ಮೋದಿ ಗುಂಗಿನಿಂದ ಹೊರ ಬಂದು ಗುಜರಾತ್ ನಲ್ಲಿ ಯುವಕನಿಗೆ ಪಟ್ಟ ನೀಡಲು ತಯಾರಿ, ಈತ ಮಾತ್ರ ಬೇಡವೇ ಬೇಡ ಎಂದ ಬಿಜೆಪಿ ಭಕ್ತರು. ಯಾರು ಗೊತ್ತೇ?

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಗುಜರಾತ್ ರಾಜ್ಯದಲ್ಲಿ ಇತಿಹಾಸದಲ್ಲಿ ಎಂದು ಕಾಣದಂತೆ ಆಡಳಿತ ಪಕ್ಷದ ವಿರೋಧಿ ಅಲೆ ಇದ್ದರೂ ಕೂಡ ಬಿಜೆಪಿ ಪಕ್ಷ ಕಂಡು ಕೇಳರಿಯದಂತೆ ಗೆಲುವನ್ನು ದಾಖಲಿಸಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 156 ಸೀಟುಗಳನ್ನು ಗೆಲ್ಲುವ ಮೂಲಕ ಏಕ ಪಕ್ಷಿಯ ಗೆಲುವನ್ನು ದಾಖಲಿಸಿದೆ ಎಂದರೆ ತಪ್ಪಾಗಲಾರದು. ಅಖಾಡದಲ್ಲಿ ಮತ್ಯಾವು ಪಾರ್ಟಿಗಳು ನಿಲ್ಲದಂತೆ ಕಾಂಗ್ರೆಸ್ ಪಕ್ಷಕ್ಕೆ ವಿರೋಧ ಪಕ್ಷ ಸ್ಥಾನ ಕೂಡ ಸಿಗದ ರೀತಿ ಬಿಜೆಪಿ ಪಕ್ಷ ಗೆಲುವನ್ನು ದಾಖಲಿಸಿದೆ.

ಕಾಂಗ್ರೆಸ್ ಪಕ್ಷ ಒಂದು ವೇಳೆ ವಿರೋಧ ಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಬೇಕು ಎಂದರೆ ಕನಿಷ್ಠ 18 ಸೀಟುಗಳನ್ನು ಗೆಲ್ಲಬೇಕಿತ್ತು, ಆದರೆ ಕಳೆದ ಬಾರಿಗಿಂತ 60 ಸೀಟುಗಳನ್ನು ಕಳೆದುಕೊಂಡು ಕೇವಲ 17 ಸೀಟು ಗೆಲ್ಲುವುದರಲ್ಲಿ ಮಾತ್ರ ಕಾಂಗ್ರೆಸ್ ಪಕ್ಷ ಯಶಸ್ವಿಯಾಗಿದೆ. ಇನ್ನು ಹೀಗೆ ಗುಜರಾತ್ ನಲ್ಲಿ ಎಂದೆಂದೂ ಕಾಣದಂತಹ ಗೆಲುವನ್ನು ದಾಖಲಿಸಿರುವ ನರೇಂದ್ರ ಮೋದಿ ರವರು ತಮ್ಮ ಅಲೆಯ ಮೂಲಕ ಬಿಜೆಪಿ ಪಕ್ಷವನ್ನು ಗೆಲುವಿನ ದಡ ಸೇರಿಸಿರುವ ಸಮಯದಲ್ಲಿ ಹೊಸದೊಂದು ಚರ್ಚೆ ಶುರುವಾಗಿದೆ,

ಅದುವೇ ಮೋದಿ ಇರುವವರೆಗೂ ಬಿಜೆಪಿ ಪಕ್ಷಕ್ಕೆ ಯಾವುದೇ ರಾಜ್ಯದಲ್ಲಿ ಆಗಲಿ ತೊಂದರೆ ಇಲ್ಲ. ಆದರೆ ಒಂದು ವೇಳೆ ನರೇಂದ್ರ ಮೋದಿ ಅವರು ರಾಜಕೀಯ ನಿವೃತ್ತಿ ಪಡೆದ ನಂತರ ಒಂದು ಕಡೆ ದೇಶದಲ್ಲಿ ಮತ್ತೊಂದು ಕಡೆ ಪ್ರತ್ಯೇಕವಾಗಿ ಗುಜರಾತ್ ನಲ್ಲಿ ಯಾರು ಬಿಜೆಪಿ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸುತ್ತಾರೆ ಎಂಬ ಪ್ರಶ್ನೆಗಳು ಗಣನೀಯ ಸಂಖ್ಯೆಯಲ್ಲಿ ಕೇಳಿ ಬರುತ್ತಿವೆ. ಇನ್ನು ಬಿಜೆಪಿ ಪಕ್ಷದಲ್ಲಿ ಗೆಲುವು ದಾಖಲಿಸಿದ ನಂತರ ಗುಜರಾತ್ ನಲ್ಲಿ ನರೇಂದ್ರ ಮೋದಿ ರವರ ನಂತರ ಮುಂದಿನ ನಾಯಕತ್ವ ಯಾರು ವಹಿಸಿಕೊಳ್ಳಲಿದ್ದಾರೆ ಎಂಬುದರ ಕುರಿತು ಚರ್ಚೆಗಳು ಶುರುವಾಗಿದೆ.

ಈ ಚರ್ಚೆಯಲ್ಲಿ ಹಲವಾರು ನಾಯಕರ ಹೆಸರುಗಳು ಕೇಳಿ ಬರುತ್ತಿದೆಯಾದರೂ ಕೂಡ ಬಿಜೆಪಿ ಪಕ್ಷ ಜಾತಿವಾರು ರಾಜಕಾರಣ ಹಾಗೂ ಯುವಕರಿಗೆ ಪಟ್ಟ ನೀಡಬೇಕು ಎಂಬ ಆಲೋಚನೆಯ ಮೇರೆಗೆ ಗುಜರಾತ್ ನಲ್ಲಿ ಪ್ರಬಲ ಸಮುದಾಯವಾಗಿರುವ ಪಾಟಿದಾರ್ ಸಮುದಾಯವನ್ನು ತನ್ನಲ್ಲಿಗೆ ಇಟ್ಟುಕೊಳ್ಳಬೇಕು ಎಂಬ ಆಲೋಚನೆಯ ಮೇರೆಗೆ ಹಾರ್ಧಿಕ್ ಪಟೇಲ್ರವರಿಗೆ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನವನ್ನು ನೀಡುವ ಕುರಿತು ಚರ್ಚೆಗಳು ಆರಂಭವಾಗಿದೆ ಎಂಬುದರ ಮಾತುಗಳು ಕೇಳಿ ಬಂದಿವೆ.

ಆದರೆ ಈತನ್ ಮಧ್ಯೆ ಹಲವಾರು ಬಿಜೆಪಿ ಕಾರ್ಯಕರ್ತರು ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು ಒಂದು ಕಾಲದಲ್ಲಿ ಮೋದಿ ರವರ ವಿರುದ್ಧ ಟೀಕೆಗಳ ಬಾಣಗಳನ್ನು ಸುರಿಸಿದ್ದ ಹಾರ್ಧಿಕ್ ಪಟೇಲ್ ರವರು ಬಿಜೆಪಿ ಪಕ್ಷಕ್ಕೆ ಬಂದ ತಕ್ಷಣ ಅದೇಗೆ ರಾಜ್ಯಾಧ್ಯಕ್ಷ ಸ್ಥಾನವನ್ನು ಪಡೆದುಕೊಳ್ಳುತ್ತಾರೆ ಎಂಬ ಪ್ರಶ್ನೆಯನ್ನು ಬಿಜೆಪಿ ನಾಯಕರ ಮುಂದೆ ಇಡುತ್ತಿದ್ದಾರೆ. ಒಟ್ಟಿನಲ್ಲಿ ಬಿಜೆಪಿ ಪಕ್ಷ ಇದೀಗ ಮೋದಿ ರವರ ಗುಂಗಿನಿಂದ ಹೊರಬಂದು ಮತ್ತಷ್ಟು ನಾಯಕರನ್ನು ವಿವಿಧ ಕಡೆ ಆಯ್ಕೆ ಮಾಡಿ ಪಕ್ಷವನ್ನು ಬಲಗೊಳಿಸುವ ಕಾರ್ಯದತ್ತ ಹೆಜ್ಜೆ ಇಡುತ್ತಿದೆ ಎಂಬುದು ಈ ನಡೆಯಿಂದ ಸ್ಪಷ್ಟವಾಗಿ ತಿಳಿಯುತ್ತಿದೆ