ಕೇಂದ್ರ ಸರ್ಕಾರಕ್ಕೆ ಭರ್ಜರಿ ಸಿಹಿ ಸುದ್ದಿ, ವಿಪಕ್ಷಗಳಿಗೆ ಶಾಕ್, CAA ವಿರೊಧಿಸಿದವರಿಗೆ ಶಾಕ್ ನೀಡಿ ಸುಪ್ರೀಂ ಹೊರಡಿಸಿದ ೪ ಮಹತ್ವದ ಆದೇಶಗಳು ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಪೌರತ್ವ ತಿದ್ದು ಪಡಿ ಮಸೂದೆ ಇದೀಗ ದೇಶದ ಅಧಿಕೃತ ಕಾನೂನಾಗಿ ಮಾರ್ಪಟ್ಟು ಹಲವಾರು ದಿನಗಳಾಗಿವೆ. ಆದರೂ ಪಟ್ಟು ಬಿಡದ ಹಲವಾರು ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ವಿಪಕ್ಷಗಳ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಹೋರಾಟದ ಕಹಳೆ ಊದಿದ್ದರು.

ಪಂಜಾಬ್, ಪಶ್ಚಿಮ ಬಂಗಾಳ ಹಾಗೂ ಕೇರಳ ಸರ್ಕಾರಗಳು ಒಂದು ಹೆಜ್ಜೆ ಮುಂದೆ ಹೋಗಿ ವಿಧಾನಸಭಾ ಕಲಾಪದಲ್ಲಿ ಮತ ಯಾಚನೆ ಮಾಡಿ, ಬಿಲ್ ಪಾಸ್ ಮಾಡಿ ಯಾವುದೇ ಕಾರಣಕ್ಕೂ ಪೌರತ್ವ ತಿದ್ದು ಪಡಿ ಮಸೂದೆ ಯಾಗಲಿ ಅಥವಾ NRC ಯೋಜನೆಗಳಾಗಲಿ ನಮ್ಮ ರಾಜ್ಯದಲ್ಲಿ ಜಾರಿಯಾಗಲು ಬಿಡುವುದಿಲ್ಲ ಎಂದು ಬಹಿರಂಗವಾಗಿ ಕೇಂದ್ರದ ವಿರುದ್ಧ ತೊಡೆ ತಟ್ಟಿದ್ದರು. ಹಾಗೂ ಇತರ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಕೇಂದ್ರದ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಹೋರಾಟ ಮಾಡಲು ಸಿದ್ಧರಾಗಿದ್ದರು ಹಾಗೂ ಪೌರತ್ವ ತಿದ್ದುಪಡಿ ಮಸೂದೆಗೆ ವಿಚಾರಣೆ ನಡೆಯುವವರಿಗೂ ತಡೆ ನೀಡಿ ಎಂದು ಮನವಿ ಮಾಡಿದ್ದರು.

ಆದರೆ ಇದೀಗ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದ್ದು ೪ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ, ಹೌದು ಮೊದಲಿಗೆ ಯಾವುದೇ ಹೈ ಕೋರ್ಟ್ ಗಳು ಪೌರತ್ವ ತಿದ್ದು ಪಡಿ ಮಸೂದೆಯ ಕೇಸ್ ಗಳನ್ನೂ ವಿಚಾರಣೆ ನಡೆಸುವಂತಿಲ್ಲ. ಎಲ್ಲಾ ಅರ್ಜಿಗಳನ್ನು ನೇರವಾಗಿ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ. ಎರಡನೇಯದಾಗಿ ಪೌರತ್ವ ತಿದ್ದು ಪಡಿ ಮಸೂದೆಗೆ ಸುಪ್ರೀಂ ಕೋರ್ಟ್ ತಡೆ ಅರ್ಜಿಯನ್ನು ನೀಡಲಾಗುವುದಿಲ್ಲ. ಪೌರತ್ವ ತಿದ್ದು ಪಡಿ ಮಸೂದೆ ಮುಂದುವರೆಯಲಿದೆ. ಯಾವುದೇ ಕಾರಣಕ್ಕೂ ತಡೆ ನೀಡಲಾಗುವುದಿಲ್ಲ ಹಾಗೂ ಮೂರನೆಯದಾಗಿ ಕೆಲವರು CAA ಯೋಜನೆಯನ್ನು ಮುಂದಕ್ಕೆ ಹಾಕುವಂತೆ ಮನವಿ ಮಾಡಿದ್ದರು, ಆದರೆ ಇದಕ್ಕೂ ಸುಪ್ರೀಂ ಕೋರ್ಟ್ ಅಸ್ತು ಎನ್ನದೇ ಮುಂದೆ ಹಾಕಲು ಸಾಧ್ಯವಿಲ್ಲ ಎಂದಿದೆ. ಅಷ್ಟೇ ಅಲ್ಲದೇ ಕೊನೆಯದಾಗಿ ಅಸ್ಸಾಂ ಮತ್ತು ತ್ರಿಪುರ ವಿಷಯಗಳನ್ನು ಪ್ರತ್ಯೇಕವಾಗಿ ವ್ಯವಹರಿಸಲಾಗುವುದು ಎಂದು ತಿಳಿಸಿದೆ ಹಾಗೂ ಈ ವಿಚಾರದಲ್ಲಿ ಕಪಿಲ್ ಸಿಬಲ್ ಸಹಾಯವನ್ನು ಕೋರಿ ಕೇಂದ್ರಕ್ಕೆ ಉತ್ತರಿಸಲು ನೋಟೀಸ್ ನೀಡಿ 4 ವಾರಗಳ ಟೈಮ್ ನೀಡಿದೆ. ಕೇಂದ್ರ ಸರ್ಕಾರಕ್ಕೆ ಎಲ್ಲಾ ರೀತಿಯ ಮಾಹಿತಿ ನ್ಯಾಯಾಲಯಕ್ಕೆ ನೀಡಿ ಎಂದು ನೋಟೀಸ್ ಜಾರಿ ಮಾಡಲಾಗಿದೆ ಹಾಗೂ ಎಲ್ಲಾ ಅರ್ಜಿಗಳನ್ನು ವಿಚಾರಣೆ ನಡೆಸಲು ಪ್ರತ್ಯೇಕ ಸಾಂವಿಧಾನಿಕ ಪೀಠ ರಚನೆ ಮಾಡಿ ಐವರು ನ್ಯಾಯಮೂರ್ತಿಗಳ ಸಾವಿಂಧಾನಿಕ ಪೀಠಕ್ಕೆ ವರ್ಗಾಯಿಸಿದೆ