ಒಂದೇ ರೇಡ್​ನಲ್ಲಿ ಎಲ್ಲರನ್ನೂ ಆಲೌಟ್ ಮಾಡಿದ ಪಟ್ನಾ ಪೈರೇಟ್ಸ್ ರೇಡರ್. ಹೇಗಿತ್ತು ಗೊತ್ತೇ ರೋಚಕ ಕಬ್ಬಡಿ ಪಂದ್ಯ??

ನಮಸ್ಕಾರ ಸ್ನೇಹಿತರೇ ಐಪಿಎಲ್ ಮುಗಿಯುತ್ತಿದ್ದಂತೆ ಭಾರತದಲ್ಲಿ ಹುಟ್ಟಿಬೆಳೆದ ಕ್ರೀಡೆಯಾಗಿರುವ ಕಬಡ್ಡಿಯ ಪ್ರೊ ಕಬಡ್ಡಿ ಲೀಗ್ ಈಗ ರಂಗೇರಿದೆ. ನಮ್ಮ ಬೆಂಗಳೂರು ಬುಲ್ಸ್ ತಂಡ ಕೂಡ ಪ್ರೊ ಕಬಡ್ಡಿ ಲೀಗ್ ನಲ್ಲಿ ಉತ್ತಮ ಪ್ರದರ್ಶನವನ್ನು ನೀಡುತ್ತ ಬರುತ್ತದೆ. ನಿನ್ನೆಯಷ್ಟೇ ಎರಡು ಪಂದ್ಯಗಳು ನಡೆದಿದ್ದವು. ಅದರಲ್ಲಿ ಎರಡು ತಂಡಗಳು ಗೆದ್ದಿದ್ದವು ಒಂದು ಪಟ್ನಾ ಪೈರೇಟ್ಸ್ ಹಾಗೂ ಇನ್ನೊಂದು ತಮಿಳು ತಲೈವಾಸ್.

ಇಂದು ನಾವು ಮಾತನಾಡಲು ಹೊರಟಿರುವುದು ಪಾಟ್ನಾ ಪೈರೇಟ್ಸ್ ತಂಡದ ಗೆಲುವಿನ ಕುರಿತಂತೆ. ಪಟ್ನಾ ಪೈರೇಟ್ಸ್ ಬೆಂಗಾಲ್ ವಾರಿಯರ್ಸ್ ತಂಡದ ವಿರುದ್ಧ ಗೆದ್ದಿದೆ. ಆರಂಭದಲ್ಲಿ ಎರಡು ತಂಡಗಳು ಕೂಡ ಸಮಬಲದ ಹೋರಾಟವನ್ನು ನಡೆಸಿದ್ದವು. ಪಟ್ನಾ ತಂಡಕ್ಕೆ ಮೋನು ಹಾಗೂ ಸಚಿನ ಅಂಕಗಳನ್ನು ತಂದರೆ, ಈ ಕಡೆ ಬೆಂಗಾಲ್ ವಾರಿಯರ್ಸ್ ತಂಡಕ್ಕೆ ಮಣಿಂದರ್ ಸಿಂಗ್ ಅಂಕಗಳನ್ನು ತರುತ್ತಾರೆ. ಐಪಿಎಲ್ ನಲ್ಲಿ ಹೇಗೆ 6 ಎಸೆತಕ್ಕೆ ಆರು ಸಿಕ್ಸರ್ ಗಳನ್ನು ಬಾರಿಸುತ್ತಾರೆ. ಅದೇ ರೀತಿ ನಿನ್ನೆ ನಡೆದ ಕಬಡ್ಡಿ ಪಂದ್ಯಾಟದಲ್ಲಿ ಕೂಡ ಇದೇ ರೀತಿಯ ಆಶ್ಚರ್ಯವೊಂದು ನಡೆದಿದೆ. ಹಾಗಿದ್ದರೆ ಈ ರೋಚಕ ಘಟನೆ ಏನು ಎಂಬುದರ ಕುರಿತಂತೆ ನಿಮಗೆ ಹೇಳಲಿದ್ದೇವೆ ತಪ್ಪದೇ ಲೇಖನಿಯನ್ನು ಕೊನೆಯವರೆಗೂ ಓದಿ.

ಹೌದು ನಿನ್ನೆ ನಡೆದ ಪಂದ್ಯಾಟದಲ್ಲಿ ಭಾಗಶಃ ಪಟ್ನಾ ಪೈರೇಟ್ಸ್ ತಂಡ ಸಾಕಷ್ಟು ಮುನ್ನಡೆಯಲಿದ್ದು ಗೆಲ್ಲುವ ಪ್ರಬಲ ತಂಡ ಆಗಿತ್ತು. ಈ ಸಂದರ್ಭದಲ್ಲಿ ಮೋನು ಗೋಯೆಟ್ ಮಾಡಿರುವ ರೈಡಿಂಗ್ ನಲ್ಲಿ ಪಟ್ನಾ ಪೈರೇಟ್ಸ್ ತಂಡ ಸಾಕಷ್ಟು ಮುನ್ನಡೆಯನ್ನು ಪಡೆದುಕೊಂಡಿತ್ತು ಎಂದರೆ ತಪ್ಪಾಗಲಾರದು. ಕೊನೆಯ ಗಳಿಗೆಯಲ್ಲಿ ಮೋನು ಗೊಯಟ್ ಮಾಡಿದ ರೈಡಿಂಗ್ ನಲ್ಲಿ ಬೆಂಗಾಲ್ ವಾರಿಯರ್ಸ್ ತಂಡದ ಅಂಕಣದಲ್ಲಿ ಇದ್ದ ಎಲ್ಲಾ ಏಳು ಆಟಗಾರರನ್ನು ಔಟ್ ಮಾಡಿದ್ದಾರೆ. ಒಟ್ಟಾರೆಯಾಗಿ ನಿನ್ನೆ ಮೋನು ಗೊಯಟ್ 16 ರೈಡಿಂಗ್ ನಿಂದ 15 ಅಂಕಗಳನ್ನು ಪಡೆದಿದ್ದಾರೆ. ಅದರಲ್ಲೂ ಎಲ್ಲರನ್ನು ಒಂದೇ ರೈಡಿಂಗ್ ನಲ್ಲಿ all-out ಮಾಡಿರುವುದು ವಿಶೇಷವಾಗಿತ್ತು.