ಪಾಕ್ ಪರ ನಿಂತಿದ್ದಕ್ಕೆ ಮೋದಿ ಕೊಟ್ಟ ಏಟಿಗೆ ತತ್ತರಿಸಿದ ಮಲೇಶಿಯಾ ! ಭಾರತದ ಮುಂದೆ ಸೋಲೊಪ್ಪಿಕೊಂಡು ಹೇಳಿದ್ದೇನು ಗೊತ್ತಾ? ಇಷ್ಟಾದರೂ ಮತ್ತೊಮ್ಮೆ ಕೆಣಕಿ ಹೇಳಿದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನರೇಂದ್ರ ಮೋದಿರವರು ಒಂದೆಡೆ ದೇಶದ ವರ್ಚಸ್ಸನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿದ್ದಾರೆ ಹಾಗೂ ಭಾರತದ ಶಕ್ತಿಯನ್ನು ಸಾರಿ ಹೇಳಿದ್ದಾರೆ. ಅಷ್ಟೇ ಅಲ್ಲದೇ, ಸದಾ ಶಾಂತಿ ಪ್ರಿಯರಾಗಿರುವ ನರೇಂದ್ರ ಮೋದಿರವರು ದೇಶದ ವಿಷಯ ಬಂದಾಗ ಮಾತ್ರ ಕಠಿಣ ನಿರ್ಧಾರ ತೆಗೆದು ಕೊಳ್ಳುವುದರಲ್ಲಿ ಹಿಂದೆ ಮುಂದೆ ನೋಡುವುದಿಲ್ಲ ಎಂಬುದರಲ್ಲಿ ಎರಡು ಮಾತಿಲ್ಲ. ಇದನ್ನು ಜನರು ಪಕ್ಷಾತೀತವಾಗಿ ಒಪ್ಪಿಕೊಳ್ಳುತ್ತಾರೆ.

ವಿಶ್ವದ ಹಲವಾರು ರಾಷ್ಟ್ರಗಳೊಂದಿಗೆ ಉತ್ತಮ ಸ್ನೇಹವನ್ನು ಬೆಳೆಸಿಕೊಂಡಿರುವ ಭಾರತ ದೇಶವು ನನ್ನ ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ ಎಂಬುದನ್ನು ಈ ಹಿಂದೆ ಹಲವಾರು ಬಾರಿ ಸಾರಿ ಹೇಳಿದೆ,ಇದೀಗ ಮತ್ತೊಮ್ಮೆ ಅದೇ ರೀತಿ ಸಾರಿ ಹೇಳಿದೆ. ಹೌದು ಇತ್ತೀಚೆಗಷ್ಟೇ ಜಮ್ಮು ಹಾಗೂ ಕಾಶ್ಮೀರ ಭಾರತದ ಆಂತರಿಕ ವಿಚಾರವಾದರೂ ಪಾಕಿಸ್ತಾನ ದೇಶವು ಅಂತರಾಷ್ಟ್ರೀಯ ಮಟ್ಟದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ವಿವಿಧ ದೇಶಗಳ ಬೆಂಬಲ ಪಡೆದು ಕೊಳ್ಳಲು ಪ್ರಯತ್ನ ಪಟ್ಟಿತ್ತು. ವಿಶ್ವದ ಕೇವಲ ಬೆರಳೆಣಿಕೆಯಷ್ಟು ರಾಷ್ಟ್ರಗಳು ಮಾತ್ರ ಪಾಕಿಸ್ತಾನದ ಪರ ನಿಂತಿದ್ದವು, ಆ ದೇಶಗಳಲ್ಲಿ ಪ್ರಮುಖ ವಾದವು ಮಲೇಶಿಯಾ, ಚೀನಾ ಹಾಗೂ ಟರ್ಕಿ ದೇಶಗಳು. ಇದೇ ಕಾರಣಕ್ಕಾಗಿ ಮೂರು ದೇಶಗಳಿಗೆ ಬುದ್ದಿ ಕಲಿಸಲು ಮುಂದಾದ ನರೇಂದ್ರ ಮೋದಿರವರು ಮಲೇಶಿಯಾ ದೇಶದ ಪ್ರಮುಖ ರಫ್ತುಗಳಲ್ಲಿ ಒಂದಾಗಿರುವ ತಾಳೆ ಎಣ್ಣೆ ಆಮದು ನಿಲ್ಲಿಸಿ ಮಲೇಶಿಯಾ ದೇಶದ ಆರ್ಥಿಕ ಪರಿಸ್ಥಿತಿಗೆ ಭಾರಿ ಪೆಟ್ಟು ಕೊಡಲು ಮುಂದಾಗಿ ಆಮದನ್ನು ಸಂಪೂರ್ಣ ವಾಗಿ ನಿಲ್ಲಿಸಿದ್ದರು.

ಇದರ ಕುರಿತು ಹಲವಾರು ದಿನಗಳ ಬಳಿಕ ಮಾತನಾಡಿ ರುವ ಮಲೇಶಿಯಾ ದೇಶದ ಪ್ರಧಾನಿ ಮಹತಿರ್ ಮುಹಮ್ಮದ್ ರವರು ನಾವು ಒಂದು ಚಿಕ್ಕ ದೇಶ, ನಾವು ಭಾರತದ ವಿರುದ್ಧ ಯಾವ ನಿರ್ಣಯಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ. ಭಾರತ ದೇಶ ಈ ರೀತಿ ಮಾಡ ಬಾರದಾಗಿತ್ತು, ಆಂತರಿಕ ವಿಷಯ ಎಂದ ಮಾತ್ರಕ್ಕೆ ಈ ರೀತಿ ಮಾಡುವುದು ಎಷ್ಟು ಸರಿ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ನಾವು ಯಾವುದೇ ರೀತಿಯ ಪ್ರತೀಕಾರದ ಕ್ರಮ ಕೈಗೊಳ್ಳಲು ತುಂಬಾ ಚಿಕ್ಕವರು, ಭಾರತದ ಈ ಕ್ರಮವನ್ನು ನಿವಾರಣೆ ಮಾಡಲು ನಾವು ಇತರ ಮಾರ್ಗಗಳನ್ನು ಕಂಡು ಕೊಳ್ಳಲೇಬೇಕು ಎಂದು ಹೇಳಿಕೆ ನೀಡಿದ್ದಾರೆ. ಇಷ್ಟೆಲ್ಲಾ ಆಗಿ ಭಾರತದ ಜೊತೆ ಮಾತುಕತೆ ನಡೆಸುತ್ತೇವೆ ಎಂದ ಬಳಿಕ ಮಹತಿರ್ ಮುಹಮ್ಮದ್ ರವರು ಪೌರತ್ವ ತಿದ್ದುಪಡಿ ಮಸೂದೆಯನ್ನು ಜಾರಿಗೊಳಿಸಿರುವುದು ಅನ್ಯಾಯ ಎಂದು ಕೊನೆಯಲ್ಲಿ ಹೇಳಿಕೆ ನೀಡಿ ಮತ್ತೊಮ್ಮೆ ಭಾರತವನ್ನು ಕೆಣಕಿದ್ದಾರೆ.