CAA ಕುರಿತು ಕೆಲವರ ವಿರೋಧಕ್ಕೂ ಖ್ಯಾರೇ ಎನ್ನದ ಮೋದಿ ! ಆದೇಶ ಹೊರಡಿಸಿದ್ದು ಏನು ಗೊತ್ತಾ? CAA ಯಾವ ಕ್ಷಣದಿಂದ ಜಾರಿಯಾಗುತ್ತದೆ ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ 2014ರ ಡಿಸೆಂಬರ್ 31 ನೇ ತಾರೀಖಿನ ಮೊದಲು ಭಾರತಕ್ಕೆ ವಲಸೆ ಬಂದಿರುವ ಅಲ್ಪ ಸಂಖ್ಯಾತರಿಗೆ(ಮೂಲ ದೇಶಗಳಲ್ಲಿ ಅಲ್ಪ ಸಂಖ್ಯಾತರಿಗೆ ಮಾತ್ರ) ಪೌರತ್ವ ನೀಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿ ಪೌರತ್ವ ತಿದ್ದುಪಡಿ ಮಸೂದೆಯನ್ನು ಜಾರಿಗೊಳಿಸಿತ್ತು. ಈ ಮಸೂದೆಗೆ ಪರ-ವಿರೋಧದ ಚರ್ಚೆಗಳು ಹೆಚ್ಚಾಗಿದ್ದವು.

ಈ ಮಸೂದೆಗೆ ವಿರೋಧ ಮಾಡುತ್ತಿರುವವರು ಹಲವಾರು ಕಡೆ ಹಿಂಸಾಚಾರ ಪ್ರತಿಭಟನೆಗಳು ಮಾಡಿದ ಕಾರಣ ಮಾಧ್ಯಮಗಳು ಟಿ ಆರ್ ಪಿ ಗಾಗಿ ಕೇವಲ ವಿರೋಧದ ಪ್ರತಿಭಟನೆಗಳನ್ನು ಮಾತ್ರ ಬಿಂಬಿಸಿ ಇಡೀ ದೇಶವೇ ಈ ಮಸೂದೆಯ ವಿರುದ್ಧ ಹೋರಾಟ ಮಾಡುತ್ತಿದೆ ಎಂಬಂತೆ ಬಿಂಬಿಸಿದ್ದವು. ಆದರೆ ಬಿಜೆಪಿ ಪಕ್ಷ ಹಾಗೂ ಕೆಲವು ಜವಾಬ್ದಾರಿಯುತ ಮಾಧ್ಯಮಗಳು ಈ ಮಸೂದೆ ಬೆಂಬಲಿಸುವವರ ಅಭಿಪ್ರಾಯವನ್ನು ಪಡೆದು ದೇಶದ ಬಹುತೇಕ ಜನರು ಪೌರತ್ವ ತಿದ್ದುಪಡಿ ಮಸೂದೆ ಬೆಂಬಲಕ್ಕೆ ನಿಂತಿದ್ದಾರೆ ಎಂಬುದನ್ನು ಸಾಬೀತು ಪಡಿಸಿದರು. ಬಿಜೆಪಿ ಪಕ್ಷವು ಕೂಡ ಹಲವಾರು ಕಡೆ ಬೆಂಬಲಿತ ರ್ಯಾಲಿಗಳನ್ನು ನಡೆಸಿತ್ತು, ಅಷ್ಟೇ ಯಾಕೆ ಹಲವಾರು ರಾಜ್ಯಗಳಲ್ಲಿ ಸ್ವಯಂ ಪ್ರೇರಿತವಾಗಿ ಹಲವಾರು ಅಭಿಯಾನಗಳು, ಪಾದಯಾತ್ರೆಗಳು ನಡೆದಿದ್ದವು.

ಈ ಎಲ್ಲಾ ಅಂಶವನ್ನು ಗಮನಿಸಿದಾಗ ಕೇಂದ್ರ ಸರ್ಕಾರದ ಇನ್ನು ಪರ ವಿರೋಧದ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಅಧಿಕೃತ ಆದೇಶವನ್ನು ಹೊರಡಿಸಿದೆ. ಪೌರತ್ವ ತಿದ್ದುಪಡಿ ಮಸೂದೆಯನ್ನು ನಿನ್ನೆ ಸಂಜೆಯ (Jan 10) ಹೊತ್ತಿಗೆ ಜಾರಿಗೊಳಿಸಿ, ಈ ಕ್ಷಣದಿಂದ ಪೌರತ್ವ ತಿದ್ದುಪಡಿ ಮಸೂದೆ ಭಾರತದಲ್ಲಿ ಜಾರಿಯಾಗುತ್ತದೆ ಎಂದು ಅಧಿಕೃತವಾಗಿ ಆದೇಶ ಹೊರಡಿಸಿದೆ. ಈ ಮೂಲಕ ಪೌರತ್ವ ತಿದ್ದುಪಡಿ ಮಸೂದೆ ಇದೀಗ ಭಾರತ ಸಂವಿಧಾನದ ಕಾನೂನಾಗಿ ಮಾರ್ಪಟ್ಟಿತು. ಭಾರತ ಸಂವಿಧಾನಕ್ಕೆ ಒಮ್ಮೆಲೆ ಸೇರಿದ ಕಾರಣ ಇಂದಿನಿಂದ ಕೇಂದ್ರ ಸರ್ಕಾರವು, ರಾಜ್ಯ ಸರ್ಕಾರಗಳು ವಿರೋಧ ಮಾಡಿದರೂ, ಯಾವುದೇ ಅಡ್ಡಿಗಳು ಎದುರು ಬಂದರೂ ವಿದೇಶಗಳಲ್ಲಿ ಅಲ್ಪ ಸಂಖ್ಯಾತರು ಎಂದು ಗುರುತಿಸಿ ಕೊಂಡು ದೌರ್ಜನ್ಯಕ್ಕೊಳಗಾಗಿ ವಲಸೆ ಬಂದಿರುವ ಜನರಿಗೆ ಭಾರತೀಯ ಪೌರತ್ವ ನೀಡಬಹುದಾಗಿದೆ. ಈ ವಿಷಯದ ಕುರಿತು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸಿ.