ಏನು ಸಾಮಾನ್ಯ ಚಟ್ನಿ ಬೋರ್ ಆಯ್ತಾ, ಹೊಸ ರೆಟಿಯಲ್ಲಿ ಹೋಟೆಲ್ ಶೈಲಿಯ ತೆಂಗಿನಕಾಯಿ ಚಟ್ನಿ ಟ್ರೈ ಮಾಡಿ.

ನಮಸ್ಕಾರ ಸ್ನೇಹಿತರೇ, ಇಂದು ನಾವು ಹೋಟೆಲ್ ಶೈಲಿಯಲ್ಲಿ ತೆಂಗಿನಕಾಯಿ ಚಟ್ನಿ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಹೋಟೆಲ್ ಶೈಲಿಯಲ್ಲಿ ತೆಂಗಿನಕಾಯಿ ಚಟ್ನಿ ಮಾಡಲು ಬೇಕಾಗುವ ಸಾಮಗ್ರಿಗಳು: 1 ಬಟ್ಟಲು ತೆಂಗಿನಕಾಯಿ ತುರಿ,4 ಹಸಿ ಮೆಣಸಿನಕಾಯಿ, ಸ್ವಲ್ಪ ಕೊತ್ತಂಬರಿ ಸೊಪ್ಪು, ಸ್ವಲ್ಪ ಪುದಿನ,5 – 6 ಎಸಳು ಬೆಳ್ಳುಳ್ಳಿ, ಸ್ವಲ್ಪ ಶುಂಠಿ, 1 ಚಮಚ ಎಣ್ಣೆ, ಸ್ವಲ್ಪ ಸಾಸಿವೆ, ಸ್ವಲ್ಪ ಕರಿಬೇವು, ರುಚಿಗೆ ತಕಷ್ಟು ಉಪ್ಪು.

ಹೋಟೆಲ್ ಶೈಲಿಯಲ್ಲಿ ತೆಂಗಿನಕಾಯಿ ಚಟ್ನಿ ಮಾಡುವ ವಿಧಾನ: ಮೊದಲಿಗೆ ಒಂದು ಮಿಕ್ಸಿ ಜಾರಿಗೆ 1 ಬಟ್ಟಲು ತೆಂಗಿನಕಾಯಿ ತುರಿ,4 ಹಸಿ ಮೆಣಸಿನಕಾಯಿ, ಸ್ವಲ್ಪ ಕೊತ್ತಂಬರಿ ಸೊಪ್ಪು, ಸ್ವಲ್ಪ ಪುದಿನ,5 – 6 ಎಸಳು ಬೆಳ್ಳುಳ್ಳಿ, ಸ್ವಲ್ಪ ಶುಂಠಿ,ರುಚಿಗೆ ತಕಷ್ಟು ಉಪ್ಪು ಹಾಗೂ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಂಡು ಒಂದು ಬಟ್ಟಲಿಗೆ ಹಾಕಿಕೊಳ್ಳಿ.

ಮತ್ತೊಂದು ಕಡೆ ಗ್ಯಾಸ್ ಮೇಲೆ ಒಂದು ಸಣ್ಣ ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಸಾಸಿವೆ, ಕರಿಬೇವನ್ನು ಹಾಕಿ ಒಗ್ಗರಣೆ ಮಾಡಿಕೊಂಡು ರುಬ್ಬಿಕೊಂಡ ಮಿಶ್ರಣಕ್ಕೆ ಹಾಕಿ ಮಿಕ್ಸ್ ಮಾಡಿದರೆ ಹೋಟೆಲ್ ಶೈಲಿಯಲ್ಲಿ ತೆಂಗಿನಕಾಯಿ ಚಟ್ನಿ ಸವಿಯಲು ಸಿದ್ದ.