BJP: ಬಿಜೆಪಿ ಪಕ್ಷದ ಸೋಲಿಗೆ ಆ ಮಹಾನ್ ನಾಯಕನೇ ಕಾರಣನ?? ಆತ ಮಾಡಿದ ತಪ್ಪಿನಿಂದ ಬಿಜೆಪಿ ಸೋಲನ್ನು ಕಂಡಿತೇ?? ಕಾರ್ಯಕರ್ತರು ಬಿಚ್ಚಿಟ್ಟ ಆ ಹೆಸರು ಏನು ಗೊತ್ತೇ??

BJP India: ಮೇ 10ನೇ ತಾರೀಕು 2023 ರಂದು ಕರ್ನಾಟಕ ರಾಜ್ಯದಾದ್ಯಂತ ನಡೆದ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷ ಮ್ಯಾಜಿಕ್ ನಂಬರನ್ನು ತಲುಪಲಿದೆ? ಕಳೆದ ಬಾರಿಯಂತೆ ಈ ಬಾರಿಯೂ ಮೈತ್ರಿ ಸರ್ಕಾರದ ರಚನೆ ಆಗುತ್ತಾ? ಅಥವಾ ಬಿಜೆಪಿ ಈ ಬಾರಿಯೂ ಜಯಭೇರಿ ಬಾರಿಸಲಿದ್ಯಾ ಎಂಬ ಸಾಕಷ್ಟು ಊಹ ಪೋಹಗಳು, ಲೆಕ್ಕಾಚಾರಗಳು ಜೋರಾಗಿ ನಡೆಯುತ್ತಿದ್ದವು. ಆದರೆ ಮೇ 13ನೇ ತಾರೀಕಿನಂದು ಬಿಡುಗಡೆಗೊಂಡಂತಹ ಫಲಿತಾಂಶ ಎಲ್ಲವನ್ನೂ ತಿರುಗ ಮುರುಗ ಮಾಡಿತು ಎಂದರೆ ತಪ್ಪಾಗಲಾರದು. ಇದನ್ನು ಓದಿ: Electricity Bill: ಈ ತಿಂಗಳು ನೀವು ಕರೆಂಟ್ ಬಿಲ್ ಕಟ್ಟಬೇಕೇ?? ಬೇಡವೇ?? ಇಲ್ಲಿದೆ ನೋಡಿ ಸರಿಯಾದ ಉತ್ತರ. ಅದು ಯಾರು ಕಟ್ಟಲೇಬೇಕು ಗೊತ್ತೇ??

ಹೌದು ಗೆಳೆಯರೇ ಯಾರು ಊಹಿಸಿದ ರೀತಿಯಲ್ಲಿ ಕಾಂಗ್ರೆಸ್ ಪಕ್ಷವು ಬಹುಮತವನ್ನು ಗಳಿಸಿದೆ. ಇದು ಕಾಂಗ್ರೆಸ್ ಪಕ್ಷಕ್ಕೆ ಎಲ್ಲಿಲ್ಲದಂತಹ ಸಂತಸವನ್ನು ತಂದಿದ್ದರೆ, ಕೇವಲ 65 ಸ್ಥಾನಗಳನ್ನು ಪಡೆದುಕೊಂಡು ಬಿಜೆಪಿ (BJP) ಮುಖಭಂಗ ಮಾಡಿಸಿಕೊಂಡಿದೆ. ಹೀಗಿರುವಾಗ ಪ್ರತಿಯೊಬ್ಬರು ಕೂಡ ತಮ್ಮ ಪಕ್ಷದ ಸೋಲಿಗೆ ಕಾರಣರಾದವರು ಯಾರು ಎಂಬ ಬೇಸರವನ್ನು ಸಾಮಾಜಿಕ ಮಾಧ್ಯಮದ ಮುಂದೆ ಹೊರಹಾಕುತ್ತಿದ್ದು, ಪಕ್ಷದ ಸೋಲಿಗೆ ಮುಖ್ಯ ಕಾರಣವಾದವರು ಮೊದಲನೆಯದಾಗಿ ಬಿ ಎಲ್ ಸಂತೋಷ್ ಎಂಬ ಹೆಸರು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತದೆ. ಹೌದು ಗೆಳೆಯರೆ ಬಿಜೆಪಿ ಪಕ್ಷದ ಸೋಲಿಗೆ ಮುಖ್ಯ ಕಾರಣ ಪಕ್ಷವೂ ಹೊಸಬರಿಗೆ ಮಣೆ ಹಾಕಿ ಹಳೆ ಪ್ರಭಾವಿ ನಾಯಕರನ್ನು ಕೈಬಿಟ್ಟಿದ್ದು..

ಮೊದಲನೆಯದಾಗಿ ಇದರ ಹಿಂದೆ ಬಿ ಎಲ್ ಸಂತೋಷ್ ಇದ್ದಾರೆ ಎಂಬುದು ಪಕ್ಷದ ಕೆಲ ನಾಯಕರು ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಅದರಂತೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿಯಿಂದ (BJP) ಕಾಂಗ್ರೆಸ್ಗೆ ಸೇರ್ಪಡೆಯಾದಾಗ ಬಿಎಲ್ ಸಂತೋಷ್ ಅವರ ವಿರುದ್ಧ ತಮ್ಮ ಟೀಕೆಯ ವಿರುದ್ಧ ವಾಗ್ದಾಳಿಗಳನ್ನು ಮಾಡಿದರು. ಅಲ್ಲದೆ ತಮಗೆ ಬಿಜೆಪಿ ವತಿಯಿಂದ ಟಿಕೆಟ್ ಸಿಗದೇ ಇದ್ದಕ್ಕೆ ಬಿ ಎಲ್ ಸಂತೋಷ್ ಮತ್ತು ಪ್ರಹ್ಲಾದ್ ಜ್ಯೋಷಿ ಯವರ ಮುಖ್ಯ ಕಾರಣ ಎಂದು ಮಾಧ್ಯಮದ ಮುಂದೆ ಗುಡುಗಿದ್ದರು. ಇದನ್ನು ಓದಿ: ಸಂಬಳ ಬಂದ ತಕ್ಷಣ ಹಣ ಖಾಲಿ ಆಗುತ್ತಿದೆಯೇ?? ಕೈ ಯಲ್ಲಿ ಹಣ ನಿಲ್ಲುತ್ತಿಲ್ಲವೇ?ಹಾಗಿದ್ದರೆ ಈ ಚಿಕ್ಕ ಕೆಲಸ ಮಾಡಿ, ಹಣ ಕೂಡಿಡುತ್ತಿರ.

ಇನ್ನು ಅಷ್ಟೇ ಅಲ್ಲದೆ ಕಳೆದ ವರ್ಷ ಗುಜರಾತ್ನಲ್ಲಿ ನಡೆದಿದ್ದಂತ ಚುನಾವಣೆಯಲ್ಲಿ ಹೊಸಬರಿಗೆ ಮಣೆ ಹಾಕಲು ಬಿಜೆಪಿ ನಿರ್ಧರಿಸಿತ್ತು, ಅಲ್ಲದೆ ಈ ಒಂದು ಪ್ರಯೋಗವು ಅಭೂತಪೂರ್ವವಾಗಿ ಯಶಸ್ವಿಯಾಗಿದ್ದು, ಅದೇ ಯೋಜನೆಯನ್ನು ನಮ್ಮ ಕರ್ನಾಟಕದಲ್ಲಿಯೂ ಪ್ರಯೋಗಿಸಲು ಬಿಎಲ್ ಸಂತೋಷ್ ಮುಂದಾದರು. ಹಳಬರಿಗೆ ಮಣೆ ಹಾಕದೆ ಹೊಸ ಮುಖಗಳನ್ನು ಜನರ ಮುಂದೆ ಪರಿಚಯ ಮಾಡಿಸಿದರು. ಇಷ್ಟು ಸಾಲದೇ ಎಂಬಂತೆ, ಯೆಡಿಯೂರಪ್ಪನವನ್ನು ಕುರ್ಚಿಯಿಂದ ಇಳಿಸಿದ ಆರೋಪ ಕೂಡ ಇವರ ಮೇಲಿದೆ. ಇಷ್ಟೆಲ್ಲ ಕಾರಣಗಳಿಂದ ಬಿಜೆಪಿ ಸೋಲುವಂತಾಯಿತು ಎಂಬುದು ಕಾರ್ಯಕರ್ತರ ವಾದವಾಗಿದೆ.

best election newsbest news electionbjpbjp updatesbjp vs congressCongresscongress updateselection 2023election live newselection live updateselection newselection predictionJDSjds updatesjds vs bjpkannada live electionkarnataka electionKarnataka Election 2023