ಡಿಕೆ ಶಿವಕುಮಾರ್ ವಿರುದ್ಧ ಗೆದ್ದು ಬೀಗಿದ ಸುಧಾಕರ್ ! ಡಿಕೆಶಿಗೆ ದಿನಕ್ಕೊಂದು ಶಾಕ್ !

ಡಿ.ಕೆ ಶಿವಕುಮಾರ್ ಅವರು ಜಾಮೀನು ಪಡೆದುಕೊಂಡು ಹೊರಬಂದ ನಂತರ ಉಪ ಚುನಾವಣೆಯಲ್ಲಿ ತಮ್ಮ ನಾಯಕತ್ವದ ಗುಣಗಳನ್ನು ಪ್ರದರ್ಶನ ಮಾಡಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಕೊಂಡು ಬರುತ್ತಾರೆ ಎಂಬ ಆಲೋಚನೆಯಲ್ಲಿ ಎಲ್ಲರೂ ತೊಡಗಿದ್ದರು. ಅಷ್ಟೇ ಅಲ್ಲದೇ ಬಿಜೆಪಿ ಪಕ್ಷಕ್ಕೆ ಹೊಸ ರೀತಿಯ ಸವಾಲುಗಳನ್ನು ಎಸೆದು ತಲೆನೋವಾಗಿ ಪರಿಣಮಿಸುತ್ತಾರೆ ಎಂದು ಅಂದು ಕೊಂಡಿದ್ದರು. ಆದರೆ ಇದೀಗ ಎಲ್ಲಾ ಲೆಕ್ಕಾಚಾರಗಳು ಉಲ್ಟಾ ಹೊಡೆದಿವೆ.

ಜೈಲಿನಿಂದ ಹೊರಬಂದ ಮೇಲೆ ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡ ಸ್ಥಾನದ ಹುದ್ದೆಯ ನಿರೀಕ್ಷೆಯಲ್ಲಿದ್ದ ಡಿ.ಕೆ ಶಿವಕುಮಾರ್ ರವರು ಇದೀಗ ಯಾವುದೇ ಸ್ಥಾನಮಾನವನ್ನು ಪಡೆಯಲಾಗದೆ ಕಂಗಾಲಾಗಿದ್ದಾರೆ. ಇದರ ಬೆನ್ನಲ್ಲೇ ಅನರ್ಹ ಶಾಸಕರ ವಿರುದ್ಧ ತೊಡೆ ತಟ್ಟುವ ಮಾತುಗಳನ್ನು ಆಡಿ ಸವಾಲು ಎಸೆದಿದ್ದ ಡಿ.ಕೆ ಶಿವಕುಮಾರ್ ಅವರು ಜೈಲಿಗೆ ಹೋಗಿ ಬಂದ ನಂತರ ಮೆತ್ತಗಾದಂತೆ ಕಾಣುತ್ತಿದೆ. ಎಂಟಿಬಿ ನಾಗರಾಜ್ ರವರ ವಿರುದ್ಧ ಜೈಲಿಗೆ ಹೋಗುವ ಮುನ್ನ ಕಿಡಿಕಾರಿದ್ದ ಡಿ.ಕೆ ಶಿವಕುಮಾರ್ ರವರು ಹೊಸಕೋಟೆ ಅಖಾಡದಲ್ಲಿ ಎಂಟಿಬಿ ನಾಗರಾಜ್ ಅವರನ್ನು ಸೋಲಿಸುವುದಾಗಿ ಶಪಥ ಮಾಡಿದ್ದರು. ಆದರೆ ಜೈಲಿನಿಂದ ಬಿಡುಗಡೆಯಾದ ಮೇಲೆ ನಾನು ಯಾವ ರಾಜಕೀಯ ವಿಚಾರಕ್ಕೂ ಹೋಗುವುದಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಹೊಸಕೋಟೆ ಅಖಾಡಕ್ಕೆ ಇಳಿಯುವುದಿಲ್ಲ ಎಂದಿದ್ದರು.

ಇದರ ಬೆನ್ನಲ್ಲೇ ಕಳೆದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷ ಸೇರಿಕೊಂಡು ರಚನೆ ಮಾಡಿದ್ದ ಮೈತ್ರಿ ಸರ್ಕಾರದ ಅವಧಿಯಲ್ಲಿ ಕನಕಪುರ ತಾಲೂಕಿಗೆ ವೈದ್ಯಕೀಯ ಕಾಲೇಜನ್ನು ಮಂಜೂರು ಮಾಡಲಾಗಿತ್ತು. ಆದರೆ ಬಿಎಸ್ ಯಡಿಯೂರಪ್ಪನವರು ಅಧಿಕಾರಕ್ಕೆ ಬಂದ ತಕ್ಷಣ ಕನಕಪುರ ತಾಲೂಕಿಗೆ ನೀಡಿದ್ದ ಮೆಡಿಕಲ್ ಕಾಲೇಜನ್ನು ಚಿಕ್ಕಬಳ್ಳಾಪುರ ತಾಲೂಕಿಗೆ ಸ್ಥಳಾಂತರ ಮಾಡಲಾಗಿದೆ. ಇದನ್ನು ತಿಳಿದ ಡಿ.ಕೆ ಶಿವಕುಮಾರ್ ಅವರು ಪ್ರಾಣ ಹೋದರೂ ಸಹ ಮೆಡಿಕಲ್ ಕಾಲೇಜ್ ಅನ್ನು ಕನಕಪುರಕ್ಕೆ ತರುವುದಾಗಿ ಶಪಥಮಾಡಿ ರಾಜಕೀಯ ನಿವೃತ್ತಿಯ ಸವಾಲು ಎಸೆದಿದ್ದರು.

ಇವರ ವಿರುದ್ಧ ತೊಡೆ ತಟ್ಟಿದ್ದ ಅನರ್ಹ ಶಾಸಕ ಸುಧಾಕರ್ ಅವರು ಬಹಿರಂಗವಾಗಿ ಡಿಕೆ ಶಿವಕುಮಾರ್ ಅವರಿಗೆ, ಕಾಲೇಜು ಸ್ಥಳಾಂತರ ಮಾಡಲು ನಿಮ್ಮ ಕೈಯಲ್ಲಿ ಸಾಧ್ಯವಾದರೇ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಹೇಳಿ ಮರುದಿನ ಬಿಎಸ್ ಯಡಿಯೂರಪ್ಪನವರನ್ನು ಭೇಟಿಯಾಗಿ ಯಾವುದೇ ಕಾರಣಕ್ಕೂ ಮೆಡಿಕಲ್ ಕಾಲೇಜ್ ಅನ್ನು ಸ್ಥಳಾಂತರ ಮಾಡಬಾರದು ಎಂದು ಮನವಿ ಮಾಡಿಕೊಂಡಿದ್ದರು.

ಇದೀಗ ಈ ಮನವಿಗೆ ಸ್ಪಂದನೆ ನೀಡಿರುವ ಬಿಎಸ್ ಯಡಿಯೂರಪ್ಪನವರು ಯಾವುದೇ ಕಾರಣಕ್ಕೂ ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಮೆಡಿಕಲ್ ಕಾಲೇಜ್ ಸ್ಥಳಾಂತರ ಮಾಡುವುದಿಲ್ಲ. ಕನಕಪುರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಹೋಲಿಕೆ ಮಾಡಿನೋಡಿದರೆ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮೆಡಿಕಲ್ ಕಾಲೇಜ್ ಅತ್ಯಗತ್ಯವಾಗಿದೆ. ಅಷ್ಟೇ ಅಲ್ಲದೇ ಕನಕಪುರ ಕ್ಷೇತ್ರಕ್ಕೆ ಮತ್ತೊಂದು ಮೆಡಿಕಲ್ ಕಾಲೇಜ್ ನೀಡಲು ಸಾಧ್ಯವಿಲ್ಲ, ತಾಲೂಕಿಗೆ ಒಂದು ಮೆಡಿಕಲ್ ಕಾಲೇಜು ನೀಡಲು ಸಾಧ್ಯವೇ?? ಯಾವುದೇ ಕಾರಣಕ್ಕೂ ಡಿಕೆ ಶಿವಕುಮಾರ್ ಅವರು ಹೇಳಿದಂತೆ ಕನಕಪುರ ತಾಲ್ಲೂಕಿನಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಯಾಗುವುದಿಲ್ಲ ಎಂದು ಖಡಾಖಂಡಿತವಾಗಿ ಕಡ್ಡಿ ಮುರಿದಂತೆ ಹೇಳಿಕೆ ನೀಡಿದ್ದಾರೆ.