24 ಗಂಟೆಯಲ್ಲಿಯೇ ಮತ್ತೊಂದು ಭರ್ಜರಿ ಸಿಹಿಸುದ್ದಿ ! ವೆಂಟಿಲೇಟರ್ ನಂತರ ಇದೀಗ ಮತ್ತೊಂದು ಸಿಹಿ ಸುದ್ದಿ ನೀಡಿದ ಟ್ರಂಪ್ ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರು ಭಾರತದಲ್ಲಿ ಕೋರೋನ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ವೆಂಟಿಲೇಟರ್ ಗಳನ್ನು ಕಳುಹಿಸಿಕೊಡುತ್ತೇವೆ ಎಂದು ಅಧಿಕೃತವಾಗಿ ಕೇವಲ ಕೆಲವೇ ಕೆಲವು ಗಂಟೆಗಳ ಹಿಂದಷ್ಟೇ ಘೋಷಣೆ ಮಾಡಿದ್ದರು.

ಇದಾದ ಬಳಿಕ ಭಾರತಕ್ಕೆ ಮತ್ತೊಂದು ಭರ್ಜರಿ ಸಿಹಿ ಸುದ್ದಿಯನ್ನು ಅಮೇರಿಕಾ ದೇಶ ನೀಡಿದೆ. ನಿಮಗೆಲ್ಲರಿಗೂ ತಿಳಿದಿರುವಂತೆ ಕೋರೋನ ಪರಿಸ್ಥಿತಿ ಬಳಸಿಕೊಂಡು ವಿಶ್ವದ ಎಲ್ಲೆಡೆ ಆರ್ಥಿಕತೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಮುಂದಾಗಿದ್ದ ಚೀನಾ ದೇಶಕ್ಕೆ ಇದೀಗ ಬಹುತೇಕ ಕಂಪನಿಗಳು ಭಾರತ ಹಾಗೂ ವಿಯೆಟ್ನಾಮ್ ದೇಶದ ಕಡೆಯಿಂದ ಮುಖ ಮಾಡುತ್ತಿರುವುದು ಅರಗಿಸಿಕೊಳ್ಳಲಾಗದ ಸಂಗತಿಯಾಗಿದೆ. ಇದರಿಂದ ದಕ್ಷಿಣ ಹಿಂದೂ ಮಹಾ ಸಾಗರದಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸುವ ಮೂಲಕ ಸುಖಾಸುಮ್ಮನೆ ಕ್ಯಾತೆ ತೆಗೆಯುತ್ತಿದೆ.

ತನ್ನ ನೌಕಾಪಡೆಯ ಶಕ್ತಿಯ ಮೂಲಕ ಹಿಂದು ಮಹಾ ಸಾಗರದಲ್ಲಿ ಪ್ರಭಾವವನ್ನು ಹೆಚ್ಚಿಸಲು ಪ್ರಯತ್ನ ಪಡುತ್ತಿರುವ ಸಂದರ್ಭದಲ್ಲಿ ಭಾರತೀಯ ನೌಕಾಪಡೆಯ ಬೆಂಬಲಕ್ಕೆ ಇದೀಗ ಅಮೇರಿಕಾ ದೇಶದ ನೌಕಾಪಡೆ ಬಂದಿದೆ. ಭಾರತ ಹಾಗೂ ಅಮೆರಿಕ ದೇಶಗಳ ನಡುವೆ ನಡೆದ ಮಹತ್ವದ ಬೆಳವಣಿಗೆಯಲ್ಲಿ ಬರೋಬ್ಬರಿ 2.2 ಬಿಲಿಯನ್ ಡಾಲರ್ ಗಳ ಒಪ್ಪಂದ ನಡೆದಿದೆ.

ಹೌದು ಸ್ನೇಹಿತರೇ, ಭಾರತ ದೇಶ ಹಲವಾರು ದಿನಗಳಿಂದ ಭಾರತೀಯ ನೌಕಾಪಡೆಯ ದಿಕ್ಕನ್ನೇ ಬದಲಿಸಬಲ್ಲ MH-60 R ಮಲ್ಟಿ ರೋಲ್ ಸೀಹಾಕ್ ಹೆಲಿಕ್ಯಾಪ್ಟರ್ ಒಪ್ಪಂದಕ್ಕಾಗಿ ಕಾದು ಕುಳಿತಿತ್ತು. ವಿಶ್ವ ಎಷ್ಟೇ ಆಧುನಿಕತೆ ಗೊಂಡಿದ್ದರೂ ಕೂಡ ಹೆಲಿಕ್ಯಾಪ್ಟರ್ ಗಳನ್ನು ತಯಾರು ಮಾಡಲು ಕನಿಷ್ಠ ಮೂರರಿಂದ ನಾಲ್ಕು ವರ್ಷ ಬೇಕಾಗಿತ್ತು. 24 ಹೆಲಿಕಾಪ್ಟರ್ ಗಳ ಬೇಡಿಕೆಯಿಟ್ಟ ಭಾರತ ದೇಶಕ್ಕೆ ಭರ್ಜರಿ ನೀಡಿರುವ ಅಮೆರಿಕ ದೇಶವು, ಹಿಂದೂ ಮಹಾ ಸಾಗರದಲ್ಲಿ ನಡೆಯುತ್ತಿರುವ ಘಟನೆಗಳನ್ನು ಆಧಾರವಾಗಿರಿಸಿಕೊಂಡು ಕೂಡಲೇ ಕೆಲವೇ ಕೆಲವು ದಿನಗಳಲ್ಲಿ ಮೂರು ಹೆಲಿಕ್ಯಾಪ್ಟರ್ ಗಳನ್ನು ಕಳುಹಿಸಲಾಗುವುದು ಹಾಗೂ 2023 ಮತ್ತು 2024 ರ ವೇಳೆಗೆ ಉಳಿದ 21 ಹೆಲಿಕ್ಯಾಪ್ಟರ್ ಗಳನ್ನು ತಲುಪಿಸಲಾಗುವುದು ಎಂಬ ಭರವಸೆ ನೀಡಿ ಒಪ್ಪಂದಕ್ಕೆ ಸಹಿ ಹಾಕಿದೆ.

ಭಾರತಕ್ಕೆ ಹಲವಾರು ವರ್ಷಗಳಿಂದ ತಲೆನೋವಾಗಿರುವ ಇತರ ದೇಶಗಳ ಜಲಂತರ್ಗಾಮಿ ಗಳ ಮೇಲೆ ಹದ್ದಿನ ಕಣ್ಣು ಇಡಲು ಸೀಹಾಕ್ ಹೆಲಿಕ್ಯಾಪ್ಟರ್ ಗಳು ಬಹಳ ಸಹಕಾರಿಯಾಗಲಿದ್ದು, ನೂರಾರು ಅಡಿ ಆಳದಲ್ಲಿ ಅಡಗಿರುವ ಜಲಂತರ್ಗಾಮಿ ಗಳನ್ನು ಕ್ಷಣಮಾತ್ರದಲ್ಲಿ ಗುರುತಿಸಿ ಉಡಿಸ್ ಮಾಡಲಿದೆ. ಇನ್ನು ಸೀಹಾಕ್ ಹೆಲಿಕಾಪ್ಟರ್ ಗಳ ಸೇರ್ಪಡೆಯೊಂದಿಗೆ ಭಾರತೀಯ ನೌಕಾಪಡೆಗೆ ಆನೆಬಲ ಬಂದಂತಾಗಲಿದ್ದು ಭಾರತೀಯ ಸೇನೆ ದಿನೇದಿನೇ ಮತ್ತಷ್ಟು ಬಲಗೊಳ್ಳುತ್ತಿದೆ ಎಂಬುದೇ ಸಂತಸದ ವಿಷಯವಾಗಿದೆ.