ಸರ್ಕಾರ ರಚಿಸಿದ ಸಂಜಯ್ ರಾವತ್ ಕೈಕೊಟ್ಟ ಉದ್ಧವ್ ಠಾಕ್ರೆ ! ಸಚಿವ ಸಂಪುಟದ ಬೆನ್ನಲ್ಲೇ ಶಿವಸೇನೆಯಲ್ಲಿ ಭಿನ್ನಮತ ! ನಡೆದದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಈ ಹಿಂದೆಯೂ ಕಳೆದ ಹಲವು ಬಾರಿ ಶಿವಸೇನಾ ಹಾಗೂ ಬಿಜೆಪಿ ಪಕ್ಷದ ಮೈತ್ರಿಯಲ್ಲಿ ಭಿನ್ನಮತೀಯ ಮಾತುಗಳು ಕೇಳಿ ಬಂದಿದ್ದವು. ಆದರೆ ಶಿವಸೇನಾ ಪಕ್ಷವು ಇಲ್ಲಿಯವರೆಗೂ ತನ್ನ ಸಿದ್ಧಾಂತಗಳಿಗೆ ವಿರುದ್ಧವಾಗಿ ಕೆಲಸ ನಿರ್ವಹಣೆ ಮಾಡುತ್ತಿದ್ದ ಕಾಂಗ್ರೆಸ್ ಅಥವಾ ಎನ್ಸಿಪಿ ಪಕ್ಷಗಳ ನಡುವೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿರಲಿಲ್ಲ.

ಅಷ್ಟೇ ಅಲ್ಲದೇ ಸ್ಥಳೀಯ ಚುನಾವಣೆಯಲ್ಲಿ ಹೀನಾಯ ಸೋಲನ್ನು ಕಂಡ ಮೇಲೆ ಯಾವುದೇ ಕಾರಣಕ್ಕೂ ಶಿವಸೇನಾ ಪಕ್ಷ ಬಿಜೆಪಿ ಪಕ್ಷದ ಸಖ್ಯ ಬಿಡುವುದಿಲ್ಲ ಎಂದು ಎಲ್ಲರೂ ನಂಬಿದ್ದರು. ಆದರೆ ಬಿಜೆಪಿ ಪಕ್ಷದ ಸಖ್ಯ ತೊರೆದುಕೊಂಡು ಕಾಂಗ್ರೆಸ್ ಹಾಗೂ ಎನ್ಸಿಪಿ ಪಕ್ಷಗಳ ನಡುವೆ ಮೈತ್ರಿ ಮಾಡಿ ಕೊಳ್ಳಲು ಪ್ರಮುಖ ಕಾರಣ ವೆಂದರೆ ಮಾಜಿ ಸಂಸದ ಸಂಜಯ್ ರಾವತ್. ಅನವಶ್ಯಕವಾಗಿ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದಷ್ಟೇ ಅಲ್ಲದೇ ಬಿಜೆಪಿ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳದೆ ಇರಲು ಯಾವ ರೀತಿಯ ಕಾರ್ಯಗಳು ಬೇಕೋ ಅದೇ ರೀತಿ ಕಾರ್ಯಗಳನ್ನು ನಿರ್ವಹಣೆ ಮಾಡಿ ಕೊನೆಗೂ ಬಿಜೆಪಿ ಪಕ್ಷದ ಜೊತೆ ಮೈತ್ರಿ ಮುರಿದು ಕೊಳ್ಳುವಂತೆ ಮಾಡಿ ಮಹಾರಾಷ್ಟ್ರದಲ್ಲಿ ಹೊಸ ಮೈತ್ರಿಗೆ ನಾಂದಿ ಹಾಡಿದ್ದರು.

ಉದ್ಧವ್ ಠಾಕ್ರೆ ಅವರ ಪಕ್ಕ ಬಂಟನಾಗಿದ್ದ ಸಂಜಯ್ ರಾವತ್ ಅವರು ಇಷ್ಟೆಲ್ಲ ಮಾಡಿದ ಬಳಿಕ ತನ್ನ ಸಹೋದರ ಸುನಿಲ್ ರಾವ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಉದ್ಧವ್ ಠಾಕ್ರೆ ಅವರ ಬಾರಿ ಲಾಬಿ ನಡೆಸಿದ್ದರು. ಆದರೆ ಉದ್ಧವ್ ಠಾಕ್ರೆ ಅವರು ಭರವಸೆ ನೀಡಿದ ನಂತರ ಕೊನೆ ಕ್ಷಣದಲ್ಲಿ ಸುನಿಲ್ ರಾವತ್ ರವರಿಗೆ ಸಚಿವ ಸ್ಥಾನ ನೀಡಿಲ್ಲ, ಇದರಿಂದ ಕುಪಿತಗೊಂಡಿರುವ ಹಿರಿಯ ನಾಯಕ ಸಂಜಯ್ ರಾವತ್ ರವರು ಸಚಿವ ಸಂಪುಟ ಪ್ರಮಾಣವಚನ ಕಾರ್ಯಕ್ರಮಕ್ಕೂ ಹಾಜರಾಗದೇ ಮುನಿಸಿ ಕೊಂಡಿದ್ದಾರೆ. ಕೇವಲ ಮೈತ್ರಿಗಾಗಿ ಯಾವುದೇ ಸಂಬಂಧವಿಲ್ಲದಿದ್ದರೂ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಗಮನ ಸೆಳೆದಿದ್ದ ಸಂಜಯ್ ರಾವತ್ ಅವರು ಇದೀಗ ತಮ್ಮ ಸಹೋದರನಿಗೂ ಸಚಿವ ಸ್ಥಾನ ಧಕ್ಕಿಸಿಕೊಳ್ಳಲಾಗದೆ ಹಾಗೂ ತಮ್ಮ ಸ್ಥಾನವನ್ನು ಕೂಡ ಕಳೆದುಕೊಂಡು ರಾಜಕೀಯದಲ್ಲಿ ಅತಂತ್ರ ಸ್ಥಿತಿ ತಲುಪಿದ್ದಾರೆ.