ಕಾಂಗ್ರೆಸ್ಗೆ ಮತ್ತೊಂದು ಶಾಕ್ ! ಯೋಗಿ ಆದಿತ್ಯನಾಥ್ ಕಾರ್ಯವೈಖರಿಯನ್ನು ಶಾಸಕಿ ಅದಿತಿ ಸಿಂಗ್ ವಿವರಿಸಿದ್ದು ಹೇಗೆ ಗೊತ್ತಾ??

ನಮಸ್ಕಾರ ಸ್ನೇಹಿತರೇ, ಉತ್ತರ ಪ್ರದೇಶ ರಾಜ್ಯದಲ್ಲಿ ಇನ್ನು ಕೆಲವೇ ಕೆಲವು ತಿಂಗಳುಗಳಲ್ಲಿ ಚುನಾವಣೆ ನಡೆಯಲಿದೆ. ಈಗಾಗಲೇ ಉತ್ತರ ಪ್ರದೇಶ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷವು ಭರ್ಜರಿ ತಯಾರಿ ನಡೆಸಿದ್ದು, ಆಡಳಿತ ಪಕ್ಷವಾದ ಬಿಜೆಪಿ ಪಕ್ಷದ ಮೇಲೆ ಟೀಕೆಗಳ ಬಾಣಗಳನ್ನು ಸುರಿಸುತ್ತಿದೆ. ಕಳೆದ ಬಾರಿ ಬಹಳ ಹೀನಾಯವಾಗಿ ಸೋಲನ್ನು ಅನುಭವಿಸಿದ ಕಾಂಗ್ರೆಸ್ ಪಕ್ಷವು ಈ ಬಾರಿ ಹೇಗಾದರೂ ಮಾಡಿ ದೇಶದ ರಾಜಕೀಯಕ್ಕೆ ಪ್ರಮುಖ ತಿರುವನ್ನು ನೀಡುವ ಉತ್ತರ ಪ್ರದೇಶ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ರಾಹುಲ್ ಗಾಂಧಿ ರವರ ಬದಲಾಗಿ ಪ್ರಿಯಾಂಕಾ ಗಾಂಧಿ ಅವರನ್ನು ಕಣಕ್ಕಿಳಿಸಿದೆ. ಹಲವಾರು ತಿಂಗಳುಗಳ ಹಿಂದಿನಿಂದಲೇ ಪ್ರಿಯಾಂಕ ಗಾಂಧಿ ರವರು ಉತ್ತರ ಪ್ರದೇಶ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಇನ್ನು ರಾಜಕೀಯಕ್ಕೆ ಇಳಿದ ಪ್ರಿಯಾಂಕ ಗಾಂಧಿ ರವರು ಹಲವಾರು ಬಾರಿ ಯೋಗಿ ಆದಿತ್ಯನಾಥ ಸರ್ಕಾರದ ಮೇಲೆ ಟೀಕೆಗಳ ಬಾಣಗಳನ್ನು ಸುರಿಸಿದ್ದರೂ ಕೂಡ ಇಲ್ಲಿಯವರೆಗೂ ಯಾವುದು ಯಶಸ್ಸು ಕಂಡಂತೆ ಕಾಣುತ್ತಿಲ್ಲ. ಪ್ರತಿಬಾರಿಯೂ ಯೋಗಿ ಆದಿತ್ಯನಾಥ್ ರವರ ಕಾರ್ಯ ವೈಖರಿಯಿಂದ ಪ್ರಿಯಾಂಕ ಗಾಂಧಿ ರವರು ಹಿನ್ನಡೆ ಅನುಭವಿಸುವಂತಾಗಿದೆ.

ಅದರಲ್ಲಿಯೂ ಕಳೆದ ಮೂರು ವರ್ಷಗಳಿಂದ ದೇಶದ ಅತ್ಯುತ್ತಮ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ (ಇಂಡಿಯಾ ಟುಡೇ ಸಮೀಕ್ಷೆ) ಹ್ಯಾಟ್ರಿಕ್ ಸಾಧನೆ ಮಾಡಿರುವ ಯೋಗಿ ಆದಿತ್ಯನಾಥ್ ರವರ ಸರ್ಕಾರ ಹಲವಾರು ವಿಚಾರಗಳಲ್ಲಿ ವಿರೋಧ ಪಕ್ಷದ ಟೀಕೆಗಳ ಬಾಣಗಳಿಂದ ತಪ್ಪಿಸಿ ಕೊಂಡಿದೆ. ಇದರ ನಡುವೆ ಕಾಂಗ್ರೆಸ್ ಪಕ್ಷದಿಂದ ಈಗಾಗಲೇ ಅಮಾನತುಗೊಂಡಿರುವ ಕಾಂಗ್ರೆಸ್ ಪಕ್ಷದ ಶಾಸಕ ಅದಿತಿ ಸಿಂಗ್ ರವರು, ಮತ್ತೊಮ್ಮೆ ಕಾಂಗ್ರೆಸ್ ಗೆ ಶಾಕ್ ನೀಡಿದ್ದಾರೆ ಹಾಗೂ ಯೋಗಿ ಆದಿತ್ಯನಾಥ್ ರವರ ಸರ್ಕಾರದ ಕಾರ್ಯ ವೈಖರಿಯ ಬಗ್ಗೆ ಮಾತನಾಡಿದ್ದಾರೆ. ಹೌದು ಸ್ನೇಹಿತರೇ, ಇದೀಗ ಹಲವಾರು ವರ್ಷಗಳಿಂದ ಕೆಲವು ಕಾರ್ಮಿಕರು ಬದುಕುತ್ತಿರುವ ಹಾಗೂ ಅಲ್ಲಿಯೇ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಪ್ರದೇಶವನ್ನು ಇತ್ತೀಚಿಗೆ ಉತ್ತರ ಪ್ರದೇಶದ ಹೈಕೋರ್ಟ್ ಖಾಲಿ ಮಾಡಿಸುವಂತೆ ಆದೇಶ ನೀಡಿತ್ತು, ವಕೀಲರೊಬ್ಬರು ಇದರ ಕುರಿತು ಹೈಕೋರ್ಟ್ ನಲ್ಲಿ ಕೇಸು ದಾಖಲು ಮಾಡಿ ಗೆದ್ದಿದ್ದಾರೆ. ಹೈಕೋರ್ಟ್ ತೀರ್ಪಿನ ಬಳಿಕ ಪೊಲೀಸರು ಜಾಗವನ್ನು ಖಾಲಿ ಮಾಡಿಸಿ, ಅಂಗಡಿಗಳ ತೆರವು ಮಾಡುವ ಸಂದರ್ಭದಲ್ಲಿ ಅದಿತಿ ಸಿಂಗ್ ರವರು ಅಲ್ಲಿರುವ ಕಾರ್ಮಿಕರ ಪರ ಧ್ವನಿ ಎತ್ತಿ, ಇದು ಒಂದು ಅಸಂಬದ್ಧ ನಿರ್ಧಾರ ಎಂದು ಪ್ರತಿಭಟನೆಯಲ್ಲಿ ತೊಡಗಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಅದಿತಿ ಸಿಂಗ್ ರವರು ನನ್ನ ರಾಜಕೀಯ ಗುರು ಯೋಗಿ ಆದಿತ್ಯನಾಥ್ ರವರ ಸರ್ಕಾರದಲ್ಲಿ ಯಾವುದೇ ಬಡವರಿಗೆ ತೊಂದರೆ ಆಗಲು ಬಿಡುವುದಿಲ್ಲ, ಇದರ ಕುರಿತು ಯೋಗಿ ಆದಿತ್ಯನಾಥ್ ಅವರಿಗೆ ತಿಳಿದಿಲ್ಲ ಎನಿಸುತ್ತದೆ. ಆದರೆ ಇಲ್ಲಿರುವ ಕೆಲವು ಲ್ಯಾಂಡ್ ಮಾ-ಫಿಯಾ ಜನರು ಕೇಸು ದಾಖಲಿಸಿ ಸಾಮಾನ್ಯ ಜನರ ವಿರುದ್ಧ ಗೆದ್ದಿದ್ದಾರೆ. ಖಂಡಿತ ಯೋಗಿ ಆದಿತ್ಯನಾಥ್ ರವರ ಸರ್ಕಾರ ಬಡವರ ಪರವಾಗಿ ಇರುತ್ತದೆ ಎಂಬ ನಂಬಿಕೆ ಇದೆ. ಅದೇ ಕಾರಣಕ್ಕಾಗಿ ನಾನು ಈ ವಿಷಯವನ್ನು ಈ ಕೂಡಲೇ ಯೋಗಿ ಆದಿತ್ಯನಾಥ್ ರವರಿಗೆ ತಿಳಿಸುತ್ತೇನೆ ಎಂದರು. ಈ ಹೇಳಿಕೆಯ ಬೆನ್ನಲ್ಲೆ ಹಿಂದಿರುವ ಜನ ಯೋಗಿ ಆದಿತ್ಯನಾಥ ಜಿಂದಾಬಾದ್ ಎಂಬ ಘೋಷಣೆಗಳನ್ನು ಕೂಗುವ ಮೂಲಕ ಯೋಗಿ ಆದಿತ್ಯನಾಥ್ ರವರ ಸರ್ಕಾರದ ಮೇಲೆ ಭರವಸೆ ಇರುವುದಾಗಿ ತೋರಿಸಿದರು. ಒಟ್ಟಿನಲ್ಲಿ ಇಡೀ ಕ್ಷೇತ್ರವನ್ನು ತನ್ನ ತೆಕ್ಕೆಯಲ್ಲಿ ಇಟ್ಟುಕೊಂಡು ಅದಿತಿ ಸಿಂಗ್ ರವರು ಉತ್ತಮ ಹೆಸರು ಗಳಿಸಿದ್ದಾರೆ, ಇವರ ತಂದೆಯು ಕೂಡ ಶಾಸಕರಾಗಿ ಸೋಲನ್ನು ಕಂಡಿರಲಿಲ್ಲ. ಈಗ ಅವರ ತಂದೆಯ ಅಗಲಿಕೆಯ ನಂತರ ರಾಜಕೀಯಕ್ಕಿಳಿದು ಶಾಸಕಿ ಯಾಗಿರುವ ಅದಿತಿ ಸಿಂಗ್ ರವರು, ಕಾಂಗ್ರೆಸ್ ಪಕ್ಷದ ವಿರುದ್ಧ ಮಾತನಾಡುತ್ತಿರುವುದು ಈಗಾಗಲೇ ಉತ್ತರ ಪ್ರದೇಶದಲ್ಲಿ ಬಹುತೇಕ ಮುಳುಗಿರುವ ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.