ಬಿಗ್ ನ್ಯೂಸ್: ಕಾಂಗ್ರೆಸ್ ಮುಸ್ಲಿಂ ಓಲೈಕೆ ಮಾಡಲು ಜಾರಿಗೆ ತಂದ ಕಾಯ್ದೆಯನ್ನು ಬದಲಾಯಿಸಿ ಎಂದು ಪಿಎಂಗೆ ಪತ್ರ ಬರೆದು ಮುಸ್ಲಿಂ ಮುಖಂಡ ಹೇಳಿದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಬಾಬ್ರಿ ಮಸೀದಿ ಪ್ರಕರಣದ ತೀರ್ಪು ಹೊರಬಿದ್ದಿದ್ದು, ಮಸೀದಿಯನ್ನು ಕೆಡವಿದ್ದು ಯಾವುದೇ ಪೂರ್ವ ನಿಯೋಜಿತ ಕಾರ್ಯವಲ್ಲ ಎಂದು ಹೇಳಿ ಸಿಬಿಐ ವಿಶೇಷ ನ್ಯಾಯಾಲಯ ಕ್ಲೀನ್ ಚಿಟ್ ನೀಡಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ರವರಿಗೆ ಶಿಯಾ ಬೋರ್ಡಿನ ಮಾಜಿ ಅಧ್ಯಕ್ಷ ವಾಸಿಂ ರಿಜ್ವಿ ರವರು ಪತ್ರವೊಂದನ್ನು ಬರೆದಿದ್ದಾರೆ. ಈ ಪತ್ರ ಇದೀಗ ದೇಶದ ಎಲ್ಲೆಡೆ ಭಾರೀ ಸಂಚಲನವನ್ನು ಮೂಡಿಸಿದ್ದು, ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದು ಬರೆದ ಈ ಪತ್ರ ಬಾರಿ ಮಟ್ಟದಲ್ಲಿ ಪರ ಹಾಗೂ ವಿರೋಧದ ಹೇಳಿಕೆಗಳು ಕೇಳಿ ಬರುವಂತೆ ಮಾಡಿದೆ. ಅಷ್ಟಕ್ಕೂ ಆ ಪತ್ರದಲ್ಲಿ ಇರುವುದಾದರೂ ಏನು? ಯಾಕೆ ವಾಸಿಂ ರವರು ಈ ರೀತಿ ಪತ್ರ ಬರೆದಿದ್ದಾರೆ ಎಂಬುದರ ಸಂಪೂರ್ಣ ಡೀಟೇಲ್ಸ್ ಇಲ್ಲಿದೆ.

ಸ್ನೇಹಿತರೇ, ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಬಾಬರಿ ಮಸೀದಿ ಕೆಡವಿದ ಬಳಿಕ ಹಲವಾರು ವರ್ಷಗಳ ನಂತರ ಸುಪ್ರೀಂಕೋರ್ಟ್ ಆದೇಶದ ಮೇರೆಗೆ ರಾಮ ಮಂದಿರ ನಿರ್ಮಾಣ ವಾಗುತ್ತಿದೆ. ಇನ್ನು ಇದೇ ಸಮಯದಲ್ಲಿ ಕೇವಲ ಎರಡು ದಿನಗಳ ಹಿಂದಷ್ಟೇ ಮಧುರ ಕೃಷ್ಣನ ದೇಗುಲದ ಬಗ್ಗೆಯೂ ಧ್ವನಿ ಹುಟ್ಟಿಕೊಂಡಿದ್ದು ಅಲ್ಲಿ ಮಸೀದಿ ಇರುವ ಜಾಗ ಕೃಷ್ಣನಿಗೆ ಸೇರಿದ್ದು ಆದ್ದರಿಂದ ಆ ಜಾಗದಲ್ಲಿ ದೇಗುಲ ನಿರ್ಮಾಣ ಮಾಡಲು ಅನುಮತಿ ನೀಡಬೇಕು ಎಂದು ನ್ಯಾಯಾಲಯದ ಮೆಟ್ಟಿಲು ಏರಲು ಸಕಲ ಸಿದ್ಧತೆಗಳು ನಡೆದಿವೆ. ಇದೇ ಸಮಯದಲ್ಲಿ ಬಾಬರಿ ಮಸೀದಿಯ ತೀರ್ಪಿಗೆ ಪ್ರತಿಕ್ರಿಯಿಸುವಾಗ ಪತ್ರ ಬರೆದಿರುವ ವಾಸಿಮ್ ರವರು,

1991 ರಲ್ಲಿ ಕಾಂಗ್ರೆಸ್ ಪಕ್ಷ ಮುಸ್ಲಿಮರನ್ನು ಓಲೈಕೆ ಮಾಡಲು ದೇವಸ್ಥಾನ, ಮಸೀದಿ, ಚರ್ಚ್​​ಗಳನ್ನು ಬದಲಾಯಿಸುವಂತಿಲ್ಲ, ಒಂದು ಧರ್ಮದ ಪೂಜಾ ಸ್ಥಳವನ್ನು ಇನ್ನೊಂದು ಧರ್ಮ ಕೇಳುವಂತಿಲ್ಲ ಎಂಬ ಕಾಯ್ದೆ ಜಾರಿಯಲ್ಲಿದೆ. ಈ ಕಾಯ್ದೆ ಕೇವಲ ಮೊಘಲರು ಹಿಂದೂ ದೇವಾಲಯಗಳನ್ನು ಕೆಡವಿ ಕಟ್ಟಿದ ಮಸೀದಿಗಳನ್ನು ರಕ್ಷಿಸಲು ಎಂದು ವಾಸಿಂ ರಿಜ್ಜಿ ರವರು ಹೇಳಿದ್ದಾರೆ, ಅದೇ ಕಾರಣಕ್ಕಾಗಿ ಇದೀಗ ನರೇಂದ್ರ ಮೋದಿರವರು 1991 ರ ಕಾಯ್ದೆ ಯನ್ನು ರದ್ದುಗೊಳಿಸಿ, ದೇವಸ್ಥಾನಗಳನ್ನು ಕೆಡವಿ ನಿರ್ಮಿಸಲಾಗಿರುವ ಎಲ್ಲಾ ಮಸೀದಿಗಳನ್ನು ಕೆಡವಿ ದೇಗುಲ ನಿರ್ಮಾಣ ಕಾರ್ಯ ನಡೆಯಬೇಕು. ಇದು ಪ್ರಜಾಪ್ರಭುತ್ವ ರಾಷ್ಟ್ರ, ಮೊಘಲರು ಅಂದು ನಡೆಸಿದ ಕೃತ್ಯಗಳನ್ನು ನಾವು ಸರಿಪಡಿಸಲು ಸಾಧ್ಯವಿಲ್ಲ. ಆದರೆ ಧಾರ್ಮಿಕ ಸ್ಥಳಗಳನ್ನು ನಾವು ಹಿಂದಿರುಗಿಸುವ ಮೂಲಕ ಹಿಂದೂಗಳಿಗೆ ನ್ಯಾಯ ಒದಗಿಸಬಹುದು ಎಂದು ಪತ್ರದಲ್ಲಿ ಬರೆದಿದ್ದಾರೆ. ಈ ಪತ್ರ ಬರೆದಿದ್ದಾಗಿ ವಿಡಿಯೋ ಮಾಡಿ ಬಿಡುಗಡೆ ಮಾಡಿರುವ ರವರು ಪತ್ರ ಬರೆದಿದ್ದನ್ನು ಒಪ್ಪಿಕೊಂಡಿದ್ದಾರೆ.