ಕಮಲ್ ನಾಥ್ ಗೆ ಮತ್ತೊಂದು ಶಾಕ್ ! ಭರ್ಜರಿ ಕಠಿಣ ನಿರ್ಧಾರ ಮೂಲಕ ತನ್ನ ಕಾರ್ಯ ಆರಂಭಿಸಿದ ಶಿವರಾಜ್ ಸಿಂಗ್ ಚೌಹಾಣ್ ! ಮಾಡಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇತ್ತೀಚಗಷ್ಟೇ ಶಿವರಾಜ್ ಸಿಂಗ್ ಚೌಹಾಣ್ ಅವರು ಕಾಂಗ್ರೆಸ್ ಸರ್ಕಾರ ಬಹುಮತ ಕಳೆದು ಕೊಂಡು ಹೊರ ನಡೆದ ನಂತರ ಮತ್ತೊಮ್ಮೆ ಮಧ್ಯ ಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು.

ಇದಾದ ಕೆಲವೇ ಕೆಲವು ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಹಲವಾರು ನಿರ್ಧಾರಗಳನ್ನು ವಾಪಸ್ಸು ತೆಗೆದು ಕೊಳ್ಳಲು ಆರಂಭಿಸಿದ್ದಾರೆ. ಹೌದು, ಕೆಲವೊಂದು ವಿವಾದಾತ್ಮಕ ಕಾಂಗ್ರೆಸ್ ಪಕ್ಷದ ನಡೆಗಳನ್ನು ಶಿವರಾಜ್ ಸಿಂಗ್ ಚೌಹಾನ್ ಅವರು ವಾಪಸ್ಸು ತೆಗೆದುಕೊಳ್ಳುವ ನಿರ್ಧಾರ ಮಾಡಿದ್ದು ಮೊದಲನೇ ಹೆಜ್ಜೆಯಾಗಿ IIFA ಕಾರ್ಯಕ್ರಮಕ್ಕೆ ಕಾಂಗ್ರೆಸ್ ಸರ್ಕಾರ ಅನುಮೋದನೆ ಮಾಡಿದ್ದ ಅನುದಾನವನ್ನು ವಾಪಸ್ ಪಡೆದಿದ್ದಾರೆ. ಇದರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧದ ಚರ್ಚೆಗಳು ಹೆಚ್ಚಾಗಿವೆ.

ಅಷ್ಟಕ್ಕೂ ವಿಷಯದ ಮೂಲವೇನು ಗೊತ್ತಾ?

ನಿಮಗೆಲ್ಲರಿಗೂ ತಿಳಿದಿರುವಂತೆ, IIFA ಒಂದು ಖಾಸಗಿ ಕಾರ್ಯಕ್ರಮ. ಪ್ರತಿವರ್ಷವೂ ಸಿನಿಮಾ ತಾರೆಯರಿಗೆ ಪ್ರಶಸ್ತಿ ನೀಡುವ ಮೂಲಕ ಜಾಹಿರಾತುಗಳಿಂದಲೇ ಕೋಟ್ಯಂತರ ರೂಪಾಯಿ ಗಳಿಸುತ್ತದೆ. ಆದರೆ ಕಳೆದ ಕಮಲ್ನಾಥ್ ನೇತೃತ್ವದ ಸರ್ಕಾರವು ಸೆಲೆಬ್ರಿಟಿಗಳ ಮನವೊಲಿಸಲು ಬರೋಬ್ಬರಿ 700 ಕೋಟಿ ಅನುದಾನವನ್ನು ಘೋಷಣೆ ಮಾಡಿದ್ದರು.

ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಈ ಕುರಿತು ಗಮನ ಹರಿಸಿರುವ ಶಿವರಾಜ್ ಸಿಂಗ್ ಚೌಹಾನ್ ರವರು, ರಾಜ್ಯದ ಬೊಕ್ಕಸದಿಂದ ಒಂದು ರೂಪಾಯಿ ಕೂಡ ನೀಡಲು ಸಾಧ್ಯವಿಲ್ಲ ಎಂದು ಐಫಾ ಕಾರ್ಯಕ್ರಮಕ್ಕಾಗಿ ನಿಗದಿಪಡಿಸಿದ್ದ 700 ಕೋಟಿ ರೂಗಳನ್ನು ಕೋರೋನ ಪರಿಹಾರ ನಿಧಿಗೆ ವರ್ಗಾವಣೆ ಮಾಡಿದ್ದಾರೆ.

ಆದರೆ ಜನರ ವಾದವೇನು ಗೊತ್ತಾ?

ಶಿವರಾಜ್ ಸಿಂಗ್ ಚೌಹಾನ್ ರವರ ಈ ಕಾರ್ಯಕ್ಕೆ ಹಲವಾರು ಮೆಚ್ಚುಗೆಯ ಮಾತುಗಳು ವ್ಯಕ್ತವಾಗಿದ್ದು, ಕೆಲವರು ಮನರಂಜನೆ ಕೂಡ ಮುಖ್ಯ ಎಂದು ಟೀಕೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಕಾಂಗ್ರೆಸ್ ಸರ್ಕಾರದ ಒಳ್ಳೆಯ ಕೆಲಸಗಳಿಗೆ ಬ್ರೇಕ್ ಹಾಕಲು ನಿರ್ಧಾರ ಮಾಡಿದಂತೆ ಕಾಣುತ್ತಿದೆ ಎಂದಿದ್ದಾರೆ.

ಆದರೆ ಹಲವಾರು ವರ್ಷಗಳಿಂದ IIFA ಕಾರ್ಯಕ್ರಮ ಖಾಸಗಿ ದುಡ್ಡಿನಲ್ಲಿ ನಡೆಯುತ್ತಿದ್ದು ಮನರಂಜನೆ ಕಡಿಮೆ ಯಾಗುವುದಿಲ್ಲ, ಕೋಟ್ಯಂತರ ರೂ ಗಳನ್ನು ಕೇವಲ ಜಾಹೀರಾತುಗಳಿಂದ ಪಡೆದು ಕೊಳ್ಳುತ್ತಾರೆ. ಆದ ಕಾರಣ ಈ ಬಾರಿಯೂ ಕೂಡ ಅದ್ದೂರಿಯಾಗಿ ಆಯೋಜನೆ ಮಾಡುತ್ತಾರೆ ನಿಮಗೆ ಮನರಂಜನೆಯ ಯಾವುದೇ ಲೋಪ ವಿರುವುದಿಲ್ಲ ಎಂದು ಕೆಲವರು ಟೀಕೆಗಳಿಗೆ ಉತ್ತರ ನೀಡಿದ್ದಾರೆ.

bjpKannadaKannada NewsMandya pradeshShivaraj singh chuhan