ಸದ್ದಿಲ್ಲದೆ ಕೆಲಸ ಮಾಡಿ ಮುಗಿಸುತ್ತಿರುವ ಅಜಿತ್ ದೋವೆಲ್ ! ತಬ್ಲಿಘಿ ಜಮಾತ್ ಕೋರೋನ ಕಂಟಕದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿ ಮಾಡುತ್ತಿರುವುದಾದರೂ ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಭಾರತ ದೇಶವು ಇಡೀ ವಿಶ್ವದೆಲ್ಲೆಡೆ ತಾಂಡವವಾಡುತ್ತಿರುವ ಚೀನಾ ವೈರಸ್ ಅನ್ನು ತಡೆಗಟ್ಟುವಲ್ಲಿ ಬಹುತೇಕ ಯಶಸ್ವಿಯಾಗಿತ್ತು. ಮುಂಜಾಗ್ರತಾ ಕ್ರಮದಿಂದ ಲಾಕ್ಡೌನ್ ಘೋಷಿಸಿದ ಪರಿಣಾಮ ಚೀನಾ ವೈರಸ್ ತಡೆಗಟ್ಟುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದೆವು.

ಆದರೆ ತಬ್ಲಿಘಿ ಜಮಾತ್ ಸಭೆಯಿಂದ ದೇಶದಲ್ಲಿ ಚೀನಾ ವೈರಸ್ ಸೋಂಕಿತರ ಪಟ್ಟಿ ಗಣನೀಯವಾಗಿ ಏರತೊಡಗಿತು. ಕೆಲವರು ಸಭೆಯಿಂದ ತಪ್ಪಿಸಿಕೊಂಡು ಹೋಗಿ ಮತ್ತಷ್ಟು ಆತಂಕವನ್ನು ಸೃಷ್ಟಿ ಮಾಡಿದ್ದರು‌. ಆದರೆ ಕೂಡಲೇ ಎಚ್ಚೆತ್ತುಕೊಂಡ ಕೇಂದ್ರವು ಜವಾಬ್ದಾರಿಯನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ರವರ ಹೆಗಲಿಗೆ ಹೊರಿಸಿತು, ಎಂದಿನಂತೆ ಬಹಳ ವೇಗವಾಗಿ ಕೆಲಸ ಆರಂಭಿಸಿದ ಅಜಿತ್ ದೋವಲ್ ಜಮಾತ್ ಸದಸ್ಯರು ಹಾಗೂ ಅವರೊಡನೆ ಸಂಪರ್ಕ ಹೊಂದಿದ್ದ ಎಲ್ಲರನ್ನೂ ಕಂಡು ಹಿಡಿಯಲು ರಾಜ್ಯಗಳ ಜೊತೆ ಸಮನ್ವಯ ಕಾಪಾಡಿಕೊಂಡು ಕೆಲಸ ಮಾಡಿ ಮುಗಿಸುತ್ತಿದ್ದಾರೆ.

ಇದೀಗ ಅಧಿಕೃತ ಮಾಹಿತಿ ಬಂದಿರುವ ಪ್ರಕಾರ ಬರೋಬ್ಬರಿ 22 ಸಾವಿರ ಜನರನ್ನು ಪ್ರತ್ಯೇಕವಾಗಿರಿಸಿ, ನಿರ್ಬಂಧ ವಿಧಿಸಲಾಗಿದೆ. ಜಮಾತ್ ಸದಸ್ಯರು ಹಾಗೂ ಅವರ ಜೊತೆ ಹತ್ತಿರದ ಸಂಬಂಧ ಹೊಂದಿದ್ದ ಜನರನ್ನು ಗುರುತಿಸಿ ಚೀನಾ ವೈರಸ್ ಹರಡದಂತೆ ಮತ್ತಷ್ಟು ಮುನ್ನೆಚ್ಚರಿಕೆ ವಹಿಸಲಾಗಿದೆ ಎಂಬುದು ತಿಳಿದುಬಂದಿದೆ. ಅಷ್ಟೇ ಅಲ್ಲದೆ ಸಭೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಅನುಮಾನ ಬಂದ ಸಾವಿರಾರು ಜನರನ್ನು ತಪಾಸಣೆಗೆ ಒಳಪಡಿಸಲಾಗಿದೆ ಎಂಬುದು ತಿಳಿದು ಬಂದಿದೆ. ಕೇವಲ ಕೆಲವೇ ಕೆಲವು ದಿನಗಳಲ್ಲಿ ಬರೋಬ್ಬರಿ 22 ಸಾವಿರ ಜನರನ್ನು ಗುರುತಿಸಿ ಪ್ರತ್ಯೇಕವಾಗಿರಿಸುವ ಮೂಲಕ ಅಜಿತ್ ದೋವಲ್ ರವರು ಮತ್ತೊಮ್ಮೆ ತಮ್ಮ ಚಾಣಕ್ಯತನ ಮೆರೆದಿದ್ದಾರೆ.