ರೆಡ್ ಹ್ಯಾಂಡ್ ಹಾಗಿ ಸಿಕ್ಕಿಬಿದ್ದ ಸಿದ್ದು, ರೊಚ್ಚಿಗೆದ್ದ ಹೈ ಕಮಾಂಡ್ ! ಸಿದ್ದು ವಿರುದ್ಧದ ಬಣಕ್ಕೆ ಭರ್ಜರಿ ಸಿಹಿಸುದ್ದಿ

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮೊದಲಿನಿಂದಲೂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರ ನಡುವೆ ಶೀತಲ ಸಮರ ನಡೆಯುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಪಕ್ಷದಲ್ಲಿ ತಮ್ಮದೇ ಆದ ಪ್ರಭಾವವನ್ನು ಮೂಡಿಸಲು ಇಬ್ಬರು ನಾಯಕರ ನಡುವೆ ಹಲವಾರು ವರ್ಷಗಳಿಂದ ಶೀತಲ ಸಮರ ನಡೆಯುತ್ತಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿರುವುದು ಅಷ್ಟೇ ಅಲ್ಲದೆ ಜನರು ಸಹ ಈ ಮಾತುಗಳನ್ನು ಒಪ್ಪಿಕೊಳ್ಳುತ್ತಾರೆ.

ಇನ್ನು ಡಿಕೆ ಶಿವಕುಮಾರ್ ಅವರು ಜೈಲಿನಿಂದ ಬಿಡುಗಡೆಯಾದ ಮೇಲೆ ಈ ಎಲ್ಲಾ ಶೀತಲ ಸಮರ ಗಳ ಮಾತುಗಳಿಗೆ ಪೂರಕ ಎಂಬಂತೆ ಸಿದ್ದರಾಮಯ್ಯ ರವರು ಸ್ವಾಗತ ಕಾರ್ಯಕ್ರಮವನ್ನು ನೋಡಿ ಈ ಕಾರ್ಯಕ್ರಮವನ್ನು ಕಾಂಗ್ರೆಸ್ ಪಕ್ಷ ಆಯೋಜನೆ ಮಾಡಿಲ್ಲ. ಇದಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಇದು ಕೇವಲ ಡಿ.ಕೆ ಶಿವಕುಮಾರ್ ಅವರ ಬೆಂಬಲಿಗರ ಸ್ವಾಗತ ಕಾರ್ಯಕ್ರಮ ಎಂದು ಹೇಳುವ ಮೂಲಕ ಎಲ್ಲರ ಹುಬ್ಬೇರಿಸಿದ್ದರು. ಇನ್ನು ಡಿಕೆಶಿ ಬಂಧನವಾದ ಸಮಯದಲ್ಲಿ ಕಾಂಗ್ರೆಸ್ ಪಕ್ಷ ಪ್ರತಿಭಟನೆ ನಡೆಸಿದ ಎಲ್ಲಾ ಕಾರ್ಯಕ್ರಮಗಳಿಂದ ಸಿದ್ದರಾಮಯ್ಯ ದೂರ ಉಳಿದಿದ್ದರು. ಬಿಡುಗಡೆಯಾದ ಮೇಲೆ ಉಪಚುನಾವಣೆಗೆ ತಯಾರಿ ಮಾಡಿಕೊಳ್ಳಲು ಉತ್ತರ ಕರ್ನಾಟಕಕ್ಕೆ ತೆರಳಿರುವ ಕಾರಣ ನೀಡಿ ಸ್ವಾಗತ ಕಾರ್ಯಕ್ರಮದಲ್ಲಿ ಭಾಗಿಯಾಗಿರಲಿಲ್ಲ.

ಸಿದ್ದರಾಮಯ್ಯ ರವರ ಈ ನಡೆಯಿಂದ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಅಂದೇ ವಿರೋಧ ಮಾಡಿತ್ತು. ಅಂದು ಯಾವುದೋ ಕಾರಣ ಹೇಳಿ ತಪ್ಪಿಸಿಕೊಂಡಿದ್ದ ಸಿದ್ದರಾಮಯ್ಯ ರವರು ಇದೀಗ ನಡೆದ ಡಿಕೆಶಿ ಸ್ವಾಗತ ಕಾರ್ಯಕ್ರಮದಲ್ಲಿ ಸಹ ಇದೇ ರೀತಿಯ ಕಾರಣ ನೀಡಿದ್ದಾರೆ. ಇದರಿಂದ ಕುಪಿತಗೊಂಡಿರುವ ಸೋನಿಯಾಗಾಂಧಿ ರವರು ಸಿದ್ದರಾಮಯ್ಯ ರವರಿಗೆ ಚಾಟಿ ಬೀಸಿದ್ದಾರೆ. ಈಗಾಗಲೇ ಮೊದಲೇ ತಿಳಿಸಿದಂತೆ ಡಿ.ಕೆ ಶಿವಕುಮಾರ್ ಅವರ ಸ್ವಾಗತ ಕಾರ್ಯಕ್ರಮಕ್ಕೆ ಎಲ್ಲಾ ಕಾಂಗ್ರೆಸ್ ನಾಯಕರು ಕಡ್ಡಾಯವಾಗಿ ಹಾಜರಿರಬೇಕಾಗಿ ಇತ್ತು, ಆದರೆ ನೀವು ಯಾವುದೋ ನೆಪ ನೀಡಿ ಉತ್ತರ ಕರ್ನಾಟಕಕ್ಕೆ ತೆರಳಿದ್ದೀರಾ. ಅಧಿಕೃತ ಆದೇಶ ನೀಡಿದರೂ ನೀವು ಪಾಲಿಸಿಲ್ಲ ಎಂದು ಸೋನಿಯಾಗಾಂಧಿ ಗುಡುಗಿದ್ದಾರೆ.

ಈ ಎಲ್ಲಾ ಸುದ್ದಿಗಳನ್ನು ಕೇಳಿಸಿಕೊಂಡ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಅಹ್ಮದ್ ಪಾಟೀಲ್ ಅವರು ಸಿದ್ದರಾಮಯ್ಯ ಅವರಿಗೆ ಸಂದೇಶ ರವಾನೆ ಮಾಡಿ ಈ ಕೂಡಲೇ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಎಂದಾಗ, ಬೇರೆ ದಾರಿಯಿಲ್ಲದೆ ಸಿದ್ದರಾಮಯ್ಯ ರವರು ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದೆ. ಇದೀಗ ಈ ಘಟನೆಯಿಂದ ಸಿದ್ದರಾಮಯ್ಯರವರ ವಿರುದ್ಧ ಇಷ್ಟು ದಿವಸ ಕತ್ತಿ ಮಸೆಯುತ್ತಿದ್ದ ಗುಂಪು ಇದೀಗ ಮತ್ತೊಮ್ಮೆ ಸಕ್ರಿಯವಾಗಿದ್ದು, ಸಿದ್ದರಾಮಯ್ಯ ರವರ ವಿರುದ್ಧ ಹೈಕಮಾಂಡ್ ಗೆ ಮತ್ತೊಂದು ದೂರು ಸಲ್ಲಿಸಲು ಸಿದ್ಧರಾಗಿದ್ದಾರೆ ಎನ್ನಲಾಗಿದೆ. ಒಟ್ಟಾಗಿ ಡಿ.ಕೆ ಶಿವಕುಮಾರ್ ಅವರ ಬಿಡುಗಡೆಯ ಕಾರ್ಯಕ್ರಮ ಕಾಂಗ್ರೆಸ್ ಪಕ್ಷದಲ್ಲಿ ಹೊಸ ಸಂಚಲನವನ್ನು ಮೂಡಿಸಿದೆ, ಈ ಸಂಚಲನ ಕಾಂಗ್ರೆಸ್ ಪಕ್ಷದಲ್ಲಿ ಯಾವ ರೀತಿಯ ಬಿರುಗಾಳಿಯನ್ನು ಸೃಷ್ಟಿಸುತ್ತದೆ ಎಂಬುದನ್ನು ಕಾದುನೋಡಬೇಕಿದೆ.