ಬಾಂಗ್ಲಾ ಪಂದ್ಯದಲ್ಲಿ ಅಬ್ಬರಿಸಿ ಗೆದ್ದು ಬೀಗಿದ ವನಿತೆಯರು ! ಮತ್ತೊಮ್ಮೆ ಮಿಂಚಿದ ಲೇಡೀ ಸೆಹ್ವಾಗ್, ಪೂನಮ್ ಯಾದವ್ ! ಹೇಗಿತ್ತು ಗೊತ್ತಾ ವನಿತೆಯರ ಭರ್ಜರಿ ಆಟ ??

ನಮಸ್ಕಾರ ಸ್ನೇಹಿತರೇ, ಇದೀಗ ಟಿ-20 ವಿಶ್ವಕಪ್ ನ ಎರಡನೇ ಪಂದ್ಯದಲ್ಲಿ ಬಾಂಗ್ಲಾ ತಂಡದ ವಿರುದ್ಧದ ಪಂದ್ಯದಲ್ಲಿ ಭಾರತೀಯ ವನಿತೆಯರು ಭರ್ಜರಿ ಗೆಲುವು ದಾಖಲಿಸಿದ್ದಾರೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಎರಡನೇ ಓವರ್ನಲ್ಲಿಯೇ ಮೊದಲ ವಿಕೆಟ್ ಕಳೆದುಕೊಂಡಿತು. ಆದರೆ ಮತ್ತೊಂದೆಡೆ ಬ್ಯಾಟಿಂಗ್ ಮಾಡುತ್ತಿದ್ದ 16 ವರ್ಷದ ಶಫಾಲಿ ವರ್ಮ ರವರು ಎಂದಿನಂತೆ ಯಾವುದೇ ಅಂಜಿಕೆಯಿಲ್ಲದೇ ಬ್ಯಾಟ್ ಬೀಸಿದರು. ಕೇವಲ 17 ಎಸೆತಗಳನ್ನು ಎದುರಿಸಿದ ಶಫಾಲಿ ವರ್ಮಾ ರವರು ಅಮೋಘ ನಾಲ್ಕು ಸಿಕ್ಸರ್ ಗಳನ್ನು ಬಾರಿಸಿ, ಎರಡು ಬೌಂಡರಿ ಗಳ ಸಹಾಯದೊಂದಿಗೆ 39 ರನ್ ಗಳಿಸಿ ಭಾರತ ತಂಡಕ್ಕೆ ಭದ್ರ ಬುನಾದಿ ಒದಗಿಸಿಕೊಟ್ಟರು. ಕೊನೆಗೆ ಭಾರತ ತಂಡವು ಬಾಂಗ್ಲಾದೇಶ ತಂಡಕ್ಕೆ 143 ರನ್ ಗಳ ಗುರಿ ನೀಡಿತು.

ಗುರಿ ಬೆನ್ನತ್ತಿದ್ದ ಬಾಂಗ್ಲಾದೇಶ ತಂಡಕ್ಕೆ ಎರಡನೇ ಓವರ್ ನಲ್ಲಿ ಶೈಕ ಪಾಂಡೆ ರವರು, ಆರಂಭಿಕ ಆಟಗಾರ್ತಿ ಶಮೀಮಾ ರವರನ್ನು ಪೆವಿಲಿಯನ್ಗೆ ಕಳುಹಿಸಿದರು. ಇದಾದ ಬಳಿಕ ನಡೆದದ್ದು ಭಾರತದ ಭರವಸೆಯ ಬೌಲರ್ ಪೂನಂ ಯಾದವ್ ರವರ ಸ್ಪಿನ್ ಮ್ಯಾಜಿಕ್. ಹೌದು, ಪಂದ್ಯವು ಇನ್ನೇನು ಬಾಂಗ್ಲಾದೇಶದ ಕಡೆ ಕೊಂಚ ವಾಲುತ್ತಿದೆ ಎಂದರೇ ಪ್ರತಿ ಬಾರಿ ಬಾಲ್ ಕೈಗೆತ್ತುಕೊಳ್ಳುತ್ತಿದ್ದ ಪೂನಂ ಯಾದವ್ ರವರು ಪಂದ್ಯದ ವಿವಿಧ ಹಂತಗಳಲ್ಲಿ ಬೋಲ್ ಮಾಡಿ ಬಾಂಗ್ಲಾದೇಶ ವನಿತೆಯರ 3 ಪ್ರಮುಖ ವಿಕೆಟ್ ಪಡೆದು ಕೊಂಡರು. ಈ ಮೂಲಕ ಇತರ ಬೌಲರ್ಗಳ ಸಹಾಯದೊಂದಿಗೆ ಬಾಂಗ್ಲಾದೇಶ ತಂಡವನ್ನು ಕೇವಲ 124 ರನ್ನುಗಳಿಗೆ ಕಟ್ಟಿ ಹಾಕಿ, ಭಾರತೀಯ ವನಿತೆಯರು 18 ರನ್ ಗಳ ಜಯ ದಾಖಲಿಸಿದ್ದಾರೆ.