ವಿಶ್ವ ದಾಖಲೆ ನಿರ್ಮಾಣ ಮಾಡಿದ CAA ಪರವಾದ ಅಭಿಯಾನ ! ಬೆಚ್ಚಿ ಬಿದ್ದ ಪ್ರತಿಷ್ಠಿತ ಟಿವಿ ಸಂಸ್ಥೆ ! ನಡೆದಿದ್ದಾದರೂ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ನೀವು ಪೌರತ್ವ ತಿದ್ದುಪಡಿ ಮಸೂದೆಯ ಪರವಾಗಿ ಮಾತನಾಡಿ ಅಥವಾ ವಿರುದ್ಧವಾಗಿ ಮಾತನಾಡಿ ಪರವಾಗಿಲ್ಲ. ಆದರೆ ಬಹುತೇಕ ಮಾಹಿತಿಗಳ ಪ್ರಕಾರ ಪೌರತ್ವ ತಿದ್ದುಪಡಿ ವಿಚಾರದಲ್ಲಿ ಮಾಧ್ಯಮಗಳು ತಮ್ಮ ಕೆಲಸವನ್ನು ನಿರ್ವಹಣೆ ಮಾಡದ ಕಾರಣ ಬಹುತೇಕ ಕಡೆ ಪ್ರತಿಭಟನೆಗಳು ನಡೆಯುತ್ತಿವೆ. ಅಷ್ಟೇ ಅಲ್ಲದೆ ಬಹುತೇಕ ಮಾಧ್ಯಮಗಳಲ್ಲಿ ಕೇವಲ ಪ್ರತಿಭಟನೆಗಳನ್ನು ಮಾತ್ರ ತೋರಿಸಿ ಜನರನ್ನು ಪ್ರಚೋದನೆ ಮಾಡಲಾಗುತ್ತಿದೆ ಎಂಬ ಆರೋಪ ಕೂಡ ಕೇಳಿಬಂದಿದೆ.

ಅಷ್ಟರಲ್ಲಾಗಲೇ ಇದೇ ಮಾಹಿತಿಯನ್ನು ಕಂಡ ದೇಶದ ಪ್ರತಿಷ್ಠಿತ ಸಂಸ್ಥೆಯಾದ ಜೀ ನ್ಯೂಸ್ ಸಂಸ್ಥೆಯು ಜನರ ಅಭಿಪ್ರಾಯವನ್ನು ಕಲೆ ಹಾಕಿ ದೇಶದ ಮುಂದೆ ಇಡಲು ನಿರ್ಧಾರ ಮಾಡಿತ್ತು. ಈ ಅಭಿಯಾನವನ್ನು ಆರಂಭಿಸುವ ಮುನ್ನ ಎಲ್ಲಾ ಅಭಿಯಾನ ಗಳಂತೆ ಇದು ಕೂಡ ಕೇವಲ ಒಂದು ಸಾಮಾನ್ಯ ಜನಾಭಿಪ್ರಾಯ ಸಂಗತಿಯೆಂದು ಸಂಸ್ಥೆ ಅಂದು ಕೊಂಡಿತ್ತು. ಆದರೆ ಈ ಅಭಿಯಾನವು ಎಷ್ಟರ ಮಟ್ಟಕ್ಕೆ ತಲುಪಿದೆ ಎಂದರೇ ಈಗ ವಿಶ್ವ ದಾಖಲೆಯನ್ನು ನಿರ್ಮಾಣ ಮಾಡಿದೆ, ಇಡೀ ವಿಶ್ವದಲ್ಲಿ ಒಂದು ಕಾನೂನಿನ ಪರವಾಗಿ ಇದೇ ಮೊಟ್ಟಮೊದಲ ಬಾರಿಗೆ ಇಷ್ಟು ಜನಾಭಿಪ್ರಾಯ ಸಂಗ್ರಹವಾಗಿದ್ದು, ಜೀ ಸಂಸ್ಥೆಯು ಈ ಹಿಂದೆ ಎಂದೂ ಪಡೆಯದ ಸಂಖ್ಯೆಗಳಷ್ಟು ಜನಾಭಿಪ್ರಾಯವನ್ನು ಸಂಗ್ರಹಣೆ ಮಾಡಿದೆ.

ಹೌದು ಕಳೆದ ವಾರ ಜೀ ಸಂಸ್ಥೆಯು ಪೌರತ್ವ ತಿದ್ದುಪಡಿ ಮಸೂದೆಯನ್ನು ಬೆಂಬಲ ಮಾಡುವುದಾದರೆ 2 ಟೋಲ್ ಫ್ರೀ ನಂಬರನ್ನು ನೀಡಿ ಈ ನಂಬರ್ಗೆ ಮಿಸ್ ಕಾಲ್ ಕೊಡುವಂತೆ ಮನವಿ ಮಾಡಿತ್ತು. ಅಷ್ಟೇ ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಜನರ ಅಭಿಪ್ರಾಯವನ್ನು ಸಂಗ್ರಹ ಮಾಡಲು ಮುಂದಾಗಿತ್ತು. ಅಭಿಯಾನ ಆರಂಭವಾದ ನಂತರ ಜೀ ಸಂಸ್ಥೆಯು ಮೊದಲ ದಿನವೇ 81,000 ಮಿಸ್ ಕಾಲ್ ಗಳನ್ನು ಪಡೆದಿತ್ತು. ತದನಂತರ ದಿನೇದಿನೇ ಮಿಸ್ ಕಾಲ್ ಗಳ ಸಂಖ್ಯೆ ಲಕ್ಷಗಟ್ಟಲೆ ಏರಿಕೆಯಾಗಿ 10 ಲಕ್ಷ, 20 ಲಕ್ಷ, 18 ಲಕ್ಷ, 13 ಲಕ್ಷ, 23 ಲಕ್ಷ, 15 ಲಕ್ಷ ಹೀಗೆ ಪ್ರತಿಯೊಂದು ದಿನವೂ ಲಕ್ಷಗಟ್ಟಲೆ ಮಿಸ್ ಕಾಲ್ ಪಡೆದುಕೊಂಡಿದೆ. ನಿನ್ನೆ ರಾತ್ರಿಗೆ ಈ ಅಭಿಯಾನದ ಪರವಾಗಿ ಬರೋಬ್ಬರಿ ಒಂದು ಕೋಟಿಗೂ ಹೆಚ್ಚು ಮಿಸ್ ಕಾಲ್ ಗಳು ಬಂದಿವೆ ಎಂದು ವರದಿ ಮಾಡಿದೆ. ಈ ಮೂಲಕ ಪೌರತ್ವ ತಿದ್ದುಪಡಿ ಮಸೂದೆಯ ಪರವಾದ ಅಭಿಯಾನವು ವಿಶ್ವ ದಾಖಲೆಯನ್ನು ನಿರ್ಮಾಣ ಮಾಡಿದೆ.

amith shahbjpBJP KarnatakaCAANarendra modiZee News