Exit Poll 2023: ಕೊನೆಗೂ ಬಯಲಾಯ್ತು ಚುನಾವನ್ನೊತ್ತರ ಸಮೀಕ್ಷೆ- ಸರ್ಕಾರ ಈ ಬಾರಿ ಯಾರದ್ದು ಗೊತ್ತೇ?? ಇದೆ ಫೈನಲ್ ಹಾ??

Exit Poll 2023 Karnataka Election: ನಮಸ್ಕಾರ ಸ್ನೇಹಿತರೇ ಕರ್ನಾಟಕ ಚುನಾವಣಾ ಇತಿಹಾಸದಲ್ಲಿ ಇಂದೆಂದೂ ಕಾಣದಂತಹ ಪೈಪೋಟಿ ಕಂಡು ಬಂದಂತಹ ವಿಧಾನಸಭಾ ಚುನಾವಣೆ ಕೊನೆಗೂ ಮುಕ್ತಾಯವಾಗಿದೆ. ಮೂರು ಪಕ್ಷಗಳು ಅಧಿಕಾರವನ್ನು ಹಿಡಿಯುವ ಜಿದ್ದಾಜಿದ್ದಿನ ಪೈಪೋಟಿ ಈ ಬಾರಿ ಕಂಡುಬಂದಿದ್ದು, ಅದರಲ್ಲೂ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ, ಇದರ ನಡುವೆ ಜೆಡಿಎಸ್ ಪಕ್ಷ ಹೇಗಾದರೂ ಮಾಡಿ ರಾಷ್ಟ್ರೀಯ ಪಕ್ಷಗಳಿಗಿಂತ ಹೆಚ್ಚು ಸೀಟುಗಳನ್ನು ಪಡೆದುಕೊಳ್ಳುವ ಉತ್ಸಾಹದೊಂದಿಗೆ ಪಂಚರತ್ನ ಯಾತ್ರೆಯನ್ನು ಕೂಡ ಮಾಡಿ ಮುಗಿಸಿತ್ತು. ಆದರೆ ಮತದಾರ ಒಲವು ಯಾವ ಪಕ್ಷದ ಕಡೆ ಇದೆ ಎಂಬುದು ಸ್ಪಷ್ಟವಾಗಿ ಇಲ್ಲಿಯವರೆಗೂ ತಿಳಿದು ಬಂದಿಲ್ಲ.

ಕೆಲವೊಂದು ವಿಚಾರಗಳಲ್ಲಿ ಕೊನೆಯ ಕ್ಷಣಗಳಲ್ಲಿ ಪಕ್ಷಗಳು ತೆಗೆದುಕೊಂಡ ನಿರ್ಧಾರಗಳಿಂದ ಭಾರಿ ಅಂತರದಲ್ಲಿ ಬದಲಾವಣೆ ಕಂಡು ಬರುತ್ತದೆ ಎಂಬ ನಿರೀಕ್ಷೆ ಇರುವ ಕಾರಣ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಖಂಡಿತವಾಗಲೂ ಕೂಡ ಕ್ಷೇತ್ರವಾರು ಸಂಖ್ಯೆಗಳಲ್ಲಿ ಹೆಚ್ಚಿನ ಬದಲಾವಣೆ ಕಂಡರೂ ಕೂಡ ಪ್ರತಿ ಕ್ಷೇತ್ರದಲ್ಲೂ ಕೂಡ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ ನಡೆಯುತ್ತಿರುವುದು ಕಂಡು ಬರುತ್ತಿದೆ. ಬಿಜೆಪಿ ಪಕ್ಷ ಹೇಗಾದರೂ ಮಾಡಿ ಅಧಿಕಾರವನ್ನು ಉಳಿಸಿಕೊಳ್ಳುವ ಆಲೋಚನೆಯಲ್ಲಿದ್ದರೇ ಕಾಂಗ್ರೆಸ್ ಪಕ್ಷ ಈ ಬಾರಿ ಕರ್ನಾಟಕವನ್ನು ಗೆದ್ದು ಮುಂದಿನ ಲೋಕಸಭಾ ಚುನಾವಣೆಗೆ ಅಡಿಪಾಯ ಹಾಕಿಕೊಳ್ಳುವ ಆಲೋಚನೆಯಲ್ಲಿ ಹೋರಾಟ ಮಾಡುತ್ತಿದೆ. ಇದನ್ನು ಓದಿ- ಇನ್ನು 18 ತಿಂಗಳು ಈ ರಾಶಿಗಳನ್ನು ಟಚ್ ಮಾಡೋಕೆ ಕೂಡ ಆಗಲ್ಲ. ಇವರೇ ಕಿಂಗ್. ರಾಹು ಕಾಪಾಡುವುದು ಯಾರನ್ನು ಗೊತ್ತೇ? ಯಾವ ರಾಶಿಗಳಿಗೆ ಅದೃಷ್ಟ ಗೊತ್ತೆ?

ಈ ಎಲ್ಲಾ ಆಲೋಚನೆಗಳ ನಡುವೆ ಜೆಡಿಎಸ್ ಪಕ್ಷ ಕಳೆದ ಬಾರಿಗಿಂತ ಹೆಚ್ಚಿನ ಪ್ರಚಾರ ಸಭೆಗಳಲ್ಲಿ ಭಾಗಿಯಾಗಿದ್ದರೂ ಕೂಡ ಅದ್ಯಾಕೋ ಮತದಾರರ ಒಲವು ಕೊಂಚ ಕಡಿಮೆಯಾದಂತೆ ಬಾಸವಾಗಿದೆ, ಇದಕ್ಕೆ ತಕ್ಕಂತೆ ಕುಮಾರಸ್ವಾಮಿ ರವರು, ಅನಿತಾ ಕುಮಾರಸ್ವಾಮಿ ಹಾಗೂ ನಿಖಿಲ್ ರವರು ಮಾತನಾಡಿ ಈ ಬಾರಿ ದುಡ್ಡಿನ ಚುನಾವಣೆ ನಡೆದಿದೆ ಎಂದು ಫಲಿತಾಂಶಕ್ಕೂ ಮುನ್ನವೇ ಘೋಷಣೆ ಮಾಡಿರುವುದು ಜೆಡಿಎಸ್ ಪಕ್ಷದ ಸಂಖ್ಯೆಗಳು ಕಡಿಮೆಯಾಗ ಬಹುದು ಎಂದು ರಾಜಕೀಯ ಪಂಡಿತರು ವಿಶ್ಲೇಷಣೆ ನೀಡಿದ್ದಾರೆ. ಯಾಕೆಂದರೆ ಮತದಾನ ಆರಂಭವಾದ ಎರಡುರಿಂದ ಮೂರು ಗಂಟೆಗಳಲ್ಲಿ ಕುಮಾರಸ್ವಾಮಿ ರವರು ಈ ರೀತಿ ಹೇಳಿಕೆ ನೀಡಿರುವುದು ನಿಜಕ್ಕೂ ಜೆಡಿಎಸ್ ಪಾಳಯದಲ್ಲಿ ಆತಂಕ ಮೂಡಿಸಿದೆ. Exit Poll 2023 Karnataka Election

ಇನ್ನು ಈ ಎಲ್ಲಾ ಲೆಕ್ಕಚಾರಗಳ ನಡುವೆ ಇದೀಗ ಕರ್ನಾಟಕ ವಿಧಾನಸಭಾ ಚುನಾವಣೆಯ ಎಕ್ಸಿಟ್ ಪೋಲ್ಗಳ ಅಂಕಿ ಅಂಶಗಳು ಬಯಲಾಗಿದ್ದು ಯಾವ ಯಾವ ಸಮೀಕ್ಷೆಗಳಲ್ಲಿ ಯಾವ ಯಾವ ಸರ್ಕಾರ ಬರಲಿದೆ ಹಾಗೂ ಯಾವ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡು ಅಧಿಕಾರವನ್ನು ರಚಿಸಬಹುದಾದ ಸಾಧ್ಯತೆಗಳು ಇವೆ ಎಂಬುದನ್ನು ಹೇಳುತ್ತಿವೆ ಎಂಬುದರ ಸಂಪೂರ್ಣ ವಿವರಣೆಯನ್ನು ನಾವು ನೀಡುತ್ತೇವೆ ಕೇಳಿ.ಸ್ನೇಹಿತರೆ ಈ ಕೆಳಗೆ ನೀಡುವ ಎಲ್ಲಾ ಎಕ್ಸಿಟ್ ಪೋಲ್ಗಳ ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ನಮ್ಮ ತಂಡದ ಯಾವುದೇ ಸದಸ್ಯರು ಭಾಗಿಯಾಗಿಲ್ಲ, ಕೇವಲ ಕೆಲವೊಂದು ಪ್ರತಿಷ್ಠಿತ ಸಂಸ್ಥೆಗಳು ನೀಡಿರುವ ಅಂಕಿ ಅಂಶಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಒಂದು ವೇಳೆ ಈ ಅಂಕಿ ಅಂಶಗಳು ತಲೆಕೆಳಗಾಗಲಿವೆ ಹಾಗೂ ನಿಮ್ಮ ನೆಚ್ಚಿನ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬುವುದಾದರೇ ಕಾಮೆಂಟ್ ಬಾಕ್ಸ್ ನಲ್ಲಿ ನಿಮ್ಮ ಅಭಿಪ್ರಾಯವನ್ನು ತಿಳಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.

Exit Poll 2023 Karnataka Election– ಎಕ್ಸಿಟ್ ಪೋಲ್ Zee News- ಬಿಜೆಪಿ: 79-94 ಕಾಂಗ್ರೆಸ್: 103-118 ಜೆಡಿಎಸ್: 25-33, ಇನ್ನು ರಿಪಬ್ಲಿಕ್ ಸಮೀಕ್ಷೆಯಲ್ಲಿ ಬಿಜೆಪಿ: 85-100 ಕಾಂಗ್ರೆಸ್: 94-108 ಜೆಡಿಎಸ್: 24-38, ಇನ್ನು C-Voter ಸಮೀಕ್ಷೆಯಲ್ಲಿ ಬಿಜೆಪಿ: 83-95 ಕಾಂಗ್ರೆಸ್: 100-112 ಜೆಡಿಎಸ್: 21-29, ಇನ್ನುಸುವರ್ಣ ನ್ಯೂಸ್: ಸಮೀಕ್ಷೆಯಲ್ಲಿ ಬಿಜೆಪಿ: 94-117 ಕಾಂಗ್ರೆಸ್: 91-106 ಜೆಡಿಎಸ್: 14-24, ಇನ್ನು CGS ನ್ಯೂಸ್ ಸಮೀಕ್ಷೆಯಲ್ಲಿ ಬಿಜೆಪಿ: 114 ಕಾಂಗ್ರೆಸ್: 86 ಜೆಡಿಎಸ್: 21.

ಇನ್ನು News-Nation ನ್ಯೂಸ್ ಸಮೀಕ್ಷೆಯಲ್ಲಿ ಬಿಜೆಪಿ: 114 ಕಾಂಗ್ರೆಸ್: 86 ಜೆಡಿಎಸ್: 21. ಇನ್ನು Times-Now ನ್ಯೂಸ್ ಸಮೀಕ್ಷೆಯಲ್ಲಿ ಬಿಜೆಪಿ: 78-92 ಕಾಂಗ್ರೆಸ್: 106-120 ಜೆಡಿಎಸ್: 20-26. ಇನ್ನು Jan Ki Bat ನ್ಯೂಸ್ ಸಮೀಕ್ಷೆಯಲ್ಲಿ ಬಿಜೆಪಿ: 94-117 ಕಾಂಗ್ರೆಸ್: 91-106 ಜೆಡಿಎಸ್: 14-24. ಇನ್ನು Tv9 Bharat ನ್ಯೂಸ್ ಸಮೀಕ್ಷೆಯಲ್ಲಿ ಬಿಜೆಪಿ: 88-98 ಕಾಂಗ್ರೆಸ್: 99-109 ಜೆಡಿಎಸ್: 21-26. ಇನ್ನು matrix ನ್ಯೂಸ್ ಸಮೀಕ್ಷೆಯಲ್ಲಿ ಬಿಜೆಪಿ: 79-94 ಕಾಂಗ್ರೆಸ್: 103-118 ಜೆಡಿಎಸ್: 25-43. ಒಂದು ವೇಳೆ ಈ ಅಂಕಿ ಅಂಶಗಳು ತಲೆಕೆಳಗಾಗಲಿವೆ ಹಾಗೂ ನಿಮ್ಮ ನೆಚ್ಚಿನ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬುವುದಾದರೇ ಕಾಮೆಂಟ್ ಬಾಕ್ಸ್ ನಲ್ಲಿ ನಿಮ್ಮ ಅಭಿಪ್ರಾಯವನ್ನು ತಿಳಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.

best election newsbest news electionbjpbjp updatesbjp vs congressCongresscongress updateselection 2023election live newselection live updateselection newselection predictionExit Poll 2023JDSjds updatesjds vs bjpkannada live electionkarnataka electionKarnataka Election 2023