ಶಿವ ಸೇನಾ ಪಕ್ಷಕ್ಕೆ ಮರ್ಮಾಘಾತ ! ಶಾಕ್ ಕೊಟ್ಟ ನಿತಿನ್ ಗಡ್ಕರಿ !

ಇದೀಗ ಮಹಾರಾಷ್ಟ್ರದಲ್ಲಿ ಶಿವಸೇನಾ ಹಾಗೂ ಬಿಜೆಪಿ ಪಕ್ಷದ ನಡುವಿನ ಮೈತ್ರಿ ಮತ್ತಷ್ಟು ಕಗ್ಗಂಟಾಗಿದೆ. ಶಿವಸೇನಾ ಪಕ್ಷವು ಯಾವುದೇ ಕಾರಣಕ್ಕೂ ಮುಖ್ಯ ಮಂತ್ರಿ ಸ್ಥಾನವನ್ನು ನೀಡದೆ ಮೈತ್ರಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಪಟ್ಟು ಹಿಡಿದು ಕುಳಿತಿದೆ. ಮತ್ತೊಂದೆಡೆ ಬಿಜೆಪಿ ಪಕ್ಷವು ಮುಖ್ಯ ಮಂತ್ರಿ ಸ್ಥಾನವನ್ನು ಎರಡುವರೆ ವರ್ಷ ಅಲ್ಲ ಒಂದು ದಿನವೂ ಬಿಟ್ಟು ಕೊಡಲು ಸಾಧ್ಯವಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದೆ. ಈ ಎಲ್ಲ ವಿದ್ಯಮಾನಗಳ ನಡುವೆ ನಿತಿನ್ ಗಡ್ಕರಿ ರವರನ್ನು ಮಧ್ಯಸ್ಥಿಕೆ ವಹಿಸುವಂತೆ ಶಿವಸೇನಾ ಪಕ್ಷ ಒತ್ತಾಯ ಮಾಡಿತ್ತು.

ಇಷ್ಟು ಸಾಲದು ಎಂಬಂತೆ ಆರ್ಎಸ್ಎಸ್ ಸಂಸ್ಥೆಯು ನಿತಿನ್ ಗಡ್ಕರಿ ರವರನ್ನು ಮುಖ್ಯ ಮಂತ್ರಿ ಮಾಡಲಿದೆ ಎಂಬ ಸುದ್ದಿ ಕೂಡ ಹರಿದಾಡಿತ್ತು. ಕೆಲವು ಬಿಜೆಪಿ ನಾಯಕರು ಕೂಡ ನಿತಿನ್ ಗಡ್ಕರಿ ಮತ್ತೊಮ್ಮೆ ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಿಕೆ ನೀಡಿದ ಕಾರಣ ಹಾಗೂ ನಿತಿನ್ ಗಡ್ಕರಿ ರವರ ಮಾತಿಗೆ ಶಿವ ಸೇನಾ ಪಕ್ಷವು ಎದುರು ಹೇಳುವುದಿಲ್ಲ ಎಂಬ ಕಾರಣಕ್ಕೆ ನಿತಿನ್ ಗಡ್ಕರಿರವರೇ ಮುಂದಿನ ಮುಖ್ಯಮಂತ್ರಿ ಎಂಬ ಬಲವಾದ ಮಾತುಗಳು ಕೇಳಿ ಬಂದಿದ್ದವು. ಆದರೆ ನಿತಿನ್ ಗಡ್ಕರಿ ಈ ಎಲ್ಲ ಊಹಾಪೋಹಗಳಿಗೆ ಮುಖ್ಯಮಂತ್ರಿ ಯಾಗುವುದಿಲ್ಲ ಎಂದು ತೆರೆ ಎಳೆದಿದ್ದರು.

ಇದರ ನಡುವೇ, ಶಿವ ಸೇನಾ ಪಕ್ಷವು ನಿತಿನ್ ಗಡ್ಕರಿ ರವರು ಮಾತ್ರ ನಮ್ಮ ಹಾಗೂ ಬಿಜೆಪಿ ಪಕ್ಷದ ನಡುವಿನ ಮನಸ್ತಾಪವನ್ನು ಶಮನ ಮಾಡಬಹುದು. ಕೇವಲ ೨ ಗಂಟೆಯಲ್ಲಿ ನಿತಿನ್ ಗಡ್ಕರಿ ಈ ಸಮಸ್ಯೆಗೆ ಪರಿಹಾರ ನೀಡಿ ಸರ್ಕಾರ ರಚಿಸುವಂತೆ ಮಾಡುತ್ತಾರೆ ಎಂದಿದ್ದರು. ಖುದ್ದು ಉದ್ಧವ್ ಠಾಕ್ರೆ ರವರು ಸಹ ನಿತಿನ್ ಗಡ್ಕರಿ ರವರು ಮಧ್ಯಸ್ಥಿಕೆ ವಹಿಸಬೇಕು ಎಂದು ಮನವಿ ಮಾಡಿದ್ದರು. ಇದೀಗ ಈ ಮನವಿಗೆ ಸ್ಪಂದನೆ ನೀಡಿರುವ ನಿತಿನ್ ಗಡ್ಕರಿ ರವರು, ಶಿವಸೇನಾ ಪಕ್ಷಕ್ಕೆ ಶಾಕ್ ನೀಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ನಿತಿನ್ ಗಡ್ಕರಿ ರವರು, ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮುವ ಪಕ್ಷದಿಂದಲೇ ಮುಖ್ಯಮಂತ್ರಿ ಆಯ್ಕೆಯಾಗಬೇಕು ಎಂದು ಕೇವಲ ನಾವು ಮಾತ್ರ ಹೇಳುತ್ತಿಲ್ಲ. ಶಿವಸೇನೆ ಪಕ್ಷದ ಸಂಸ್ಥಾಪಕ ಬಾಳ್ ಠಾಕ್ರೆ ಅವರೂ ಹಲವು ಬಾರಿ ಇದನ್ನೇ ಹೇಳಿದ್ದಾರೆ. ನಾನು ಸರ್ಕಾರ ರಚನೆಗೆ ಸಂಬಂಧ ಪಟ್ಟಂತೆ ಬಿಜೆಪಿ ಹಾಗೂ ಶಿವಸೇನೆ ಪಕ್ಷಗಳ ನಡುವೆ ಮಧ್ಯಸ್ಥಿಕೆ ವಹಿಸಲು ಸಿದ್ಧವಿದ್ದೇನೆ. ಆದರೆ ಯಾವುದೇ ಮುಖ್ಯಮಂತ್ರಿ ಸ್ಥಾನವನ್ನು ಹಂಚಿಕೊಳ್ಳುವ ಸೂತ್ರಕ್ಕೆ ನಾನು ಒಪ್ಪಿಗೆ ನೀಡುವುದಿಲ್ಲ ಎಂದು ಶಿವಸೇನಾ ಪಕ್ಷದ ಕೊನೆ ಭರವಸೆಗೆ ತಣ್ಣೀರು ಎರಚಿದ್ದಾರೆ.ಇನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ಯಾಗಿ ದೇವೇಂದ್ರ ಫಡ್ನವಿಸ್ ಅವರೇ ಮುಂದುವರಿಯ ಬೇಕು ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.