ಕ್ರಿಕೆಟ್ ಜಗತ್ತಿಗೆ ಕರಾಳ ದಿನ: ಎಬಿಡಿ ವಿದಾಯ

ದಕ್ಷಿಣ ಆಫ್ರಿಕಾ ಸೂಪರ್ ಸ್ಟಾರ್ ಬ್ಯಾಟ್ಸ್’ಮನ್ ಎಬಿ ಡಿವಿಲಿಯರ್ಸ್ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಗುಡ್’ಬೈ ಹೇಳಿದ್ದಾರೆ. ಇದು ನಿವೃತ್ತಿ ಘೋಷಿಸಲು ಸರಿಯಾದ ಸಮಯವೆಂದು ಭಾವಿಸಿ ಎಬಿಡಿ ಈ ತೀರ್ಮಾನಕ್ಕೆ ಬಂದಿದ್ದು, 14 ವರ್ಷಗಳ ವರ್ಣರಂಜಿತ ಅಂತರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ.

34 ವರ್ಷದ ಎಬಿಡಿ ವಿಲಿಯರ್ಸ್ 14 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಮೂರು ಮಾದರಿಯಲ್ಲೂ ಆಡಿದ್ದರು. ದಕ್ಷಿಣ ಆಫ್ರಿಕಾ ಪರ 114 ಟೆಸ್ಟ್, 228 ಏಕದಿನ ಮತ್ತು 78 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದಾರೆ.

ನಾನು ತಕ್ಷಣಕ್ಕೆ ಜಾರಿಯಾಗುವಂತೆ ಎಲ್ಲಾ ಮಾದರಿಯ ಅಂತರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸುತ್ತಿದ್ದೇನೆ. 114 ಟೆಸ್ಟ್, 228 ಏಕದಿನ ಹಾಗೂ 78 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿರುವ ನನಗೆ ನಿವೃತ್ತಿ ಘೋಷಿಸಲು ಸರಿಯಾದ ಸಮಯವಾಗಿದೆ. ಬೇರೆಯವರಿಗೆ ಅವಕಾಶ ಒದಗಿಸಲು ಇದು ಸರಿಯಾದ ಸಮಯ ಜತೆಗೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ದಣಿದಿದ್ದೇನೆ ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿವಿಲಿಯರ್ಸ್, ಆರ್‍ಸಿಬಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ ಪ್ಲೇಆಫ್‍ಗೇರುವಲ್ಲಿ ತಂಡ ಎಡವಿತ್ತು ಆದ್ದರಿಂದಲೇ ನನಗೆ ಬೇಸರವಾಗಿದೆ ಎಂದು ತಿಳಿಸಿದ್ದ ಎಬಿಡಿ, ಹಸಿರು ಹಾಗೂ ಚಿನ್ನದ ಧಿರಿಸಿನಲ್ಲಿ (ದಕ್ಷಿಣ ಆಫ್ರಿಕಾ) ತಂಡದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಯಿಂದಲೇ ಅವರು ಕ್ರಿಕೆಟ್‍ನ ಎಲ್ಲಾ ಮಾದರಿಗೂ ನಿವೃತ್ತಿ ಘೋಷಿಸಿದ್ದಾರೆಂಬುದು ಅವರ ಮಾತಿನಲ್ಲಿ ಸ್ಪಷ್ಟವಾಗಿತ್ತು.

2005ರ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದ ಡಿವಿಲಿಯರ್ಸ್ 228 ಪಂದ್ಯಗಳನ್ನು ಆಡಿದ್ದು 218 ಇನ್ನಿಂಗ್ಸ್ ನಿಂದ ಒಟ್ಟು 9577 ರನ್ ಸಿಡಿಸಿದ್ದಾರೆ. ಇನ್ನು 78 ಟಿ20 ಪಂದ್ಯವಾಡಿರುವ ಎಬಿಡಿ 75 ಇನ್ನಿಂಗ್ಸ್ ಗಳಿಂದ 1672 ರನ್ ಗಳಿಸಿದ್ದಾರೆ.

ನಿವೃತ್ತಿ ಘೋಷಿಸಿರುವ ನಿರ್ಧಾರ ಕಠಿಣವಾಗಿದ್ದರೂ ಕೂಡ ಇತ್ತೀಚೆಗೆ ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಸರಣಿಗಳನ್ನು ಜಯಿಸಿರುವುದು ನನ್ನ ಕ್ರಿಕೆಟ್ ಜೀವನದಲ್ಲಿ ಚಿರಸ್ಮರಣೀಯವಾಗಿರುತ್ತದೆ ಎಂದರು. ಮುಂದಿನ ವರ್ಷ ಏಕದಿನ ವಿಶ್ವಕಪ್ ಟೂರ್ನಿ ನಡೆಯುವುದರ ಮುಂಚೆಯೇ ದಕ್ಷಿಣ ಆಫ್ರಿಕಾ ತಂಡಕ್ಕೆ ಎಬಿಡಿ ನಿವೃತ್ತಿ ಘೋಷಿಸಿರುವುದೂ ದೊಡ್ಡ ಆಘಾತವಾಗಿದೆ. ನಾನು ನಿವೃತ್ತಿ ಘೋಷಿಸಿದ್ದರೂ ಕೂಡ ದಕ್ಷಿಣ ಆಫ್ರಿಕಾದ ನಾಯಕ ಡುಪ್ಲೆಸಿಸ್ ಇನ್ನೂ ಹೆಚ್ಚಿನ ಸರಣಿಗಳನ್ನು ಗೆಲ್ಲುವುದರೊಂದಿಗೆ ವಿಶ್ವಕಪ್‍ನಲ್ಲಿ ಮಿಂಚುವಂತಾಗಲಿ ಎಂದು ಹಾರೈಸಿದರು.

ಆರ್ ಸಿ ಬಿ ತಂಡದಲ್ಲಿ ಮುಂದುವರಿಯಲಿದ್ದೇನೆ ಎಂದು ಹೇಳಿದರು

abdcricketrcbretiresportSportsಕ್ರಿಕೆಟ್ ಜಗತ್ತಿಗೆ ಕರಾಳ ದಿನ: ವಿಧಾಯ
Comments (0)
Add Comment