ಕಾಶ್ಮೀರ ಸಮಸ್ಯೆಗೆ ಶಾಶ್ವತ ಪರಿಹಾರ ಸೂಚಿಸಿದ ಭಾರತೀಯ ಕ್ರಿಕೆಟ್ ಲೆಜೆಂಡ್ ಗೌತಮ್ ಗಂಭೀರ್!

ಕೆಲದಿನಗಳಿಂದ ಕಾಶ್ಮೀರ ಕಣಿವೆಯಲ್ಲಿ ಭಾರತೀಯ ಸೇನೆ ಹಾಗೂ ಪ್ರತ್ಯೇಕವಾದಿಗಳ ನಡುವೆ ಘರ್ಷಣೆ ನಡೆಯುತ್ತಿದ್ದು CRPF ವಾಹನಗಳ ಮೇಲೆ ಕಲ್ಲು ತೂರುವುದು ಅಧಿಕವಾಗಿದೆ. ದಿನಗಳ ಹಿಂದೆ ಈ ಕಲ್ಲು ಹೊಡೆಯುವವರು ಎಷ್ಟು ಉಪಟಳ ಕೊಟ್ಟಿದ್ದರು ಅಂದರೆ ನಮ್ಮ ಸೈನಿಕರು ಬೇರೆ ದಾರಿಯಿಲ್ಲದೇ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಕಲ್ಲು ಹೊಡೆಯುವವರ ಮೇಲೆಯೇ ಜೀಪ್ ಹತ್ತಿಸಬೇಕಾಗಿ ಬಂತು.

ಇಷ್ಟೆಲ್ಲ ಆದರೂ ಕೂಡಾ CRPF ಮೇಲೆ‌ ಕಲ್ಲು ಹೊಡೆಯುವುದು ಹಾಗು ಗ್ರೇನೆಡ್ ದಾಳಿ ನಿಂತಿರಲಿಲ್ಲ. ಕಾಶ್ಮೀರ ಪೋಲಿಸರು ಸೇನೆಯ ಮೇಲೆ ಕೇಸು ಕೂಡಾ ದಾಖಲಿಸಿದರು. ಸೇನೆಗೆ ಬೆಂಬಲವಾಗಿ ನಿಂತವರು ಭಾರತೀಯ ಕ್ರಿಕೆಟ್ ನ‌ ಮಾಜಿ ಉಪ ಕಪ್ತಾನ ಗೌತಮ್ ಗಂಭೀರ್.

ಸರಣಿ ಟ್ವೀಟ್ ಮೂಲಕ ಸಾಮಾಜಿಕ ಜಾಲತಾಣ ಟ್ವಿಟರ್ ಅಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡರು ಹಾಗು ಕಾಶ್ಮೀರ ಸಮಸ್ಯೆಗೆ ಪರಿಹಾರವನ್ನೂ ಸೂಚಿಸಿದರು.(ಅವರ ಟ್ವೀಟ್ ಗಳನ್ನೂ ಕನ್ನಡದಲ್ಲಿ ನಾವು ಬರೆದಿದ್ದೇವೆ).

ಮುಂದಿನ ಲೋಕಸಭಾ ಚುನಾವಣೆ ಸ್ಪರ್ಧಿಸುವ ಪ್ರತಿಯೊಬ್ಬ ಅಭ್ಯರ್ಥಿಗಳು ತಮ್ಮ ತಮ್ಮ ಪರಿವಾರ ಸಹಿತ ಕಾಶ್ಮೀರ ದಲ್ಲಿ ಒಂದು ವಾರ ವಾಸಿಸಬೇಕು ಅದೂ ಕೂಡಾ ಯಾವುದೇ ಪೋಲಿಸ್ ಅಥವಾ ಸೇನೆಯ ಪ್ರೊಟೆಕ್ಷನ್ ಇಲ್ಲದೆಯೇ. ಅವಾಗ ಗೊತ್ತಾಗುತ್ತದೆ ಈ ರಾಜಕಾರಣಿಗಳಿಗೆ ಕಾಶ್ಮೀರದ ಸಮಸ್ಯೆ ಹಾಗು ಸೈನಿಕರು ಅನುಭವಿಸುವ ಸಮಸ್ಯೆ

ಇನ್ನೊಂದು ಟ್ವೀಟ್ ಅಲ್ಲಿ ಅವರು ಈ ಪ್ರತ್ಯೇಕವಾದಿಗಳು ಬಳಿ ಮಾತಾನಾಡಲು ಏನು ಉಳಿದಿಲ್ಲ ಅವರೊಂದಿಗೆ ಶಾಂತಿ ಮಾತುಕತೆಗೆ ಏನೂ ಉಳಿದಿಲ್ಲಾ. ರಾಜಕೀಯ ಇಚ್ಛಾಶಕ್ತಿ ಇರಬೇಕು ಈ ಪಕ್ಷಗಳಿಗೆ ಸೇನೆಗೆ ಎಲ್ಲ ಅಧಿಕಾರ ಕೊಡಬೇಕು ಆಗ ಕಾಶ್ಮೀರದಲ್ಲಿ ಶಾಂತಿ ಖಂಡಿತವಾಗಿ ನೆಲೆಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು

ಪ್ರತಿ ಬಾರಿಯೂ ಸೇನೆಯ ಬೆಂಬಲಕ್ಕೆ ನಿಲ್ಲುವ ಈ ಲೆಜೆಂಡ್ ರವರ ಹೇಳಿಕೆಗೆ ನಿಮ್ಮ ಬೆಂಬಲವಿದ್ದರೆ ಶೇರ್ ಮಾಡಿ

ArmycricketGautham Gambhir
Comments (0)
Add Comment