ಹರಾಜಿನಲ್ಲಿ 10 ಕೋಟಿಗೂ ಅಧಿಕ ಮೊತ್ತಕ್ಕೆ ಮಾರಾಟವಾಗಲಿರುವ ಟಾಪ್ 5 ವಿದೇಶಿಗರು ಯಾರ್ಯಾರು ಗೊತ್ತೇ?? ಆರ್ಸಿಬಿ ಇವರಲ್ಲಿ ಯಾರನ್ನು ಖರೀದಿ ಮಾಡ್ಬೇಕು??

ನಮಸ್ಕಾರ ಸ್ನೇಹಿತರೇ ಐಪಿಎಲ್ ಮೆಗಾ ಆಕ್ಷನ್ ಉದ್ಯಾನನಗರಿ ಆಗಿರುವ ಬೆಂಗಳೂರಿನಲ್ಲಿ ಇದೇ ಫೆಬ್ರವರಿ 12ರಿಂದ 13 ರವರೆಗೆ ನಡೆಯುವುದು ನಿಮಗೆಲ್ಲಾ ಗೊತ್ತಿರುವ ವಿಚಾರವಾಗಿದೆ. ಐಪಿಎಲ್ ದಿನಗಳು ಹತ್ತಿರವಾಗುತ್ತಿದ್ದಂತೆ ಐಪಿಎಲ್ ನ ಜನಪ್ರಿಯತೆ ಜನರಲ್ಲಿ ಇನ್ನಷ್ಟು ಹೆಚ್ಚಾಗುತ್ತಿದೆ. ಅದರಲ್ಲೂ ಈ ಬಾರಿಯ ಹರಾಜಿನಲ್ಲಿ 1214ಕ್ಕೂ ಹೆಚ್ಚಿನ ಆಟಗಾರರು ಭಾಗವಹಿಸುತ್ತಿದ್ದಾರೆ. ಈ ಬಾರಿಯ ಹರಾಜಿನಲ್ಲಿ ಯಾರು ಅತ್ಯಂತ ಹೆಚ್ಚಿನ ಮೊತ್ತಕ್ಕೆ ಸೇಲ್ ಆಗುತ್ತಾರೆ ಎಂಬುದರ ಕುರಿತಂತೆ ಚರ್ಚೆಗಳು ನಡೆಯುತ್ತಿವೆ. ಅದರಲ್ಲೂ ಈ ಬಾರಿಯ ಐಪಿಎಲ್ ನಲ್ಲಿ ಎರಡು ಹೊಸ ತಂಡಗಳು ಕೂಡ ಸೇರಿವೆ. ಕಳೆದ ಬಾರಿ ರಾಜಸ್ಥಾನಕ್ಕೆ ಕ್ರಿಸ್ ಮೋರಿಸ್ ಅವರು 16.25 ಕೋಟಿ ರೂಪಾಯಿಗೆ ಮಾರಾಟವಾಗಿ ದಾಖಲೆಯನ್ನು ನಿರ್ಮಿಸಿದ್ದರು. ಹಾಗಿದ್ದರೆ ಈ ಬಾರಿಯ ಮೆಗಾ ಹರಾಜಿನಲ್ಲಿ ಯಾವೆಲ್ಲಾ ವಿದೇಶಿ ಆಟಗಾರರು 10 ಕೋಟಿಗಿಂತ ಅಧಿಕ ಬೆಲೆಗೆ ಮಾರಾಟವಾಗುತ್ತದೆ ಎಂಬುದನ್ನು ತಿಳಿಯೋಣ ಬನ್ನಿ.

ಡೇವಿಡ್ ವಾರ್ನರ್; ಆಸ್ಟ್ರೇಲಿಯ ಮೂಲದ ಎಡಗೈ ಆರಂಭಿಕ ಬ್ಯಾಟ್ಸ್ಮನ್ ಆಗಿರುವ ಡೇವಿಡ್ ವಾರ್ನರ್ ಅವರು ಈಗಾಗಲೇ ಐಪಿಎಲ್ ನಲ್ಲಿ ಉತ್ತಮ ದಾಖಲೆಯ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ. ಕಪ್ತಾನನಾಗಿ ಕೂಡ ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿ ಯಶಸ್ವಿಯಾಗಿ 2016 ರಲ್ಲಿ ಐಪಿಎಲ್ ಗೆದ್ದು ಕೊಟ್ಟಿದ್ದಾರೆ. ಬ್ಯಾಟ್ಸ್ಮನ್ ಜೊತೆಗೆ ನಾಯಕನಾಗಿ ಕೂಡ ಅತ್ಯುತ್ತಮ ಜವಾಬ್ದಾರಿಯ ಅನುಭವವನ್ನು ಹೊಂದಿರುವ ಡೇವಿಡ್ ವಾರ್ನರ್ ಅವರು ಈ ಬಾರಿ 10ಕೋಟಿಗೂ ಅಧಿಕ ಬೆಲೆಗೆ ಮಾರಾಟ ಆಗಲಿದ್ದಾರೆ ಎಂಬ ಬಲವಾದ ಸುದ್ದಿಗಳು ಕೇಳಿಬರುತ್ತಿವೆ.

ಮಿಚೆಲ್ ಮಾರ್ಷ್; ಟಿ20 ಸ್ಪೆಷಲಿಸ್ಟ್ ಆಗಿರುವ ಆಸ್ಟ್ರೇಲಿಯಾದ ಮೂಲದ ಆಲ್ರೌಂಡ್ ಆಗಿರುವ ಮಿಚೆಲ್ ಮಾರ್ಶ್ ರವರನ್ನು ಈ ಬಾರಿ ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ತಂಡಗಳ ನಡುವೆ ಹರಾಜು ಪ್ರಕ್ರಿಯೆಯಲ್ಲಿ ಪೈಪೋಟಿ ಏರ್ಪಡುವುದಂತೂ ಖಂಡಿತ. ಮಾಹಿತಿಗಳ ಪ್ರಕಾರ ಈ ಬಾರಿ ತಂಡಗಳು ಮಿಚೆಲ್ ಮಾರ್ಶ್ ರವರನ್ನು 10ಕೋಟಿಯ ಮೇಲೇನೇ ಖರೀದಿಸೋದು.

ಪ್ಯಾಟ್ ಕಮಿನ್ಸ್; 2020 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಪ್ಯಾಡ್ ಕಮಿಂಗ್ ರವರನ್ನು 15.50 ಕೋಟಿ ರೂಪಾಯಿಗೆ ಖರೀದಿಸಿತ್ತು. ನಂತರ ಇವರನ್ನು ತಂಡದಿಂದ ಬಿಡುಗಡೆ ಮಾಡಲಾಗಿತ್ತು. ಈಗಾಗಲೇ ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕನಾಗಿರುವ ಪ್ಯಾಟ್ ಕಮಿನ್ಸ್ ರವರು ನಂಬರ್1 ಬೌಲರ್ ಕೂಡ ಆಗಿದ್ದಾರೆ. ಈ ಬಾರಿ ಇವರನ್ನು ಖರೀದಿಸಲು ತಂಡಗಳ ನಡುವೆ ಜಿದ್ದಾಜಿದ್ದಿ ನಡೆಯುವುದು ಗ್ಯಾರೆಂಟಿ.

ಕ್ವಿಂಟನ್ ಡಿ ಕಾಕ್; ಈ ಹಿಂದೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದ ಕ್ವಿಂಟನ್ ಡಿಕಾಕ್ ರವರು ಈ ಬಾರಿಯ ಐಪಿಎಲ್ ನಲ್ಲಿ ಪ್ರಮುಖ ಆಕರ್ಷಣೆ ಆಗಲಿದ್ದಾರೆ. ಯಾಕೆಂದರೆ ಇತ್ತೀಚಿಗೆ ಇಷ್ಟ ನಡೆದಿರುವ ಭಾರತ ವಿರುದ್ಧದ ಸರಣಿಯಲ್ಲಿ ಗಮನಾರ್ಹ ಪ್ರದರ್ಶನವನ್ನು ನೀಡಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ನಿಯಮಿತ ಓವರ್ಗಳ ಪಂದ್ಯಾಟಗಳಲ್ಲಿ ಫುಲ್ ಫಾರ್ಮ್ ನಲ್ಲಿದ್ದಾರೆ. ಹೀಗಾಗಿ ತಂಡಗಳು ಕೇವಲ ಬ್ಯಾಟ್ಸ್ಮನ್ ಮಾತ್ರವಲ್ಲದೆ ವಿಕೆಟ್ ಕೀಪರ್ ದೃಷ್ಟಿಯಿಂದಲೂ ಕೂಡ ಇವರನ್ನು ಖರೀದಿಸಲು ಆಸಕ್ತಿ ತೋರಿಸಲಿವೆ.

ಟ್ರೆಂಟ್ ಬೌಲ್ಟ್; ಕಳೆದ ಸೀಸನ್ ನ ವರೆಗೂ ಕೂಡ ನ್ಯೂಜಿಲೆಂಡ್ ಮೂಲದ ಎಡಗೈ ಬೌಲರ್ ಆಗಿರುವ ಟ್ರೆಂಟ್ ಬೌಲ್ಟ್ ರವರು ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದರು. ಈ ಬಾರಿ ತಂಡಗಳು ಪ್ರಭಾವಿ ಬೌಲರ್ ಸ್ಥಾನಕ್ಕಾಗಿ ಟ್ರೆಂಟ್ ಬೋಲ್ಟ್ ಅವರನ್ನು ಖರೀದಿಸಲು ಸಂಪೂರ್ಣ ಪ್ರಯತ್ನವನ್ನು ಮಾಡಲಿವೆ. ಇವರೇ ಆ 10 ಕೋಟಿಗೂ ಅಧಿಕ ಬೆಲೆಗೆ ಮಾರಾಟವಾಗ ಬಲ್ಲಂತಹ ವಿದೇಶಿ ಆಟಗಾರರು.