ಯಾರನ್ನೂ ಬಿಡದ ಐಟಿ ! ಉಪ ಚುನಾವಣೆ ಸಂದರ್ಭದಲ್ಲಿ ಅನರ್ಹ ಶಾಸಕರಿಗೆ ಐಟಿ ಶಾಕ್ !

ದೇಶದಲ್ಲಿ 60 ವರ್ಷಗಳ ಕಾಲ ಅಧಿಕಾರ ನಡೆಸಿರುವ ಕಾಂಗ್ರೆಸ್ ಪಕ್ಷವು ಇದೀಗ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳಲು ಬೇಕಾದಂತಹ ಸ್ಥಾನಗಳನ್ನು ಪಡೆದು ಕೊಳ್ಳುವಲ್ಲಿ ವಿಫಲವಾಗಿದೆ. ಆದರೆ ಈ ಎಲ್ಲಾ ಸೋಲುಗಳಿಗೂ ಈವಿಎಂ ಹಾಗೂ ನರೇಂದ್ರ ಮೋದಿ ಸರ್ಕಾರ ಐಟಿ ಇಲಾಖೆಯಿಂದ ದುರ್ಬಳಕೆ ಮಾಡಿಕೊಂಡು ಬಲಿಷ್ಠ ನಾಯಕರನ್ನು ತುಳಿಯುವ ಕೆಲಸ ಮಾಡುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.

ಹಲವಾರು ಬಿಜೆಪಿ ನಾಯಕರ ಹಾಗೂ ಬಿಜೆಪಿ ಬೆಂಬಲಿಗರ ಮೇಲೆ ಐಟಿ ದಾಳಿ ನಡೆದರೂ ಸಹ ಯಾವ ಮಾಧ್ಯಮಗಳು ತೋರಿಸುವುದಿಲ್ಲ. ಮಾಧ್ಯಮಗಳು ತಮ್ಮ ಕೆಲಸವನ್ನು ತಾವು ಮಾಡುತ್ತಿಲ್ಲ, ಕೇವಲ ಟಿ ಆರ್ ಪಿ ಗಾಗಿ ಕೆಲಸ ಮಾಡುತ್ತಿರುವ ಮಾಧ್ಯಮಗಳ ನಡುವೆ ಇದೀಗ ಬಿಜೆಪಿ ಸರ್ಕಾರ ರಚನೆ ಮಾಡಲು ಬೆನ್ನೆಲುಬಾಗಿ ನಿಂತು ಮೈತ್ರಿ ಸರ್ಕಾರದ ಬಂಡಾಯ ಶಾಸಕರನ್ನು ಒಟ್ಟುಗೂಡಿಸಿ ಮೈತ್ರಿ ಸರ್ಕಾರವನ್ನು ಉರುಳಿಸಿದ್ದ ರಮೇಶ್ ಜಾರಕಿಹೊಳಿ ರವರ ಆಸ್ತಿಗಳ ಮೇಲೆ ಐಟಿ ಇಲಾಖೆ ದಾಳಿ ನಡೆಸಿದ ಸುದ್ದಿಯನ್ನು ನಾವು ನಿಮ್ಮ ಮುಂದೆ ಇಡುತ್ತಿದ್ದೇವೆ. ಈ ಸುದ್ದಿಯನ್ನು ಮಾತ್ರ ಯಾವ ಮಾಧ್ಯಮಗಳು ಪ್ರಸಾರ ಮಾಡುತ್ತಿಲ್ಲ.

ಕೆಲವು ಮಾಧ್ಯಮಗಳು ತೋರಿಸಿದರೂ, ಕೇವಲ ಚಿಕ್ಕ-ಚಿಕ್ಕ ಹೆಡ್ಲೈನ್ ಗಳಿಗೆ ಮಾತ್ರ ಈ ಸುದ್ದಿ ಸೀಮಿತವಾಗಿದೆ. ಇದೀಗ ಬಿಜೆಪಿ ಪಕ್ಷದಿಂದ ಚುನಾವಣಾ ಟಿಕೆಟ್ ನಿರೀಕ್ಷೆಯಲ್ಲಿ ಕಾಯುತ್ತಿರುವ ರಮೇಶ್ ಜಾರಕಿಹೊಳಿ ರವರು ಈಗಾಗಲೇ ತಮ್ಮ ವಿರೋಧಿಗಳನ್ನು ತಮ್ಮ ಬಳಿ ಸೇರಿಸಿಕೊಂಡು ಇಡೀ ಗೋಕಾಕ್ ಕ್ಷೇತ್ರವನ್ನು ಕೇಸರಿಮಯ ಮಾಡಿದ್ದಾರೆ. ಆದರೆ ಈ ವಿದ್ಯಮಾನಗಳ ಬೆನ್ನಲ್ಲೇ, ರಮೇಶ್ ಜಾರಕಿಹೊಳಿ ರವರ ಮಾಲೀಕತ್ವದ ಸಕ್ಕರೆ ಕಾರ್ಖಾನೆಗಳ ಮೇಲೆ ಐಟಿ ದಾಳಿ ನಡೆದು ಬರೋಬ್ಬರಿ 105 ಕೋಟಿ ಮೌಲ್ಯದ ಷೇರುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸುಮಾರು 34 ಹೆಸರುಗಳಲ್ಲಿ 105 ಕೋಟಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡು ಶಾಕ್ ನೀಡಿರುವ IT ಇಲಾಖೆ, ರಮೇಶ್ ರವರ ಪತ್ನಿ, ಮಕ್ಕಳು ಹಾಗೂ ತಮ್ಮ ಸಂಬಧಿಕರ ಹೆಸರಿನಲ್ಲಿ ಬೇನಾಮಿ ಆಸ್ತಿ ಇಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಬಗ್ಗೆ ವಿಚಾರಣೆಗೆ ಒಳ ಪಡಿಸಿದಾಗ ಪತ್ನಿ ಹಾಗೂ ಮಕ್ಕಳು ನಮಗೆ ಯಾವುದರ ಬಗ್ಗೆಯೂ ತಿಳಿದಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲದೇ, ತನಿಖೆಯ ವೇಳೆಯಲ್ಲಿ 8 ಸಹಕಾರಿ ಸಂಘಗಳು ಅಸ್ತಿತ್ವದಲ್ಲೇ ಇಲ್ಲ ಎಂಬ ಷಾಕಿಂಗ್ ಸುದ್ದಿ ಸಿಕ್ಕಿ ಹಾಕಿಕೊಂಡಿದೆ.ಎಲ್ಲರ ಹೂಡಿಕೆಯ ಕೇಂದ್ರಬಿಂದುವಾದ ಸೌಭಾಗ್ಯ ಶುಗರ್ಸ್ ಸಂಸ್ಥೆ ವಾಸ್ತವದಲ್ಲಿ ಬೇನಾಮಿ ಎಂಬುದು ಐಟಿ ತನಿಖೆಯಿಂದ ತಿಳಿದುಬಂದಿದೆ