ವಿಚಿತ್ರ: ಕಾಂಗ್ರೆಸ್ ನಗರಪಾಲಿಕೆ ಸಂಸದರು ಬಿ ಜೆ ಪಿ ಅಭ್ಯರ್ಥಿಯ ಪರವಾಗಿ ಪ್ರಚಾರ

ನಿಮಗೆ ವಿಚಿತ್ರ ಅನುಸುತ್ತಿದೆಯೇ? ಹೌದು ಸುದ್ದಿ ಕೇಳಿದ ಪ್ರತಿಯೊಬ್ಬರು ಇದೆ ರೀತಿ ಪ್ರತಿಕ್ರಯಿಸುತ್ತಾರೆ. ನೀವು ಕೇಳುತ್ತಿರುವುದು ಸತ್ಯ, ಬಿ ಜೆ ಪಿ ಅಭ್ಯರ್ಥಿಯ ಪರವಾಗಿ ಕಾಂಗ್ರೆಸ್ ನವರು ಪ್ರಚಾರ ಮಾಡುತ್ತಿದ್ದಾರೆ. ಅದು ಕೇವಲ ಕಾರ್ಯಕರ್ತರು ಅಲ್ಲ ಬದಲಾಗಿ ಅಧಿಕಾರದಲ್ಲಿರುವ ನಗರಪಾಲಿಕೆ ಸದಸ್ಯರು.

ಎಲ್ಲರಿಯೂ ತಿಳಿದಿರುವ ಹಾಗೆ ಚುನಾವಣೆಗೆ ಕೆಲವೇ ಗಂಟೆಗಳು ಬಾಕಿ ಉಳಿದಿದೆ. ರಾಜ್ಯದ ಅಧಿಕಾರಕ್ಕಾಗಿ ಪ್ರತಿ ಪಕ್ಷಗಳು ಪ್ರಚಾರ ನಡೆಸುತ್ತಿವೆ. ವಿರೋಧ ಪಕ್ಷಗಳ ಮೇಲೆ ವಾದ ವಿವಾದ ಎಲ್ಲ ಸಾಮಾನ್ಯವಾಗಿದೆ. ಕಾಂಗ್ರೆಸ್ ಮತ್ತು ಬಿ ಜೆ ಪಿ ಪಕ್ಶಗಳ ವಾಕ್ಸಮರ ತಾರಕಕ್ಕೇರಿದೆ, ಇಂತಹ ಸಮಯದಲ್ಲಿ ಒಂದು ವಿಚಿತ್ರ ಸುದ್ದಿಯೊಂದನ್ನು ನಾವು ನಿಮ್ಮ ಮುಂದೆ ಇಡುತ್ತಿದ್ದೇವೆ.

ಇದಕ್ಕೆ ಕಾರಣಗಳು ಕೇಳಿದರೆ ನೀವು ಕಾಂಗ್ರೆಸ್ ಸಂಸದರಿಗೆ ಶಹಬ್ಬಾಸ್ ಎನ್ನುತ್ತೀರಿ. ಅಷ್ಟಕ್ಕೂ ಈ ಘಟನೆಗೆ ಸಾಕ್ಷಿಯಾದ ಸ್ಥಳ ಯಾವುದು?

ಅಚ್ಚರಿ ಪಡಬೇಡಿ, ಬೆಳಗಾವಿ ಯಲ್ಲಿ ಈ ಘಟನೆ ನಡೆಯುತ್ತಿದೆ. ಬರೋಬ್ಬರಿ ಕಾಂಗ್ರೆಸ್‌, ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಬೆಂಬಲಿತ 20 ನಗರಪಾಲಿಕೆ ಸದಸ್ಯರು, 10 ಮಂದಿ ಮಾಜಿ ಸದಸ್ಯರು ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಿಲ ಪರ ಪ್ರಚಾರ ನಡೆಸುತ್ತಿದ್ದಾರೆ.ಇಲ್ಲಿನ ಸದಸ್ಯರು ಭಾಷೆ ಮತ್ತು ಪಕ್ಷದ ಹಂಗನ್ನು ತೊರೆದು ಪ್ರಚಾರ ಮಾಡುತ್ತಿದ್ದಾರೆ.

ಅಷ್ಟಕ್ಕೂ ಬಿ ಜೆ ಪಿ ಯನ್ನು ಬೆಂಬಲಿಸಲು ಕಾರಣಗಳೇನು? ಇದಕ್ಕೆಲ್ಲಾ ಒಂದೇ ಕಾರಣ ಬೆಳಗಾವಿ ಉಳಿಯಬೇಕು ಮತ್ತು ಬೆಳೆಯಬೇಕು ! ಕೆಳಗಡೆ ಓದಿ.

೧೦ ವರ್ಷಗಳಿಂದ ಕಾಂಗ್ರೆಸ್ ಅಧಿಕಾರದಲ್ಲಿದ್ದರು ಬೆಳಗಾವಿ ಯಾವುದೇ ಅಭಿವೃದ್ದಿ ಯನ್ನು ಕಂಡಿಲ್ಲ ಮತ್ತು ಬೆಳಗಾವಿ ನಗರ ಪಾಲಿಕೆಗೆ ಬರುವ ಅನುದಾನವೆಲ್ಲ ಕಾಂಗ್ರೆಸ್ ಶಾಸಕರು ಸ್ವಲ್ಪ ಕೆಲಸ ಮಾಡಿ ಹೆಸರುವಾಸಿಯಾಗಲು ಬಯಸುತ್ತಿದ್ದಾರೆ. ಇದರಿಂದ ಬೆಳಗಾವಿ ಹಿಂದೆ ಉಳಿದಿದೆ, ಅಳಿವಿನ ಅಂಚಿನಲ್ಲಿ ಇದೆ ಮತ್ತು ನಮಗೆ ಅಧಿಕಾರವಿದ್ದರೂ ಶಾಸಕರ ಮುಂದೆ ಮಾತನಾಡಲು ಆಗುವುದಿಲ್ಲ. ಬೆಳಗಾವಿ ಉಳಿಯಬೇಕು ಅಂದರೆ ಪ್ರಜಾಪ್ರಭುತ್ವದ ಅಂಶವಿರುವ ಬಿ ಜೆ ಪಿ ಅಧಿಕಾರಕ್ಕೆ ಬರುವುದೇ ಸೂಕ್ತ ಎಂದು ಮೇಯರ್ ಹೇಳಿದ್ದಾರೆ.

ಈ ಎಲ್ಲ ಕಾರಣಗಳಿಗಾಗಿ ಪಕ್ಷ, ಭಾಷೆ ಎಂಬುವ ತಾರತಮ್ಯವಿಲ್ಲದೆ ಬಿ ಜೆ ಪಿ ಯಾ ಶಾಸಕನ್ನು ಬೆಂಬಲಿಸುತ್ತಿದ್ದೇವೆ ಎಂದು ಬಿ ಜೆ ಪಿ ಗೆ ಜೈಕಾರ ಹಾಕಿದರು

 

Comments (0)
Add Comment