ಬಿಗ್ ನ್ಯೂಸ್: ಹೊರಬಿತ್ತು ಗುಜರಾತ್ ಎಕ್ಸಿಟ್ ಪೊಲ್ಸ್: ಈ ಬಾರಿ ಅಧಿಕಾರದ ಚುಕ್ಕಾಣಿ ಯಾರಿಗೆ ಗೊತ್ತೆ?? ನಡೆಯಿತೇ ಆಪ್ ಆಟ? ಕಾಂಗ್ರೆಸ್ ಕಥೆ ವ್ಯಥೆಯಾಗಿಯೇ ಉಳಿಯಿತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ದೇಶದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಪಕ್ಷ ಅಧಿಕಾರದಲ್ಲಿ ಇದೆ. ಕೆಲವು ಪ್ರತಿ ಪಕ್ಷಗಳು ಹಾಗೂ ಕೆಲವೊಂದು ಪ್ರಾದೇಶಿಕ ಪಕ್ಷಗಳು ಕೆಲವೊಂದು ರಾಜ್ಯಗಳನ್ನು ಹಿಡಿತದಲ್ಲಿ ಇಟ್ಟುಕೊಂಡಿರುವುದನ್ನು ಬಿಟ್ಟರೆ ಉಳಿದ ಬಹುತೇಕ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಹಾಗೂ ರಾಷ್ಟ್ರೀಯ ಪಕ್ಷಗಳು ಮೋದಿ ಎಂಬ ಸುನಾಮಿಯಲ್ಲಿ ಕೊಚ್ಚಿಕೊಂಡು ಹೋಗಿವೆ. ಬಿಜೆಪಿ ವಿರುದ್ಧ ಇರುವ ಎಲ್ಲಾ ಅಸ್ತ್ರಗಳನ್ನು ಪ್ರಯೋಗ ಮಾಡುತ್ತಿದ್ದರೂ ಕೂಡ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಪಕ್ಷವನ್ನು ಮಣಿಸುವುದು ಅಸಾಧ್ಯವಾದಂತೆ ಕಾಣುತ್ತಿದೆ.

ಅದರಲ್ಲಿಯೂ ಈ ಮೊದಲು ಚುನಾವಣೆ ಎಂದ ತಕ್ಷಣ ಹಲವಾರು ಲೆಕ್ಕಾಚಾರಗಳು ಕೇಳಿ ಬರುತ್ತಿದ್ದವು. ಅದರಲ್ಲಿ ಪ್ರಮುಖವಾಗಿ ಜಾತಿ ಲೆಕ್ಕಾಚಾರ ಹಾಗೂ ಅಧಿಕಾರದ ವಿರೋಧ ಅಲೆ ಎಂಬ ಹೆಸರು ಕೇಳಿದ ತಕ್ಷಣ ಅಧಿಕಾರದಲ್ಲಿರುವ ಪಾರ್ಟಿಗಳು ನಿಜಕ್ಕೂ ಒಂದು ಕ್ಷಣ ದಂಗಾಗುತ್ತಿದ್ದವು. ಯಾಕೆಂದರೆ ಅಧಿಕಾರ ವಿರೋಧಿ ಅಲೆ ಒಮ್ಮೆ ಹುಟ್ಟಿಕೊಂಡರೆ ಖಂಡಿತ ವಿಪಕ್ಷದಲ್ಲಿ ಇರುವ ಪಕ್ಷಕ್ಕೆ ಅಧಿಕಾರಕ್ಕೆ ಏರುವುದು ಬಹುತೇಕ ಖಚಿತವಾಗುತ್ತಿತ್ತು.

ಇದರ ಲಾಭವನ್ನು ಸಂಪೂರ್ಣವಾಗಿ ಬಳಸಿಕೊಳ್ಳುತ್ತಿದ್ದ ವಿರೋಧ ಪಕ್ಷಗಳು ಅಧಿಕಾರಕ್ಕೆ ಏರುವಲ್ಲಿ ಯಶಸ್ವಿಯಾಗುತ್ತಿದ್ದವು, ಕೇವಲ ನಮಗೂ ಒಂದು ಅವಕಾಶ ನೀಡಿ ಎಂಬ ಘೋಷಣೆಯೊಂದಿಗೆ ಅಧಿಕಾರಿಕೆ ಬಹಳ ಸುಲಭವಾಗಿ ಏರುತ್ತಿದ್ದ ರಾಜಕೀಯ ಕಾಲಗಳು ಈಗ ಮುಗಿದಂತೆ ಕಾಣುತ್ತಿದೆ. ಯಾಕೆಂದರೆ ಅಧಿಕಾರ ವಿರೋಧಿ ಅಲೆ ಇದೆ ಖಂಡಿತ ವಿಪಕ್ಷಗಳಿಗೆ ಅಧಿಕಾರ ಸಿಗುತ್ತದೆ ಎಂಬ ಎಷ್ಟೋ ಲೆಕ್ಕಾಚಾರಗಳನ್ನು ಮೋದಿ ಎಂಬ ನಾಯಕ ಬಗ್ಗು ಬಡಿದಿದ್ದಾನೆ. ಅದರಲ್ಲಿಯೂ ಮೋದಿ ಸೇರಿದಂತೆ ಕೆಲವು ಬಿಜೆಪಿ ನಾಯಕರು ಪ್ರಚಾರಕ್ಕೆ ಬರುವ ಕ್ಷಣದವರೆಗೂ ವಿರೋಧ ಪಕ್ಷಗಳು ಅಧಿಕಾರ ವಿರೋಧಿ ಅಲೆಯ ಕನಸನ್ನು ಕಾಣುತ್ತಿರುತ್ತವೆ.

ಆದರೆ ಒಮ್ಮೆ ಬಿಜೆಪಿ ಪಕ್ಷದ ಮಹಾ ನಾಯಕರು ದಂಡು ಎಂಟ್ರಿಕೊಟ್ಟಲ್ಲಿ ಖಂಡಿತ ಅಧಿಕಾರ ವಿರೋಧಿ ಅಲೆ ಇದ್ದಂತೆ ಕೂಡ ಕಾಣೋದಿಲ್ಲ. ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ಇದೀಗ ನಡೆಯುತ್ತಿರುವ ಗುಜರಾತ್ ರಾಜ್ಯದ ಚುನಾವಣೆ ಈ ಮುನ್ನ ಮಧ್ಯಪ್ರದೇಶ, ಉತ್ತರಪ್ರದೇಶ ಸೇರಿದಂತೆ ಇನ್ನೂ ಹಲವಾರು ರಾಜ್ಯಗಳಲ್ಲಿ ಅಧಿಕಾರ ವಿರೋಧಿ ಅಲೆ ಹೆಸರು ಕೇಳಿ ಬಂದರೂ ಕೂಡ ಕೊನೆ ಕ್ಷಣದಲ್ಲಿ ಬಿಜೆಪಿ ಪಕ್ಷಕ್ಕೆ ಜನ ಮತ ನೀಡಿದರು. ಈ ಬಾರಿ ಒಂದು ಹೆಜ್ಜೆ ಮುಂದೆ ಹೋಗಿ ಅಧಿಕಾರ ವಿರೋಧಿ ಅಲೆಯ ಹೆಸರು ಕೇಳಿ ಬರುತ್ತಿದ್ದರೂ ಕೂಡ ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಜನರು ಬಿಜೆಪಿ ನೀಡಿದ್ದಾರೆ ಎಂಬುದು ಗುಜರಾತ್ ರಾಜ್ಯದ ಚುನಾವಣೆಯಲ್ಲಿ ಬಹಿರಂಗಗೊಂಡಿದೆ.

ಹೌದು ಸ್ನೇಹಿತರೇ ಈ ಬಾರಿ ಬಹಳ ಕುತೂಹಲ ಮೂಡಿಸಿದ ಗುಜರಾತ್ ರಾಜ್ಯದ ಚುನಾವಣೆ ಎಕ್ಸಿಟ್ ಪೋಲ್‌ನ ಅಂಕಿ ಅಂಶಗಳು ಇದೀಗ ಬಯಲಾಗಿದ್ದು ಸಾಲು ಸಾಲು ಕಾಂಗ್ರೆಸ್ ನಾಯಕರ ಶ್ರಮ ಮತ್ತೊಂದೆಡೆ ಹಲವಾರು ಉಚಿತ ಯೋಜನೆಗಳ ಘೋಷಣೆ ಮಾಡಿದ್ದ ಅರವಿಂದ್ ಕೇಜ್ರಿವಾಲ್ ಲೆಕ್ಕಾಚಾರಗಳು ಹಾಗೂ ಕೊನೆಯದಾಗಿ ಇನ್ನೂ ಬಿಜೆಪಿ ಪಕ್ಷವನ್ನು ಸೋಲಿಸುತ್ತೇವೆ ಎಂದು ವೈಯಕ್ತಿಕವಾಗಿ ಕೆಲವೊಂದು ಕ್ಷೇತ್ರಗಳಲ್ಲಿ ಶ್ರಮ ಪಟ್ಟ ನಾಯಕರ ಎಲ್ಲಾ ಲೆಕ್ಕಾಚಾರಗಳು ಉಲ್ಟಾ ಆಗಿ ಗುಜರಾತ್ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಏರುವುದು ಬಹುತೇಕ ಖಚಿತವಾಗಿದ್ದು, ಇದರ ನಡುವೆ ಕಳೆದ ಬಾರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಸೀಟುಗಳನ್ನು ಗೆಲ್ಲುವುದು ಕೂಡ ಖಚಿತವಾಗಿದ್ದು ಮೋದಿ ಎಂಬ ಸುನಾಮಿಗೆ ತಡೆಗೋಡೆ ಹಾಕುವಲ್ಲಿ ಎಲ್ಲರೂ ಕೂಡ ಸಂಪೂರ್ಣ ವಿಫಲರಾಗಿರುವುದು ಕಂಡು ಬರುತ್ತಿದೆ.

ಅದರಲ್ಲಿಯೂ ಈ ಬಾರಿ ಅರವಿಂದ ಕೇಜ್ರಿವಾಲ್ ರವರು ಮೋಡಿ ಮಾಡುತ್ತಾರೆ ಪಂಜಾಬ್ ರಾಜ್ಯಗಂಟೆ ಗುಜರಾತ್ ರಾಜ್ಯವನ್ನು ಕೂಡ ಗೆದ್ದು ಬಿಡುತ್ತಾರೆ ಎಂಬ ಮಾತುಗಳು ಕೂಡ ಕೇಳಿ ಬಂದಿದ್ದವು. ಆದರೆ ಸಾಲು ಸಾಲು ಉಚಿತ ಯೋಜನೆಗಳು ಹಾಗೂ ನರೇಂದ್ರ ಮೋದಿ ರವರ ನಾಯಕತ್ವದ ವಿರುದ್ಧ ಟೀಕೆಗಳ ಬಾಣಗಳನ್ನು ಸುರಿಸಿದ್ದರೂ ಕೂಡ ಅರವಿಂದ್ ಕೇದರಿವಾಲ್ ರವರ ಮಾತಿಗೆ ಯಾರೂ ಮನ್ನಣೆ ನೀಡದೆ ಬಿಜೆಪಿ ಪಕ್ಷದತ್ತ ವಾಲಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಒಟ್ಟಾರಿಯಾಗಿ ವಿವಿಧ ಮಾಧ್ಯಮ ಸಂಸ್ಥೆಗಳು ನಡೆಸಿದ ಅಂಕಿ ಅಂಶಗಳು ಈ ಕೆಳಗಿನಂತೆ ಇದ್ದು ನೀವು ಕೂಡ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಯಾವುದೇ ಕಾರಣಕ್ಕೂ ಕೂಡ ಮರೆಯಬೇಡಿ.

ಗುಜರಾತ್ ಸಮೀಕ್ಷೆ (ಮ್ಯಾಜಿಕ್ ನಂಬರ್ 92): 2017 ರಲ್ಲಿ ಬಿಜೆಪಿ 99 ಸ್ಥಾನ ಗೆದ್ದಿತ್ತು, ಕಾಂಗ್ರೆಸ್ 77 ಗೆದ್ದಿತ್ತು, ಆದರೆ ಈ ಬಾರಿಯ ಎಕ್ಸಿಟ್ ಪೋಲ್ ಗಳನ್ನೂ ಬಹುತೇಕ ಸಮೀಕ್ಷೆಗಳಲ್ಲಿ ಬಿಜೆಪಿ ಗೆದ್ದುಬೀಗುವುದು ಖಚಿತವಾಗಿದೆ, ರಿಪಬ್ಲಿಕ್ TV ಸಮೀಕ್ಷೆ ಪ್ರಕಾರ ಬಿಜೆಪಿ: 128-148, ಕಾಂಗ್ರೆಸ್: 30-42, ಆಪ್: 02-10, ಇತರೆ: 0-3. ಇನ್ನು ಜನ್ ಕಿ ಬಾತ್ ಪ್ರಕಾರ ಬಿಜೆಪಿ: 117-140, ಕಾಂಗ್ರೆಸ್: 34-51, ಆಪ್: 6-13, ಇತರೆ: 1/2 . ಅದರಂತೆ Times Now ಪ್ರಕಾರ ಬಿಜೆಪಿ: 139, ಕಾಂಗ್ರೆಸ್: 30, ಆಪ್: 11 ಇತರೆ: 2 ಗೆಲ್ಲಲಿವೆ ಎಂದು ತಿಳಿದು ಬರುತ್ತಿದೆ.

ಹಿಮಾಚಲ ಪ್ರದೇಶ (ಮ್ಯಾಜಿಕ್ ನಂಬರ್ 35) : ರಿಪಬ್ಲಿಕ್ TV ಸಮೀಕ್ಷೆ- ಬಿಜೆಪಿ: 34-39, ಕಾಂಗ್ರೆಸ್ 28-33, ಆಪ್: 0-1 ಇತರೆ: 0-0. ಅದರಂತೆ Times Now ಪ್ರಕಾರ ಬಿಜೆಪಿ: 38 ಕಾಂಗ್ರೆಸ್: 28 ಆಪ್: 00 ಇತರೆ: 2. ಇನ್ನು ಜನ್ ಕಿ ಬಾತ್ ಪ್ರಕಾರ ಬಿಜೆಪಿ: 32-40, ಕಾಂಗ್ರೆಸ್: 27-34 ಆಪ್: 0 ಇತರೆ: 1/2 .