ಈ ತರಹ ಟಮೋಟೊ ಚಟ್ನಿ ಮಾಡಿ ಇಡ್ಲಿ ದೋಸೆ ಚಪಾತಿಗೆಲ್ಲ ಸೂಪರ್ ಕಾಂಬಿನೇಷನ್

ನಮಸ್ಕಾರ ಸ್ನೇಹಿತರೇ, ಇಂದು ನಾವು ಟೊಮೇಟೊ ಚಟ್ನಿ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ನಾವು ಹೇಳುವ ರೀತಿ ಟೊಮೇಟೊ ಚಟ್ನಿ ಮಾಡಿದರೆ ಒಂದು ತಿಂಗಳಗಳ ಕಾಲ ಕೆಡುವುದಿಲ್ಲ. ಟೊಮೇಟೊ ಚಟ್ನಿ ಮಾಡಲು ಬೇಕಾಗುವ ಸಾಮಗ್ರಿಗಳು: 8 ಟೊಮೇಟೊ, 1 ಚಮಚ ಜೀರಿಗೆ, ಒಂದು ಕಾಲು ಚಮಚ ಸಾಸಿವೆ, ಅರ್ಧ ಚಮಚ ಮೆಂತ್ಯೆ, 15 – 20 ಬ್ಯಾಡಿಗೆ ಮೆಣಸಿನಕಾಯಿ, 7 – 8 ಬೆಳ್ಳುಳ್ಳಿ, ಎಣ್ಣೆ, ಸ್ವಲ್ಪ ಕರಿಬೇವು, ಸ್ವಲ್ಪ ಇಂಗು, ಸ್ವಲ್ಪ ಅರಿಶಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು.

ಟೊಮೇಟೊ ಚಟ್ನಿ ಮಾಡುವ ವಿಧಾನ: ಮೊದಲಿಗೆ ಗ್ಯಾಸ್ ಮೇಲೆ ಒಂದು ಪಾತ್ರೆಯನ್ನು ಇಟ್ಟುಕೊಂಡು ಅದಕ್ಕೆ ಟೊಮೊಟೊ ಹಾಗೂ ಟೊಮೊಟೊ ಬೇಯಲು ಬೇಕಾಗುವಷ್ಟು ನೀರನ್ನು ಹಾಕಿ ಬೇಯಲು ಬಿಡಿ. ಮತ್ತೊಂದು ಕಡೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ ಅರ್ಧ ಚಮಚ ಸಾಸಿವೆ,1 ಚಮಚ ಜೀರಿಗೆ, ಅರ್ಧ ಚಮಚ ಮೆಂತ್ಯವನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಂಡು ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿಕೊಂಡು ಒಂದು ಬಟ್ಟಲಿಗೆ ತೆಗೆದುಕೊಳ್ಳಿ.

ನಂತರ ಅದೇ ಬಾಣಲಿಗೆ ಬ್ಯಾಡಿಗೆ ಮೆಣಸಿನಕಾಯಿಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಂಡು ಒಂದು ಬಟ್ಟಲಿಗೆ ತೆಗೆದಿಡಿ. ಟೊಮೊಟೊ ಬೆಂದ ನಂತರ ಎಲ್ಲಾ ಟೊಮೊಟೊಗಳ ಮೇಲಿನ ಸಿಪ್ಪೆ ಹಾಗೂ ಒಳಗಿರುವ ಬೀಜವನ್ನು ತೆಗೆದು ಮಿಕ್ಸಿ ಜಾರಿಗೆ ಹಾಕಿಕೊಳ್ಳಿ .ನಂತರ ಇದೇ ಮಿಕ್ಸಿ ಜಾರಿಗೆ ಬ್ಯಾಡಿಗೆ ಮೆಣಸಿನಕಾಯಿ, ತೆಗೆದುಕೊಂಡ ಬೆಳ್ಳುಳ್ಳಿಯನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ ಸ್ವಲ್ಪ ಜಾಸ್ತಿ ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಇದಕ್ಕೆ ಸಾಸಿವೆ, ಕರಿಬೇವು, ರುಬ್ಬಿಕೊಂಡ ಮಸಾಲೆಯನ್ನು ಹಾಕಿ ಹಸಿವಾಸನೆ ಹೋಗುವವರೆಗೂ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಅರಿಶಿನ ಪುಡಿ, ಹಿಂದೆ ಪುಡಿಮಾಡಿದ ಪುಡಿ, ಸ್ವಲ್ಪ ಇಂಗು, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಐದು ನಿಮಿಷಗಳ ಕಾಲ ಫ್ರೈ ಮಾಡಿಕೊಂಡರೆ ಟೊಮೇಟೊ ಚಟ್ನಿ ಸವಿಯಲು ಸಿದ್ಧ.