ಟಿ20 ಕ್ರಿಕೇಟ್ ನಲ್ಲಿ ಒಂದೇ ಒಂದು ಅರ್ಧಶತಕ ಬಾರಿಸದಿದ್ದರೂ, ಐಪಿಎಲ್ ನಲ್ಲಿ ಕೋಟಿಗೆ ಹರಾಜಾದ ಟಾಪ್-5 ಆಟಗಾರರು ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಟಿ20 ಕ್ರಿಕೆಟ್ ಅಂದರೇ ಬಿರುಸಿನ ಆಟ. ಇಲ್ಲಿ ಆಟಗಾರ ಎಷ್ಟು ಹೊತ್ತು ಕ್ರೀಸ್ ನಲ್ಲಿ ಇರುತ್ತಾನೆ ಅನ್ನೋದು ಮುಖ್ಯವಾಗುವುದಿಲ್ಲ, ಎಷ್ಟು ರನ್ನು ಗಳಿಸಿರುತ್ತಾರೆ ಅನ್ನುವುದು ಮುಖ್ಯವಾಗುತ್ತದೆ. ಆಟಗಾರರ ಸ್ಟ್ರೈಕ್ ರೈಟ್ ಮೇಲೆ ಅವರ ಬೆಲೆಗಳು ಸಹ ನಿರ್ಧಾರವಾಗುತ್ತವೆ. ಆದರೇ ಅಂತರಾಷ್ಟ್ರೀಯ ಟಿ20 ಕ್ರಿಕೇಟ್ ನಲ್ಲಿ ಒಂದೇ ಒಂದು ಅರ್ಧಶತಕ ಭಾರಿಸದಿದ್ದರೂ ಐಪಿಎಲ್ ನಲ್ಲಿ ಕೋಟಿಗಳಿಗೆ ಹರಾಜಾಗಿರುವ ಟಾಪ್-5 ಆಟಗಾರರು ಈ ಕೆಳಕಂಡಂತೆ ಇದ್ದಾರೆ.

ಟಾಪ್ – 5 : ಕ್ರಿಸ್ ಲೀನ್ – ಆಸ್ಟ್ರೆಲಿಯಾದ ಈ ಆರಂಭಿಕ ಬ್ಯಾಟ್ಸಮನ್ ತಮ್ಮ ಬಿಗ್ ಹಿಟ್ ಗಳಿಂದಲೇ ಪ್ರಸಿದ್ದಿಯಾಗಿದ್ದಾರೆ. ಪವರ್ ಪ್ಲೇ ನಲ್ಲಿ ಹೆಚ್ಚು ರನ್ನುಗಳಿಸುವ ಸಾಮರ್ಥ್ಯ ಹೊಂದಿರುವ ಈ ಆಟಗಾರ, ತಮ್ಮ ಅಂತರಾಷ್ಟ್ರೀಯ ಟಿ20 ಕರಿಯರ್ ನಲ್ಲಿ ಇದುವರೆಗೂ ಒಂದೇ ಒಂದು ಅರ್ಧಶತಕ ಭಾರಿಸಿಲ್ಲ. ಇವರ ಗರಿಷ್ಠ ಸ್ಕೋರ್ 44. ಸದ್ಯ ಇವರು ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದಾರೆ.

ಟಾಪ್ -4 : ಆಂಡ್ರೆ ರಸೆಲ್ – ಪಂದ್ಯದ ದಿಕ್ಕನ್ನೆ ಬದಲಾಯಿಸಬಲ್ಲ ಈ ಕೆರಿಬಿಯನ್ ದೈತ್ಯ ಹಲವಾರು ಟಿ20 ಪಂದ್ಯಗಳನ್ನ ತಮ್ಮ ದೇಶವಾದ ವೆಸ್ಟ್ ಇಂಡಿಸ್ ತಂಡದ ಪರ ಆಡಿದ್ದಾರೆ. ಆದರೇ ಇದುವರೆಗೂ ಇವರ ಬ್ಯಾಟಿಂದ ಒಂದೇ ಒಂದು ಅರ್ಧಶತಕ ಬಂದಿಲ್ಲ. ಇವರ ಗರಿಷ್ಠ ಸ್ಕೋರ್ 47 ರನ್. ಸದ್ಯ ಇವರು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ.

ಟಾಪ್ 3 – ದಿನೇಶ್ ಕಾರ್ತಿಕ್ – ಭಾರತ ತಂಡ ತನ್ನ ಮೊದಲ ಟಿ20 ಪಂದ್ಯ ಆಡಿದ್ದು ದಕ್ಷಿಣ ಆಫ್ರಿಕಾದ ವಿರುದ್ದ 2006 ರಲ್ಲಿ. ಅಂದಿನಿಂದಲೂ ಟಿ20 ತಂಡದಲ್ಲಿರುವ ಡಿಕೆ, ಇದುವರೆಗೂ ಒಂದೇ ಒಂದು ಅರ್ಧಶತಕ ಬಾರಿಸಿಲ್ಲ. ಕೊನೆಯ ಬಾಲ್ ನಲ್ಲಿ ಸಿಕ್ಸರ್ ಬಾರಿಸಿ ತಂಡ ಗೆಲ್ಲಿಸಿದರೂ ಇವರು ಅರ್ಧ ಶತಕ ಭಾರಿಸಿಲ್ಲ. ಇವರ ಗರಿಷ್ಠ ಸ್ಕೋರ್ 48 ರನ್.

ಟಾಪ್ 2 – ಹಾರ್ದಿಕ್ ಪಾಂಡ್ಯ : ಭಾರತ ಕ್ರಿಕೇಟ್ ಕಂಡ ಯಶಸ್ವಿ ಆಲ್ ರೌಂಡರ್. ಉತ್ತಮ ಫಿನಿಶರ್ ಸಹ. ಆದರೇ ಇವರ ಬ್ಯಾಟಿನಿಂದ ಸಹ ಟಿ20 ಕ್ರಿಕೇಟ್ ನಲ್ಲಿ ಅರ್ಧ ಶತಕ ದಾಖಲಾಗಿಲ್ಲ. ಸದ್ಯ ಐಪಿಎಲ್ ನಲ್ಲಿ ಮುಂಬೈ ತಂಡ ಪ್ರತಿನಿಧಿಸುತ್ತಿದ್ದಾರೆ. ಇವರ ಗರಿಷ್ಠ ಸ್ಕೋರ್ 47 ರನ್ ಆಗಿದೆ.

ಟಾಪ್ 1 : ಬೆನ್ ಸ್ಟೋಕ್ಸ್ – ಇಂಗ್ಲೆಂಡ್ ಕಂಡ ಪ್ರತಿಭಾವಂತ ಆಲ್ ರೌಂಡರ್. ಹಲವಾರು ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡಕ್ಕೆ ಮ್ಯಾಚ್ ವಿನ್ನರ್ ಆದವರು. ಟಿ20 ತಂಡದಲ್ಲಿಯೂ ಸಹ ಇಂಗ್ಲೆಂಡ್ ತಂಡ ಪ್ರತಿನಿಧಿಸಿರುವ ಬೆನ್ ಸ್ಟೋಕ್ಸ್ ಸಹ ಟಿ20 ಕ್ರಿಕೇಟ್ ನಲ್ಲಿ ಇದುವರೆಗೂ ಒಂದೇ ಒಂದು ಅರ್ಧ ಶತಕವನ್ನು ಭಾರಿಸಿಲ್ಲ. ಇವರ ಟಿ20 ಕ್ರಿಕೇಟ್ ನ ಗರಿಷ್ಠ ಸ್ಕೋರ್ 47 ರನ್. ಈ ಆಟಗಾರರ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನ ಕಮೆಂಟ್ ಮೂಲಕ ನಮಗೆ ತಿಳಿಸಿ.