ತುಕ್ಡೇ ತುಕ್ಡೇ ಎಂದು ರಾಜಕೀಯಕ್ಕೆ ಇಳಿದು ಇದೀಗ ಜನಗಣಮನ ಎಂಬ ಯಾತ್ರೆ ನಡೆಸುತ್ತಿರುವ ಕನ್ನಯ್ಯ ಕುಮಾರ್ ಗೆ ಬಿಹಾರದ ಜನತೆ ಸ್ವಾಗತ ನೀಡುತ್ತಿರುವುದು ಹೇಗೆ ಗೊತ್ತಾ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಕೇವಲ ಸಾಮಾನ್ಯ ಕಾಲೇಜಿನ ಅಧ್ಯಕ್ಷ ದೇ-ಶದ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಇಡೀ ದೇಶದಲ್ಲಿ ಕುಖ್ಯಾತಿಯ ಮೂಲಕ ಸದ್ದು ಮಾಡಿದ್ದನು. ಬಡತನ ರೇಖೆಗಿಂತ ಕೆಳಗಡೆ ಇದ್ದೇನೆ ಎಂದು ಕಾಲೇಜಿನಲ್ಲಿ ಸೀಟು ಗಳಿಸಿಕೊಂಡಿದ್ದರೂ ಲೋಕಸಭಾ ಚುನಾವಣೆಯಲ್ಲಿ ಲಕ್ಷಗಟ್ಟಲೆ ಆಸ್ತಿ ಘೋಷಣೆ ಮಾಡುವ ಮೂಲಕ ಸದ್ದು ಮಾಡಿದ್ದ ಕನ್ನಯ್ಯ ಕುಮಾರ್ ಇದೀಗ ಸಕ್ರಿಯ ರಾಜಕಾರಣಕ್ಕೆ ಇಳಿದಿದ್ದಾರೆ.

ಹೌದು ತುಕಡೆ ತುಕಡೆ ಗ್ಯಾಂಗಿನ ಪ್ರಮುಖ ನಾಯಕ ಎಂದೇ ಕುಖ್ಯಾತಿ ಪಡೆದು ಕೊಂಡಿರುವ ಕನ್ನಯ್ಯ ಕುಮಾರ್, ಇದೀಗ ಇನ್ನೇನು ಕೆಲವೇ ಕೆಲವು ತಿಂಗಳುಗಳಲ್ಲಿ ಬಿಹಾರ ರಾಜ್ಯದಲ್ಲಿ ಚುನಾವಣೆ ನಡೆಯುತ್ತಿರುವ ಕಾರಣ ಬಿಹಾರದಲ್ಲಿ ಬದಲಾವಣೆಯ ಬಿರುಗಾಳಿ ತರುತ್ತೇನೆ ಎಂದು ಸಕ್ರಿಯ ರಾಜಕಾರಣಕ್ಕೆ ಇಳಿದು, ಇಡೀ ಬಿಹಾರದಲ್ಲಿ ಜನಗಣಮನ ಎಂಬ ಯಾತ್ರೆಯನ್ನು ಒಂದು ತಿಂಗಳ ಕಾಲ ನಡೆಸಲು ನಿರ್ಧಾರ ಕೈಗೊಂಡಿದ್ದಾರೆ. ಈ ಮೂಲಕ ವಿಧಾನಸಭಾ ಚುನಾವಣೆಯಲ್ಲಿ ತನ್ನದೇ ಆದ ಸರ್ಕಾರ ರಚಿಸಲು ಪ್ರಯತ್ನ ಪಡುತ್ತಿರುವುದಾಗಿ ಹೇಳಿ ಕೊಂಡಿದ್ದಾರೆ.

ಆದರೆ ಬಿಹಾರದ ಜನತೆಯು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕನ್ನಯ್ಯ ಕುಮಾರ್ ರವರಿಗೆ ವಿವಿಧ ರೀತಿಯ ಮುಜುಗರ ತರುವಂತಹ ಸ್ವಾಗತ ನೀಡುತ್ತಿದ್ದಾರೆ.. ಎಲ್ಲಿ ಹೋದರೂ ಕನ್ನಯ್ಯ ಕುಮಾರ್ ಅವರ ಮೇಲೆ ಯುವಕರ ಗುಂಪುಗಳು ದಾ-ಳಿ ಮಾಡುತ್ತಿದ್ದು, ಬೆಂಗಾವಲು ವಾಹನಗಳ ಮೇಲೆ ಯಾತ್ರೆ ಆರಂಭಗೊಂಡು ಕೇವಲ 16 ದಿನಗಳಲ್ಲಿ ಎಂಟು ಬಾರಿ ದಾ-ಳಿ ನಡೆದಿದೆ. ಕೆಲವು ಕಡೆ ಮೊಟ್ಟೆ-ಟಮೋಟೊ ಗಳ ಮೂಲಕ ಕನ್ನಯ್ಯ ಕುಮಾರ್ ರವರಿಗೆ ಸ್ವಾಗತ ನೀಡಿದರೇ ಮತ್ತು ಕೆಲವು ಕಡೆ ತಮೋಟೋ ಮೊಟ್ಟೆಗಳು ಕಲ್ಲಾಗಿ ಬದಲಾವಣೆಯಾಗಿವೆ. ಒಟ್ಟಿನಲ್ಲಿ ಜನಗಣಮನ ಎಂಬ ಹೆಸರಿನ ಮೂಲಕ ಯಾತ್ರೆ ನಡೆಸುತ್ತಿದ್ದರೂ ಕೂಡ, ಸಾಮಾಜಿಕ ಜಾಲತಾಣಗಳಲ್ಲಿ ಬಿಹಾರದ ಜನತೆಯು ದೇಶವನ್ನು ವಿಭಜನೆ ಮಾಡುತ್ತೇನೆ ಎಂದ ಕನ್ನಯ್ಯ ಕುಮಾರ್ ಇದೀಗ ಜನಗಣಮನ ಎಂಬ ಹೆಸರು ಇಟ್ಟು ಕೊಂಡು ಯಾತ್ರೆ ಮಾಡುತ್ತಿರುವುದನ್ನು ನೋಡಿದರೆ ಅಚ್ಛೇದಿನ ಬಂದಂತೆ ಕಾಣುತ್ತದೆ ಎಂದು ಮೋದಿ ಸರ್ಕಾರದ ಪರ ಘೋಷಣೆಗಳನ್ನು ಕೂಗಿದ್ದಾರೆ.

ಈ ಮೂಲಕ ಯಾವುದೋ 4 ಕೆಲವು ನಾಯಕರು ದೇಶದ ವಿರುದ್ಧ ಘೋಷಣೆ ಕೂಗುವವರನ್ನು ಬೆಂಬಲಿಸಿದರೇ, ಸಾಮಾನ್ಯ ಜನರು ಮತ ನೀಡುವುದಿಲ್ಲ ಹಾಗೂ ಅದ್ವಿತೀಯ ಸ್ವಾಗತ ಕೋರುವುದು ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಜೆಡಿಯು ಪಕ್ಷದ ಕಾರ್ಯಕರ್ತರು ಕನ್ನಯ್ಯ ಕುಮಾರ್ ಅವರಿಗೆ ಟಾಂಗ್ ನೀಡಿದ್ದಾರೆ. ಇದೀಗ ಇವರ ಯಾತ್ರೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಟ್ರೋಲ್ಗಳು, ವ್ಯತಿರಿಕ್ತ ಹೇಳಿಕೆ ಗಳು ವ್ಯಕ್ತವಾಗಿದ್ದು ಇದರ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸಿ.