ಇಮ್ರಾನ್ ಕುರ್ಚಿಯ ಬುಡಕ್ಕೆ ಬಂದು ನಿಂತ ಮೋದಿ ನಡೆ, ಪಾಕ್ ನಲ್ಲಿ ಸಂಚಲನ ಸೃಷ್ಟಿಸಿದ ಸೇನಾ ಮುಖ್ಯಸ್ಥರ ನಡೆ !

ನಮಸ್ಕಾರ ಸ್ನೇಹಿತರೇ, ಇಂದು ನಾವು ಹೇಳಲು ಹೊರಟಿರುವ ಘಟನೆಯಿಂದ ಭಾರತಕ್ಕೆ ಯಾವುದೇ ಹೆಚ್ಚಿನ ಲಾಭವಿಲ್ಲ, ಆದರೆ ಈ ಘಟನೆ ಭಾರತದ ತಾಕತ್ತನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ತೋರಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಭಾರತ ದೇಶವು ತನ್ನ ರಾಜತಾಂತ್ರಿಕ ಸಂಬಂಧಗಳಿಂದ ವಿಶ್ವದಲ್ಲಿ ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತದೆ ಎಂಬುದಕ್ಕೆ ಇದು ಸಾಕ್ಷಿ ಯಾಗಿದೆ. ಇದೀಗ ಭಾರತದ ರಾಜತಾಂತ್ರಿಕ ಸಂಬಂಧದಿಂದ ಆರಂಭವಾಗಿ, ಕೊನೆಗೆ ಇಮ್ರಾನ್ ಖಾನ್ ರವರು ಬುಡಕ್ಕೆ ಬಂದು ನಿಂತಿದೆ. ಒಂದು ವೇಳೆ ಈಗ ಪಾಕಿಸ್ತಾನದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಯಶಸ್ವಿ ಗೊಂಡರೆ ಇಮ್ರಾನ್ ಖಾನ್ ರವರು ತಮ್ಮ ಸ್ಥಾನವನ್ನು ಕಳೆದು ಕೊಳ್ಳಬೇಕಾಗುತ್ತದೆ. ಅಷ್ಟಕ್ಕೂ ನಡೆಯುತ್ತಿರುವುದಾದರೂ ಏನು ಹಾಗೂ ಸಂಪೂರ್ಣ ವಿವರಗಳಿಗಾಗಿ ಕೆಳಗಡೆ ಓದಿ.

ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಪಾಕಿಸ್ತಾನ ದೇಶವು ಭಾರತದ ಜಮ್ಮು ಹಾಗೂ ಕಾಶ್ಮೀರ ವಿಚಾರವನ್ನು ವಿಶ್ವ ಮುಸ್ಲಿಂ ಸಂಘಟನೆಯ ಬಳಿ ಪ್ರಸ್ತಾಪ ಇರಿಸಲು ಹೋದಾಗ ಭಾರತದ ಜೊತೆಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಂಡಿರುವ ಸೌದಿ ಅರೇಬಿಯಾ ದೇಶಕ್ಕೆ ಭಾರತವು ಮೊದಲಿನಿಂದಲೂ ಜಮ್ಮು ಹಾಗೂ ಕಾಶ್ಮೀರ ವಿಚಾರವಾಗಿ ಇತರ ಯಾವುದಾದರೂ ದೇಶಗಳು ಪ್ರಸ್ತಾಪ ಇರಿಸಿದರೇ ಯಾವ ರೀತಿಯ ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದು ಸ್ಪಷ್ಟವಾಗಿ ತಿಳಿದಿದ್ದ ಕಾರಣ ಹಾಗೂ ಭಾರತ ದೇಶದ ಜೊತೆಗಿನ ಸಂಬಂಧ ಉತ್ತಮವಾಗಿದ್ದು ಕಾರಣ ಇದಕ್ಕೆ ಎಳ್ಳುನೀರು ಬಿಡಲು ಇಷ್ಟವಿಲ್ಲದ ಸೌದಿ ಅರೇಬಿಯಾ ದೇಶವು ಪಾಕಿಸ್ತಾನ ದೇಶಕ್ಕೆ ಜಮ್ಮು ಹಾಗೂ ಕಾಶ್ಮೀರ ವಿಚಾರವನ್ನು ವಿಶ್ವ ಮುಸ್ಲಿಂ ಸಂಘಟನೆಯಲ್ಲಿ ಪ್ರಸ್ತಾಪಿಸುವ ವಿಚಾರವನ್ನು ತಳ್ಳಿಹಾಕಿತ್ತು.

ವಿಶ್ವ ಮುಸ್ಲಿಂ ಸಂಘಟನೆ ಪಾಕಿಸ್ತಾನದ ಕೈಬಿಟ್ಟಿದ್ದ ಕಾರಣ ಇಮ್ರಾನ್ ಖಾನ್ ರವರು ತ’ಲೆಕೆ’ಡಿಸಿಕೊಂಡು ವಿಶ್ವ ಮುಸ್ಲಿಂ ಸಂಘಟನೆಯಲ್ಲಿ ತಮ್ಮ ರಾಜಕೀಯ ತಂತ್ರಗಳನ್ನು ಬಳಸಿಕೊಳ್ಳಲು ಹೋಗಿ ಇತರ ದೇಶಗಳನ್ನು ಸಂಪರ್ಕಿಸಿ ಸೌದಿ ಅರೇಬಿಯಾ ಹಾಗೂ ಇನ್ನಿತರ ಭಾರತ ಬೆಂಬಲಿತ ದೇಶಗಳ ಜೊತೆ ಮಾತುಕತೆ ನಡೆಸಲು ಇನ್ನಿತರ ಮುಸ್ಲಿಂ ರಾಷ್ಟ್ರಗಳನ್ನು ಒಟ್ಟುಗೂಡಿಸಲು ಆರಂಭಿಸಿದರು. ವಿಪರ್ಯಾಸವೆಂದರೆ ಟರ್ಕಿ, ಕತಾರ್ ಗಳನ್ನು ದೇಶವನ್ನು ಹೊರತುಪಡಿಸಿದರೆ ಇನ್ಯಾವುದೇ ಮುಸ್ಲಿಮ ರಾಷ್ಟ್ರಗಳು ಭಾರತದ ಜೊತೆ ಸಂಬಂಧ ಹದಗೆಡಿಸಿ ಕೊಳ್ಳಲು ಸಾಧ್ಯವಿಲ್ಲದ ಕಾರಣ ಜಮ್ಮು ಹಾಗೂ ಕಾಶ್ಮೀರ ಭಾರತದ ಆಂತರಿಕ ವಿಚಾರ, ಒಂದು ವೇಳೆ ಅಲ್ಲಿ ನಿಮಗೆ ಸಮ’ಸ್ಯೆಯಿದ್ದರೇ ದ್ವಿಪಕ್ಷೀಯ ಮಾತುಕತೆಯೊಂದಿಗೆ ಬಗೆಹರಿಸಿಕೊಳ್ಳಿ ಎಂದು ಸ್ಪಷ್ಟಪಡಿಸಿದ್ದರು.

ಆದರೆ ಇದು ಇಲ್ಲಿಗೆ ನಿಲ್ಲಲಿಲ್ಲ ಚೀನಾ ದೇಶದ ಮಾತು ಕೇಳಿ ಟರ್ಕಿ ಜೊತೆ ಸೇರಿಕೊಂಡು ವಿಶ್ವ ಮುಸ್ಲಿಂ ಸಂಘಟನೆಯಲ್ಲಿ ತಮ್ಮದೇ ಆದ ರಾಜಕೀಯ ತಂತ್ರ ಗಳನ್ನು ಬಳಸಲು ಪ್ರಯತ್ನಿಸಿದ ಕಾರಣ ಸೌದಿ ಅರೇಬಿಯಾ ದೇಶವು ಪಾಕಿಸ್ತಾನ ದೇಶಕ್ಕೆ ಬುದ್ಧಿ ಕಲಿಸುವ ಸಲುವಾಗಿ ಪಾಕಿಸ್ತಾನಕ್ಕೆ ತೈಲ ಸರಬರಾಜು ನಿಲ್ಲಿಸಿ, ತಾವು ನೀಡಿರುವ ಸಾಲವನ್ನು ಮರು ಪಾವತಿ ಮಾಡುವಂತೆ ಆದೇಶ ನೀಡಿತ್ತು. ಇನ್ನು ಪಾಕಿಸ್ತಾನಕ್ಕೆ ಸಾಲ ವಾಪಸ್ಸು ನೀಡುವ ದಾರಿ ತೋರದೆ ಚೀನಾ ದೇಶದ ಬಳಿ ಸಾಲ ತೆಗೆದುಕೊಂಡು ಸೌದಿ ಅರೇಬಿಯಾಗೆ ಮರು ಪಾವತಿ ಮಾಡಲು ಹೊರಟಿದೆ. ಈ ಎಲ್ಲಾ ವಿದ್ಯಮಾನಗಳಿಂದ ಸೌದಿ ಅರೇಬಿಯಾ ಹಾಗೂ ಪಾಕಿಸ್ತಾನ ದೇಶಗಳ ಸಂಬಂಧ ಹದಗೆಟ್ಟಿದೆ ಹಾಗೂ ಪಾಕಿಸ್ತಾನ ದೇಶದ ಅಧ್ಯಕ್ಷ ಇಮ್ರಾನ್ ಖಾನ್ ಚೀನಾ ದೇಶ ಹೇಳಿದಂತೆ ನಡೆದುಕೊಳ್ಳುತ್ತಿರುವ ಕಾರಣ ಸೌದಿ ಅರೇಬಿಯಾ ದೇಶದ ಜೊತೆ ಸಂಬಂಧ ಹದಗೆಟ್ಟಿದೆ ಎಂದು ಪಾಕಿಸ್ತಾನದ ಸೇನಾ ಅಧ್ಯಕ್ಷ ನಂಬುತ್ತಿದ್ದಾರೆ.

ಮೊದಲಿನಿಂದಲೂ ಪಾಕಿಸ್ತಾನದ ಸೇನೆಗೆ ಹಾಗೂ ಸೌದಿ ಅರೇಬಿಯಾ ದೇಶಕ್ಕೆ ಸಂಬಂಧ ಬಹಳ ಉತ್ತಮವಾಗಿದೆ. ಈ ಸಂಬಂಧ ಹದಗೆಡುತ್ತಿರುವುದು ಕಣ್ಣಾರೆ ಕಾಣುತ್ತಿರುವ ಪಾಕಿಸ್ತಾನದ ಸೇನಾ ಅಧ್ಯಕ್ಷ ಕಮರ್ ಜಾವೇದ್ ಬಜ್ವಾ ರವರು ಸಂಬಂಧವನ್ನು ಸರಿ ಮಾಡಲು ತಾವೇ ಸೌದಿ ಅರೇಬಿಯಾ ದೇಶಕ್ಕೆ ತೆರಳಿದ್ದರು. ಆದರೆ ಅಲ್ಲಿಯೂ ಕೂಡ ಅವರಿಗೆ ಸೌದಿ ಅರೇಬಿಯಾ ರಾಜಕುಮಾರ ಭೇಟಿ ಮಾಡಲು ನಿರಾಕರಿಸಿ ತಿರಸ್ಕರಿಸಿದ ಕಾರಣ ಸೇನಾ ಅಧ್ಯಕ್ಷರು ಇಮ್ರಾನ್ ಖಾನ್ ರವರಿಗೆ ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ. ಅಷ್ಟೇ ಅಲ್ಲದೇ, ಇಮ್ರಾನ್ ಖಾನ್ ವಿರುದ್ಧ ಪಾಕ್ ಜನತೆ ಬೀದಿಗಿಳಿದಿದ್ದಾರೆ ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ. ಇದರಲ್ಲಿ ಮಾಜಿ ಸೇನಾ ಅಧ್ಯಕ್ಷರಾದ ರಹೀಲ್ ಷರೀಫ್ ಅವರನ್ನು ಪಾಕಿಸ್ತಾನ ಅಧ್ಯಕ್ಷ ಮಾಡಲು ಮುಂದಾಗಿರುವುದಾಗಿ ತಿಳಿದು ಬಂದಿದೆ.

ಸ್ವತಃ ಸೇನಾ ಅಧ್ಯಕ್ಷ ಜನರಲ್ ಕಮರ್ ಜಾವೇದ್ ಬಜ್ವ ರವರು, ತಮ್ಮ ಹಿರಿಯ ಮಾಜಿ ಜನರಲ್ ರಹಿಲ್ ಶರೀಫರನ್ನು ದೇಶದ ಅಧ್ಯಕ್ಷರನ್ನಾಗಿ ಮಾಡಲು ಒಳ ಸಂ’ಚು ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ತನ್ನ ಸೇನಾ ಬಲವನ್ನು ಬಳಸಿಕೊಂಡು ಇಮ್ರಾನ್ ಖಾನ್ ಅವರ ಸರ್ಕಾರವನ್ನು ಉರುಳಿಸಿ ಮತ್ತೊಮ್ಮೆ ಚುನಾವಣೆ ನಡೆಯುವಂತೆ ಮಾಡಿ ಸೇನೆಯು ಪರೋಕ್ಷ ಬೆಂಬಲವನ್ನು ರಹಿಲ್ ಶರೀಫ್ ರವರಿಗೆ ನೀಡಲಾಗುತ್ತದೆ ಎಂಬ ಮಹತ್ವದ ಮಾತುಗಳು ಕೇಳಿ ಬಂದಿವೆ. ಮೊದಲಿನಿಂದಲೂ ಪಾಕಿಸ್ತಾನದ ಜನತೆ ರಹಿಲ್ ಶರೀಫ್ ರವರನ್ನು ರಾಜಕೀಯಕ್ಕೆ ಬರುವಂತೆ ಒತ್ತಾಯ ಮಾಡುತ್ತಿದ್ದಾರೆ, ಇದೀಗ ಸೇನಯ ಬೆಂಬಲ ಪಡೆದುಕೊಂಡು ರಹಿಲ್ ಶರೀಫ್ ಪ್ರಧಾನಿಯಾಗಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಒಂದು ವೇಳೆ ಅದೇ ನಡೆದಲ್ಲಿ ಪಾಕಿಸ್ತಾನ ದೇಶ ಚೀನಾ ದೇಶದಿಂದ ದೂರ ಹೋಗುವುದು ಹಾಗೂ ಸೌದಿ ಅರೇಬಿಯಾ ದೇಶದ ಜೊತೆ ತನ್ನ ಸಂಬಂಧವನ್ನು ಉತ್ತಮ ಪಡಿಸಿಕೊಳ್ಳುವ ಕಾರ್ಯ ಮಾಡಲಿದೆ. ಒಟ್ಟಿನಲ್ಲಿ ಭಾರತದ ಒಂದು ಮಾತಿಗೆ ಕಟ್ಟು ಬಿದ್ದು ಸೌದಿ ಅರೇಬಿಯಾ ದೇಶವು ಬಹಳ ವರ್ಷಗಳಿಂದ ಏರ್ಪಡಿಸಿ ಕೊಂಡಿದ್ದ ಸಂಬಂಧವನ್ನು ಕ್ಯಾರೆ ಎನ್ನದೆ ಪಾಕಿಸ್ತಾನ ದೇಶಕ್ಕೆ ತಕ್ಕ ಪ್ರತಿಫಲ ನೀಡುತ್ತದೆ. ಇದನ್ನು ಪಾಕಿಸ್ತಾನ ಸೇನಾ ಅಧ್ಯಕ್ಷರು ಸಹಿಸದೆ ಸೌದಿ ಅರೇಬಿಯಾ ದೇಶದ ಜೊತೆ ಸ್ನೇಹ ಸರಿಮಾಡಿಕೊಳ್ಳಲು ಇಮ್ರಾನ್ ಖಾನ್ ಅವರ ಸರ್ಕಾರ ಉರುಳಿಸಲು ಸಿದ್ಧವಾಗಿದ್ದಾರೆ.