ಉದ್ಧವ ಠಾಕ್ರೆಗೆ ಮತ್ತೊಂದು ಬಿಗ್ ಶಾಕ್ ! ಮಹಾರಾಷ್ಟ್ರ ಸರ್ಕಾರದಲ್ಲಿ ಮತ್ತೊಂದು ಮಹತ್ವದ ವಿದ್ಯಮಾನ ! ನಡೆದದ್ದೇನು ಗೊತ್ತಾ?? ಪುತ್ರ ವ್ಯಾಮೋಹದ ಎಫೆಕ್ಟ್

ನಮಸ್ಕಾರ ಸ್ನೇಹಿತರೇ, ಸಚಿವ ಸಂಪುಟ ವಿಸ್ತರಣೆ ಆದಮೇಲೆ ಮೂರು ಪಕ್ಷಗಳ ಮಹಾ ಮೈತ್ರಿಯಲ್ಲಿ ಭಿನ್ನಮತ ಭುಗಿಲೆದ್ದಿದೆ. ಮೊದಲಿಗೆ ಎನ್ಸಿಪಿ ಪಕ್ಷದ ಶಾಸಕರೊಬ್ಬರು ರಾಜೀನಾಮೆ ನೀಡಿದ್ದರು. ತದನಂತರ ಕಾಂಗ್ರೆಸ್ ಪಕ್ಷದ ನಾಯಕರು ಕಾಂಗ್ರೆಸ್ ಪಕ್ಷದ ಕಚೇರಿಯನ್ನು ಧ್ವಂಸ ಮಾಡಿ ಸೋನಿಯಾ ಗಾಂಧಿ ಅವರ ವಿರುದ್ಧ ಸಿಡಿದೆದ್ದಿದ್ದರು.

ಈ ಎರಡು ವಿದ್ಯಮಾನಗಳ ನಡುವೆ ಶಿವಸೇನಾ ಪಕ್ಷವನ್ನು ಬಿಜೆಪಿ ಪಕ್ಷದ ಜೊತೆ ಮೈತ್ರಿ ತೊರೆದುಕೊಂಡು, ಎನ್ಸಿಪಿ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವೆ ಮೈತ್ರಿ ಮಾಡಿ ಕೊಳ್ಳುವಲ್ಲಿ ಮಹತ್ವದ ಪಾತ್ರವಹಿಸಿದ್ದ ಸಂಜಯ್ ರಾವತ್ ರವರು ತಮ್ಮ ಸಹೋದರನಿಗೆ ಸಚಿವ ಸ್ಥಾನ ನೀಡಿಲ್ಲ ಎಂದು ಮುನಿಸಿಕೊಂಡಿದ್ದು ಶಿವಸೇನ ಪಕ್ಷದ ಅಧ್ಯಕ್ಷರು ಉದ್ಧವ ಠಾಕ್ರೆ ರವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಇದಾದ ಕೆಲವೇ ಕೆಲವು ದಿನಗಳಲ್ಲಿ ಇದೀಗ ಶಿವಸೇನಾ ಪಕ್ಷದಲ್ಲಿ ಭಿನ್ನಮತ ಮತ್ತೊಮ್ಮೆ ಭುಗಿಲೆದ್ದಿದೆ. ಪಕ್ಷದ ಹಿರಿಯ ನಾಯಕರನ್ನು ಕಡೆಗಣಿಸಿ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಆದಿತ್ಯ ಠಾಕ್ರೆ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಿರುವುದನ್ನು ಶಿವಸೇನಾ ಪಕ್ಷದ ಹಿರಿಯ ನಾಯಕರು ಸಹಿಸುತ್ತಿಲ್ಲ.

ಇದರಿಂದ ಕೆರಳಿರುವ ಶಿವಸೇನಾ ಪಕ್ಷದ ಏಕೈಕ ಮುಸ್ಲಿಂ ಶಾಸಕ ಅಬ್ದುಲ್ ಸತ್ತಾರ್ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ಬಿಟ್ಟು ಶಿವಸೇನಾ ಪಕ್ಷ ಸೇರಿದ್ದ ಅಬ್ದುಲ್ ಸತ್ತಾರ್ ಅವರು ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದರು, ಆದರೆ ಈಗ ಸಚಿವ ಸ್ಥಾನ ಸಿಗದೇ ನಿರಾಶೆಗೊಂಡು ರಾಜೀನಾಮೆ ನೀಡಿದ್ದಾರೆ ಎಂಬ ಮಾಹಿತಿಗಳು ಕೇಳಿ ಬಂದಿವೆ. ಆದರೆ ಅಧಿಕೃತವಾಗಿ ರಾಜ್ಯಪಾಲರಿಗೆ ಇನ್ನೂ ಅಬ್ದುಲ್ ರವರು ಯಾವುದೇ ರಾಜೀನಾಮೆ ಸಲ್ಲಿಸಿಲ್ಲ ಎಂದು ಶಿವಸೇನಾ ಪಕ್ಷದ ಸಂಜಯ್ ರಾವತ್ ಅವರು ಹೇಳಿಕೆ ನೀಡಿದ್ದಾರೆ. ಆದರೆ ಅಬ್ದುಲ್ ಸತ್ತಾರ್ ಹಾಗೂ ಅವರ ಬೆಂಬಲಿಗರು ಕೂಡ ರಾಜೀನಾಮೆ ನೀಡಲಾಗಿದೆ ಎಂದು ಖಚಿತ ಪಡಿಸಿರುವ ಕಾರಣ ಇದೀಗ ಉದ್ಧವ್ ಠಾಕ್ರೆ ರವರ ಸರ್ಕಾರ ಮತ್ತಷ್ಟು ಅಲುಗಾಡುತ್ತಿದೆ.