ಮದರಸಾಗಳ ಕುರಿತು ಐತಿಹಾಸಿಕ ನಿರ್ಣಯ ತೆಗೆದುಕೊಂಡ ಅಸ್ಸಾಂ ಬಿಜೆಪಿ ಸರ್ಕಾರ ! ದೇಶದಲ್ಲಿ ಮತ್ತೊಮ್ಮೆ ಪರ-ವಿರೋಧ ಹೇಳಿಕೆಗಳು ಭಾರಿ ಸದ್ದು !

ನಮಸ್ಕಾರ ಸ್ನೇಹಿತರೇ, ಹಲವಾರು ವರ್ಷಗಳಿಂದ ದೇಶದಲ್ಲಿ ಮದರಸಾಗಳಲ್ಲಿ ಶಿಕ್ಷಣ ನೀಡುತ್ತಿರುವ ಬಗ್ಗೆ ಪರ-ವಿರೋಧದ ಚರ್ಚೆಗಳು ಭಾರಿ ಸಂಖ್ಯೆಯಲ್ಲಿ ವ್ಯಕ್ತವಾಗುತ್ತಿವೆ. ಇದರ ಬೆನ್ನಲ್ಲೇ ಅಸ್ಸಾಂ ನಲ್ಲಿ ಅಲ್ಲಿನ ಸರ್ಕಾರ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ.

ಕೆಲವರು ಮದರಸಾಗಳಲ್ಲಿ ಓದುವ ಮಕ್ಕಳಿಗೆ ಯಾವುದೇ ರೀತಿಯ ವೈಜ್ಞಾನಿಕ ಶಿಕ್ಷಣ ದೊರೆಯುವುದಿಲ್ಲ, ಕಂಪ್ಯೂಟರ್, ವಿಜ್ಞಾನ ವಿಭಾಗಗಳ ಬಗ್ಗೆ ಮಕ್ಕಳು ಕಿಂಚಿತ್ತು ತಿಳಿದು ಕೊಂಡಿರುವುದಿಲ್ಲ. ಅಷ್ಟೇ ಅಲ್ಲದೆ ರಾಜಕೀಯ ಪಕ್ಷಗಳು ಮದರಸಾ ಗಳನ್ನು ತಮ್ಮ ಮತ ಬ್ಯಾಂಕುಗಳಾಗಿ ಪರಿವರ್ತನೆ ಮಾಡಿಕೊಳ್ಳಲು ಓಲೈಕೆ ರಾಜಕಾರಣ ಮಾಡುತ್ತಿವೆ ಎಂದು ಹೇಳುತ್ತಾರೆ. ಇನ್ನೂ ಕೆಲವರು ನಮ್ಮ ಮಕ್ಕಳಿಗೆ ಕುರಾನ್ ಕಲಿಸಲು ಮದರಸಾ ಗಳು ಬೇಕೇ ಬೇಕು ಎಂದು ವಾದ ಮಂಡಿಸುತ್ತಾರೆ.

ಈ ಎಲ್ಲಾ ವಿದ್ಯಮಾನಗಳ ನಡುವೆ ಇದೀಗ ಅಸ್ಸಾಂ ಸರ್ಕಾರವು ರಾಜ್ಯದಲ್ಲಿ ಇರುವ ಎಲ್ಲಾ ಮದರಸಾ ಮಂಡಳಿಗಳನ್ನು ವಿಸರ್ಜನೆ ಮಾಡಿ ಅದರ ಸಂಪೂರ್ಣ ಶೈಕ್ಷಣಿಕ ವಿಭಾಗವನ್ನು ಪ್ರೌಢಶಿಕ್ಷಣ ಮಂಡಳಿಗೆ ಹಸ್ತಾಂತರಿಸಲು ನಿರ್ಧಾರ ಮಾಡಿದೆ. ಸಂಸ್ಕೃತ ಮಂಡಳಿಯನ್ನು ಕೂಡ ವಿಭಾಗ ಮಾಡಲು ನಿರ್ಧಾರ ಮಾಡಿದ್ದು ಇನ್ನು ಮುಂದೆ ಮದರಸಾಗಳು, ಸಂಸ್ಕೃತ ಮಂಡಳಿಗಳು ನೇರವಾಗಿ ಪ್ರೌಢ ಶಿಕ್ಷಣ ಮಂಡಳಿಯ ವಿಭಾಗದಲ್ಲಿ ಸೇರಿಕೊಳ್ಳಲಿವೆ‌. ಈ ಮೂಲಕ ಮದರಸಾಗಳು ಇನ್ನು ಮುಂದೆ ಸರ್ಕಾರಿ ಶಾಲೆಗಳಂತೆ ಬದಲಾಗಲಿವೆ, ಸಂಪೂರ್ಣ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿರಲಿದೆ ಎಂಬ ಆದೇಶವನ್ನು ಹೊರಡಿಸಿದೆ. ಈ ನಿರ್ಣಯ ಇದೀಗ ದೇಶದಲ್ಲಿ ಭಾರಿ ಸದ್ದು ಮಾಡಿದ್ದು ಪರ-ವಿರೋಧದ ಚರ್ಚೆಗಳು ಬಾರಿ ಹೆಚ್ಚಾಗಿವೆ, ಈ ಕುರಿತು ನಿಮ್ಮ ಅಭಿಪ್ರಾಯ??