Gruha jyothi: ಗೃಹ ಜ್ಯೋತಿ ಸ್ಕೀಮ್ ನಲ್ಲಿ ಮತ್ತಷ್ಟು ಹೊಸ ರೂಲ್ಸ್ ಸೇರಿಸಿದ ಸಿದ್ದು ಸರ್ಕಾರ- ಈ ಬಾರಿ ಯಾವ ರೂಲ್ಸ್ ಗೊತ್ತೇ?

Gruha jyothi: ನಮಸ್ಕಾರ ಸ್ನೇಹಿತರೇ ಸಿದ್ದರಾಮಯ್ಯ(Siddaramaiah) ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಿರುವಂತಹ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಈಗಾಗಲೇ ತಾನು ನೀಡಿರುವಂತಹ ಐದು ಪ್ರಮುಖ ಯೋಜನೆಗಳನ್ನು ಜನರಿಗೆ ತಲುಪಿಸುವ ವಿಚಾರದಲ್ಲಿ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದು ಅದರಲ್ಲೂ ವಿಶೇಷವಾಗಿ ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ ಪ್ರತಿಯೊಂದು ಮನೆಗಳಿಗೂ ಕೂಡ 200 ಯೂನಿಟ್ ವರೆಗೂ ಉಚಿತ ವಿದ್ಯುತ್ ಅನ್ನು ನೀಡುವಂತಹ ಕೆಲಸವನ್ನು ಇದೇ ಜುಲೈ 1 ರಿಂದ ಪ್ರಾರಂಭಿಸಿದೆ. ಇದಕ್ಕಾಗಿ ಜೂನ್ 18ರಿಂದಲೇ ಸೇವಾ ಸಿಂಧು ಪೋರ್ಟಲ್(Seva Sindhu Portal) ನಲ್ಲಿ ಅರ್ಜಿಯನ್ನು ಸಲ್ಲಿಸುವಂತಹ ಸೂಚನೆಯನ್ನು ಕೂಡ ರಾಜ್ಯ ಸರ್ಕಾರ ನೀಡಿತ್ತು.

gruha-jyothi-finalized-rules

ಅದರಲ್ಲೂ ವಿಶೇಷವಾಗಿ ಸಚಿವ ಕೆಜೆ ಜಾರ್ಜ್(KJ George) ರವರು ಪ್ರತಿಯೊಬ್ಬರಿಗೂ ಕೂಡ ಅದರಲ್ಲೂ ಕೇವಲ ಗ್ರಹಣಕೆಯ ವಿಚಾರಕ್ಕಾಗಿ ಮಾತ್ರ ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ 200 ಯೂನಿಟ್ ವರೆಗೂ ನಿಮಗೆ ಅರ್ಹ ಆಗಿರುವಂತಹ ಉಚಿತ ವಿದ್ಯುತ್ ಯೂನಿಟ್ ಅನ್ನು ನೀಡಬಹುದು ಎಂಬುದಾಗಿ ಹೇಳಿದ್ದಾರೆ. ಈಗಲೇ ನೀವು ನಿಮ್ಮ ಹತ್ತಿರದ ಸಂಬಂಧಪಟ್ಟ ಕಚೇರಿಗೆ ಹೋಗಿ ಅಥವಾ ಆನ್ಲೈನ್ ಮೂಲಕವೇ ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿಯನ್ನು ಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಿ ಎಂಬುದಾಗಿ ಹೇಳಿದ್ದಾರೆ. ಇದನ್ನು ಓದಿ: ಗಂಡ ಕಷ್ಟ ಪಟ್ಟು ಮಾಡಿದ ಆಸ್ತಿಯಲ್ಲಿ ಪತ್ನಿಗೆ ಎಷ್ಟು ಪಾಲು ಹಕ್ಕಿದೆ ಗೊತ್ತೆ? ಮಕ್ಕಳಿಗೆ, ಅಪ್ಪ, ಅಮ್ಮನ ಪಾಲು ಎಷ್ಟು ಗೊತ್ತೆ??

ಇದಕ್ಕೂ ಮುನ್ನ ಪ್ರತಿಯೊಬ್ಬರೂ ಕೂಡ ಈ ಹಿಂದೆ ಬಾಕಿ ಇರುವಂತಹ ಎಲ್ಲಾ ವಿದ್ಯುತ್ ಬಳಕೆಯ ಬಾಕಿ ಹಣವನ್ನು ಕಟ್ಟಬೇಕು ಅದು ಕೂಡ ಮುಂದಿನ ಮೂರು ತಿಂಗಳ ಒಳಗಾಗಿ ಕಟ್ಟಬೇಕು ಇಲ್ಲವಾದಲ್ಲಿ ನಿಮಗೆ ಉಚಿತ ವಿದ್ಯುತ್ ಯೋಜನೆ (Gruha jyothi) ಸಿಕ್ಕಿದರು ಕೂಡ ಅದು ನಿಷ್ಕ್ರಿಯಗೊಳ್ಳುತ್ತದೆ ಎಂಬುದಾಗಿ ಹೇಳಿದ್ದಾರೆ. ಒಂದು ವೇಳೆ ಇದುವರೆಗೂ ನೀವು ಅರ್ಜಿ ಸಲ್ಲಿಸದಿದ್ದಲ್ಲಿ ಚಿಂತೆ ಪಡಬೇಕಾದ ಅಗತ್ಯವಿಲ್ಲ (Gruha Jyothi Apply) ಈ ಯೋಜನೆಗೆ ಯಾವುದೇ ಡೆಡ್ ಲೈನ್ ಇಲ್ಲ ಎಂಬುದನ್ನು ಸಚಿವರು ಸ್ಪಷ್ಟಪಡಿಸಿದ್ದಾರೆ. ಆದರೆ ಈ ವಿಚಾರದಲ್ಲಿ ಪ್ರಮುಖವಾಗಿ ಒಂದು ಮಾಹಿತಿಯನ್ನು ಪ್ರತಿಯೊಬ್ಬರೂ ಕೂಡ ನೆನಪಿನಲ್ಲಿಟ್ಟುಕೊಳ್ಳಬೇಕು.

ಈ ತಿಂಗಳಲ್ಲಿ ನೀವು ಅರ್ಜಿ ಸಲ್ಲಿಸಿದರೆ ಮುಂದಿನ ತಿಂಗಳು ಉಚಿತ ವಿದ್ಯುತ್(Free Electricity) ಯೋಜನೆಗೆ ಭಾಜನರಾಗುತ್ತೀರಿ ಹಾಗೂ ಅದರ ನಂತರದ ತಿಂಗಳಲ್ಲಿ ನಿಮಗೆ ಗೃಹ ಜ್ಯೋತಿ (Gruha jyothi) ಯೋಜನೆ ಅಡಿಯಲ್ಲಿ ಉಚಿತ ವಿದ್ಯುತ್ ಅನ್ನು ಪಡೆದಿರುವಂತಹ ಕರೆಂಟ್ ಬಿಲ್ ಸಿಗುತ್ತದೆ. ಅದಾದ ಮೇಲೆ ನೀವು ಎಷ್ಟು ಉಚಿತ ವಿದ್ಯುತ್ ಗೆ ಅರ್ಹರಾಗಿದ್ದೀರೋ ಅಷ್ಟು ಉಚಿತವಾಗಿರುತ್ತದೆ ಹಾಗೂ ಅದಕ್ಕಿಂತ ಹೆಚ್ಚು ಬಳಸಿರುವಂತಹ ವಿದ್ಯುತ್ ಗಾಗಿ ನೀವು ಹಣವನ್ನು ಕಟ್ಟಬೇಕಾಗಿರುತ್ತದೆ ಎಂಬುದನ್ನು ಸ್ಪಷ್ಟಪಡಿಸುವ ಮೂಲಕ ಗುಡ್ ನ್ಯೂಸ್ ನೀಡಿದ್ದಾರೆ. ಇನ್ನು ಯಾವ ರೀತಿ ಅರ್ಜಿ ಸಲ್ಲಿಸಬೇಕು ಎನ್ನುವಂತಹ ವಿವರಗಳನ್ನು ಕೂಡ ನಾವು ಈ ಕೆಳಗೆ ನೀಡಿದ್ದೇವೆ ಅದನ್ನು ಹಿಂಬಾಲಿಸಿ. ಇದನ್ನು ಓದಿ: ಕಡಿಮೆ ಬೆಲೆಗೆ ಬಿಡುಗಡೆಯಾಗಿರುವ ಹಾರ್ಲೆ ಡೇವಿಡ್ ಸನ್ ಬೈಕ್ ನಲ್ಲಿ ಇರುವ ಟಾಪ್ 5 ವಿಶೇಷತೆ, ಬೆಲೆ ಹಾಗೂ ವಿವರಣೆ.

ಅರ್ಜಿಯನ್ನು ಸಲ್ಲಿಸಲು ನಿಮ್ಮ ಬಳಿ ವಿದ್ಯುತ್ ಬಿಲ್ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವಂತಹ ಮೊಬೈಲ್ ನಂಬರ್ ಮತ್ತು ಆಧಾರ್ ಸಂಖ್ಯೆ ಇವಿಷ್ಟು ಇರಬೇಕು. https://sevasindhugs.karnataka.gov.in/ ಇದು ಅಧಿಕೃತ ಸೇವಾ ಸಿಂಧು ವೆಬ್ಸೈಟ್ ಆಗಿದ್ದು ಇದಕ್ಕೆ ಲಾಗಿನ್ ಆದ ನಂತರ ನೀವು ಯಾವ ESCOM ಎಂಬುದನ್ನು ಆಯ್ಕೆ ಮಾಡಿದ ನಂತರ ನಿಮ್ಮ ಕರೆಂಟ್ ಬಿಲ್ ನಲ್ಲಿರುವಂತಹ 10 ನಂಬರ್ ನ ಖಾತೆಯ ನಂಬರ್ ಅನ್ನು ಟೈಪ್ ಮಾಡಿ ಸಬ್ಮಿಟ್ ಮಾಡಬೇಕು.

ನಿಮ್ಮ ಸ್ವಂತ ಮನೆ ಹಾಗೂ ಬಾಡಿಗೆ ಮನೆಯ ಆಪ್ಷನ್ ಅನ್ನು ಕೂಡ ಅಲ್ಲಿ ನೀಡಲಾಗುತ್ತದೆ ಅಲ್ಲಿ ನಿಮ್ಮ ಮನೆ ಯಾವ ವಿಭಾಗಕ್ಕೆ ಸೇರಿದ್ದು ಎನ್ನುವುದನ್ನು ಆಯ್ಕೆ ಮಾಡಿ. ಇದಾದ ನಂತರ ಆಧಾರ್ ಕಾರ್ಡ್(Aadhar Card) ನಲ್ಲಿರುವಂತಹ ನಿಮ್ಮ 12 ನಂಬರ್ ಗಳನ್ನು ಟೈಪ್ ಮಾಡಿ. ಇದಾದ ನಂತರ ಆಧಾರ್ ಕಾರ್ಡ್ ಗೆ ರಿಜಿಸ್ಟರ್ ಆಗಿರುವಂತಹ ನಂಬರ್ ಅನ್ನು ಟೈಪ್ ಮಾಡಿ ಹಾಗೂ ನಿಮ್ಮ ಆ ಮೊಬೈಲ್ ನಂಬರಿಗೆ OTP ಬರುತ್ತದೆ. ಅದನ್ನು ಟೈಪ್ ಮಾಡಿ ಸಬ್ಮಿಟ್ ಮಾಡಿದರೆ ಸಾಕು ನಿಮ್ಮ ಅರ್ಜಿ ಸ್ವೀಕೃತವಾಗುತ್ತದೆ ಎಂಬುದಾಗಿ ತಿಳಿದು ಬರುತ್ತದೆ ಹಾಗೂ ಅದನ್ನು ನೀವು PDF ಫೈಲ್ ರೂಪದಲ್ಲಿ ಡೌನ್ಲೋಡ್ ಕೂಡ ಮಾಡಿಕೊಳ್ಳಬಹುದಾಗಿತ್ತು ಇದನ್ನು ಮುಂದೆ ಯಾವುದಾದರೂ ಅತ್ಯಗತ್ಯವಾದ ಸಂದರ್ಭದಲ್ಲಿ ಬಳಸಿಕೊಳ್ಳಬಹುದಾಗಿ.

Gruha jyothigruha jyothi karnatakagruha jyothi karnataka schemegruha jyothi rules and regulationsgruha jyothi schemegruha jyothi scheme last dategruha jyothi seva sindhuKannada Newskannada top newsnews in kannadanews kannadatop news channeltop news kannada