ಸರ್ಕಾರ ರಚಿಸಿ ಬೀಗುತ್ತಿರುವ ಸಂದರ್ಭದಲ್ಲಿ ಶಿವಸೇನಾಗೆ ಬಿಗ್ ಶಾಕ್ ! ನಡೆಯುತ್ತಿರುವುದಾದ್ರು ಏನು ಗೊತ್ತಾ?

ಮಹಾರಾಷ್ಟ್ರ ರಾಜ್ಯದಲ್ಲಿ ತಮ್ಮ ಲೆಕ್ಕಾಚಾರ ಗಳಂತೆ ಇಂದು ಉದ್ಧವ್ ಠಾಕ್ರೆ ಅವರು ಎನ್ಸಿಪಿ ಹಾಗೂ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೇ ಏರಿದ್ದಾರೆ. ಊಹಿಸಿದಂತೆ ಕಾಂಗ್ರೆಸ್ ಹಾಗೂ ಎನ್ಸಿಪಿ ಪಕ್ಷಗಳ ನಡುವಿನ ಮೈತ್ರಿಗೆ ಶಿವಸೇನಾ ಪಕ್ಷದ ಮೂಲ ಕಾರ್ಯಕರ್ತರು ಒಪ್ಪುತ್ತಿಲ್ಲ. ಬಾಳಾ ಠಾಕ್ರೆ ಅವರ ಅನುಯಾಯಿ ಗಳು ಹಾಗೂ ಶಿವಾಜಿ ಮಹಾರಾಜರ ಬೆಂಬಲಿಗರು ಕಾಂಗ್ರೆಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳಲು ಮನಸ್ಸು ತೋರುತ್ತಿಲ್ಲ.

ಆದರೆ ಉದ್ಧವ್ ಠಾಕ್ರೆ ಅವರ ಕುಟುಂಬ ತನ್ನ ಆತ್ಮೀಯ ಕೆಲವು ನಾಯಕರ ಜೊತೆ ಚರ್ಚೆ ಮಾಡಿ ಮೈತ್ರಿ ಮಾಡಿಕೊಳ್ಳಲು ಮುಂದಾದಾಗ ಹಲವು ಕಾರ್ಯಕರ್ತರು ಸಿಡಿದೆದ್ದಿದ್ದರು. ಶಾಸಕರು ಕೂಡ ಬಿಜೆಪಿ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವ ಒಲವು ತೋರಿದ್ದರು. ಆದರೆ ಎಲ್ಲಾ ಬಂಡಾಯವನ್ನು ಕಡೆಗಣಿಸಿ ಶಾಸಕರ ಮನವೊಲಿಸಿ ಅದೇಗೋ ಶಿವಸೇನಾ ಪಕ್ಷವು ಕಾಂಗ್ರೆಸ್ ಹಾಗೂ ಎನ್ಸಿಪಿ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳಲು ಶಾಸಕರ ಒಪ್ಪಿಗೆ ಪಡೆದು ಕೊಂಡಿತ್ತು. ಮೈತ್ರಿ ಖಚಿತವಾದ ಕೆಲವೇ ಕೆಲವು ಗಂಟೆಗಳಲ್ಲಿ ಶಿವಸೇನಾ ಪಕ್ಷದ ಹಿರಿಯ ನಾಯಕ ರಮೇಶ್ ಸೋಲಂಕಿ ರವರು ರಾಜೀನಾಮೆ ನೀಡುವ ಮೂಲಕ ತನ್ನ ಪಕ್ಷ ತನ್ನ ಮೂಲ ಸಿದ್ಧಾಂತಗಳಿಗೆ ವಿರುದ್ಧ ವಾಗಿ ನಡೆಯುತ್ತಿದೆ, ರಾಮನ ಅಸ್ತಿತ್ವವನ್ನು ಪ್ರಶ್ನೆ ಮಾಡಿದ ಕಾಂಗ್ರೆಸ್ ಪಕ್ಷದ ಜೊತೆ ಮೈತ್ರಿ ಮಾಡಿ ಕೊಳ್ಳುತ್ತಿರುವ ಕಾರಣ ಪಕ್ಷ ತೊರೆಯುತ್ತಿದ್ದೇನೆ ಎಂದು ರಾಜೀನಾಮೆ ನೀಡಿದ್ದರು.

ಇದೀಗ ರಮೇಶ್ ಸೋಲಂಕಿ ಅವರನ್ನು ಹೊರತು ಪಡಿಸಿ ಶಿವಸೇನಾ ಪಕ್ಷದ ಬರೋಬ್ಬರಿ 400 ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ವಲಸೆ ಹೋಗುವ ನಿರ್ಧಾರ ಮಾಡಿ ಇಂದು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಹತ್ತು ವರ್ಷಗಳಿಂದ ಶಿವಸೇನಾ ಪಕ್ಷದ ಹಿಂದುತ್ವದ ಸಿದ್ದಂತವನ್ನೇ ಬೆಂಬಲಿಸುತ್ತಾ ಬಂದಿದ್ದೇವೆ, ಆದರೆ ಇದೀಗ ಶಿವಸೇನಾ ಪಕ್ಷವು ತನ್ನ ಸಿದ್ದಂತದ ವಿರುದ್ಧ ನಡೆಯುತ್ತಿದೆ ಅದೇ ಕಾರಣಕ್ಕೆ ಶಿವಸೇನಾ ತೊರೆದಿದ್ದೇವೆ ಎಂದು ಕಾರ್ಯಕರ್ತರು ತಿಳಿಸಿದ್ದಾರೆ. ಹಲವಾರು ವರ್ಷಗಳಿಂದ ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷವನ್ನು ವಿರೋಧಿಸುತ್ತಾ ಬಾಳ ಠಾಕ್ರೆಯ ರವರು ರಾಜಕೀಯದಲ್ಲಿ ಬೆಳೆದಿದ್ದರು. ಒಂದು ಅರ್ಥದಲ್ಲಿ ಹೇಳ ಬೇಕೆಂದರೆ ಕಾಂಗ್ರೆಸ್ ಪಕ್ಷದ ವಿರುದ್ಧ ತೊಡೆ ತಟ್ಟಲು ಹಾಗೂ ಹಿಂದುತ್ವದ ಮೌಲ್ಯಗಳನ್ನು ಎತ್ತಿ ಹಿಡಿದು ಛತ್ರಪತಿ ಶಿವಾಜಿ ರವರ ಮೌಲ್ಯಗಳನ್ನು ಮರಾಠಿಗರಲ್ಲಿ ಉಳಿಸಲು ಶಿವಸೇನಾ ಪಕ್ಷವನ್ನು ಸ್ಥಾಪಿಸಿ ಅರಿವು ಮೂಡಿಸಲು ಮುಂದಾಗಿದ್ದರು. ಇದೀಗ ತಮ್ಮ ಮೂಲ ಸಿದ್ಧಾಂತಗಳನ್ನು ಹೊರತು ಪಡಿಸಿ ಶಿವಸೇನಾ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳಲು ಸಾಧ್ಯವಿರದ ಕಾರಣ ಬಹುತೇಕ ಕಾರ್ಯಕರ್ತರು ಶಿವಸೇನಾ ಪಕ್ಷವನ್ನು ತೊರೆಯುವ ನಿರ್ಧಾರ ಮಾಡಿದ್ದಾರೆ. ಇದರಿಂದ ಬಿಜೆಪಿ ಪಕ್ಷಕ್ಕೆ ಆನೆಬಲ ಬಂದಿರುವುದಂತೂ ಸುಳ್ಳಲ್ಲ.