಪಾಕಿಸ್ತಾನಕ್ಕೆ ಕ್ರಿಕೆಟ್ ಆಡಲು ಬರದಿದ್ದರೆ ನಾವು ಮುಂದಿನ (2022) ಟಿ-20 ವರ್ಲ್ಡ್ ಕಪ್ ನಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿಕೆ ನೀಡಿತ್ತು.

ಇದನ್ನು ಗಂಭೀರವಾಗಿ ಪರಿಗಣಿಸಿದ ಸೌರವ್ ಗಂಗೂಲಿ ರವರು ಯಾವುದೇ ಕಾರಣಕ್ಕೂ ಭಾರತ ಕ್ರಿಕೆಟ್ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸುವುದಿಲ್ಲ ಎಂದು ಐಸಿಸಿ ಕ್ರಿಕೆಟ್ ಸಂಸ್ಥೆಯ ಮೇಲೆ ಒತ್ತಡ ಹೇರಿ ಕೊನೆಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮಂಡಿಯೂರುವಂತೆ ಮಾಡಿದ್ದಾರೆ. ಇದೀಗ ಇದರ ಕುರಿತು ಖುದ್ದು ಸೌರವ್ ಗಂಗೂಲಿ ರವರೆ ಮಾತನಾಡಿದ್ದು, ಏಷ್ಯಾಕಪ್ ಟೂರ್ನಿಯು ದುಬೈ ದೇಶದಲ್ಲಿ ನಡೆಯಲಿದೆ ಹಾಗೂ ಪಾಕಿಸ್ತಾನ, ಭಾರತ ಸೇರಿದಂತೆ ಇನ್ನುಳಿದ ತಂಡಗಳು ಭಾಗವಹಿಸಲಿವೆ ಎಂದು ಸ್ಪಷ್ಟಪಡಿಸಿದ್ದಾರೆ.