ಮೋದಿಗೆ ಮಾಸ್ಟರ್ ಪ್ಲಾನ್ ನೀಡಿದ ಸ್ವಾಮಿ ! ಬೆದರಿಕೆ ಹಾಕುತ್ತಿದ್ದ ಪಾಪಿಗಳ ಅಂತ್ಯಕ್ಕೆ ನಾಂದಿ ಮಾಡಲು ಮುಂದಾದ ಸ್ವಾಮಿ !!

ಜಮ್ಮು ಹಾಗೂ ಕಾಶ್ಮೀರ ವಿಷಯದಲ್ಲಿ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿರುವ ಕ್ಷಣದಿಂದ ಪಾಕಿಸ್ತಾನಕ್ಕೆ ತನ್ನ ಹತಾಶೆಯನ್ನು ಮರೆಮಾಚಲು ಸಾಧ್ಯವಾಗುತ್ತಿಲ್ಲ. ಪಾಕಿಸ್ತಾನದ ಅಧ್ಯಕ್ಷ ಇಮ್ರಾನ್ ಖಾನ್ ರವರು ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ಮನಬಂದಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಭಾರತದ ಜೊತೆ ಪಾಕಿಸ್ತಾನವೂ ಯುದ್ಧ ಮಾಡಲು ಸಿದ್ಧವಿದೆ ಎಂದೆಲ್ಲ ಹೇಳಿಕೆ ನೀಡುತ್ತಿರುವ ಇಮ್ರಾನ್ ಖಾನ್ ರವರು, ಪಾಕಿಸ್ತಾನದ ತಾಕತ್ತು ಏನೆಂಬುದನ್ನು ಸಂಪೂರ್ಣವಾಗಿ ಮರೆತಂತೆ ಕಾಣುತ್ತಿದೆ. ಇಷ್ಟೇ ಅಲ್ಲದೆ ತನ್ನಿಂದ ಭಾರತ ಬದುಕುತ್ತಿದೆ ಎಂಬ ಊಹಾಪೋಹಗಳನ್ನು ಆಲೋಚನೆ ಮಾಡಿ ಭಾರತದ ಜೊತೆ ವ್ಯಾಪಾರ ಸಂಬಂಧಗಳನ್ನು ಕಳೆದುಕೊಂಡಿದೆ.

ಈಗಾಗಲೇ ಆರ್ಥಿಕತೆ ಹಿಂಜರಿಕೆ ಎದುರಿಸುತ್ತಿರುವ ಪಾಕಿಸ್ತಾನವು, ತನ್ನ ಸರ್ಕಾರ ನಡೆಸಲು ಸಹ ಹಣವಿಲ್ಲದೆ ಇತರ ದೇಶಗಳ ಬಳಿ ಭಿಕ್ಷೆ ಬೇಡುತ್ತಿದೆ. ಇಮ್ರಾನ್ ಖಾನ್ ರವರು ಹಲವಾರು ದೇಶಗಳನ್ನು ಸುತ್ತಿದ್ದರೂ ಸಹ ಉಗ್ರ ಸಂಘಟನೆಗಳಿಗೆ ಬೆಂಬಲ ನೀಡುತ್ತಿರುವ ಕಾರಣ ಯಾವ ದೇಶವು ಪಾಕಿಸ್ತಾನದಲ್ಲಿ ಹೂಡಿಕೆ ಮಾಡಲು ಮುಂದಾಗುತ್ತಿಲ್ಲ, ಇದಕ್ಕೆಲ್ಲಾ ಬಹುತೇಕ ಕಾರಣ ನರೇಂದ್ರ ಮೋದಿರವರ ರಾಜತಾಂತ್ರಿಕತೆ. ಪಾಕಿಸ್ತಾನದ ಮಿತ್ರರಾಷ್ಟ್ರಗಳ ಪಟ್ಟಿಯನ್ನು ಒಂದೊಂದಾಗಿ ತೆಗೆದು ಕೊಂಡು ಈಗ ಸಂಪೂರ್ಣವಾಗಿ ಪಾಕಿಸ್ತಾನಕ್ಕೆ ವಿದೇಶಿ ಹಣ ಬರೆದ ಹಾಗೆ ತಡೆದಿದ್ದಾರೆ. ಹೀಗಿರುವಾಗ ಇದೀಗ ಪಾಕಿಸ್ತಾನದ ಸಂಪೂರ್ಣ ಅಂತ್ಯಕ್ಕೆ ಹಿಂದೂ ಫೈರ್ ಬ್ರಾಂಡ್ ಎಂದೇ ಖ್ಯಾತಿ ಪಡೆದು ಕೊಂಡಿರುವ ಸುಬ್ರಹ್ಮಣ್ಯ ಸ್ವಾಮಿ ರವರು ಮೋದಿ ರವರಿಗೆ ಮಾಸ್ಟರ್ ಪ್ಲಾನ್ ಒಂದನ್ನು ನೀಡಿದ್ದಾರೆ.

ಈಗಾಗಲೇ ಆರ್ಥಿಕತೆ ತೀವ್ರ ಶೋಚನೀಯವಾಗಿ ರುವ ಸಂದರ್ಭದಲ್ಲಿ ಪಾಕಿಸ್ತಾನವು ಮೊದಲಿನಿಂದಲೂ ವಾಯು ಮಾರ್ಗವನ್ನು ಭಾರತಕ್ಕೆ ಮುಚ್ಚುವುದಾಗಿ ಬೆದರಿಕೆ ಹಾಕುತ್ತಿದೆ. ಇದರಿಂದ ಭಾರತದ 600 ವಿಮಾನಗಳು ತನ್ನ ದಾರಿಯನ್ನು ಬದಲಿಸಿ ನಷ್ಟ ಅನುಭವಿಸಬೇಕಾದ ಪರಿಸ್ಥಿತಿ ಎದುರಾಗುತ್ತದೆ ಎಂಬುದನ್ನು ಅರಿತುಕೊಂಡಿರುವ ಪಾಕಿಸ್ತಾನವು ಭಾರತದ ವಿರುದ್ಧ ಆರ್ಥಿಕತೆಯ ಅಸ್ತ್ರ ಹೂಡಲು ಈ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ಸೂಚನೆ ನೀಡಿದೆ. ಈಗಾಗಲೇ ಎರಡು ಬಾರಿ ಮೊದಲು ವಾಯು ಮಾರ್ಗವನ್ನು ನಿಷೇಧಿ ತದ ನಂತರ ಬೇರೆ ವಿಧಿಯಿಲ್ಲದೆ ವಾಯು ಮಾರ್ಗವನ್ನು ತೆರೆದಿತ್ತು. ಇದೀಗ ಮತ್ತೊಮ್ಮೆ ಅದೇ ಬೆದರಿಕೆ ಹಾಕುತ್ತಿರುವ ಕಾರಣ ಸುಬ್ರಹ್ಮಣ್ಯ ಸ್ವಾಮಿ ರವರು ಮಾಸ್ಟರ್ ಪ್ಲಾನ್ ನರೇಂದ್ರ ಮೋದಿ ಅವರಿಗೆ ನೀಡಿದ್ದಾರೆ.

ಒಂದು ವೇಳೆ ಪಾಕಿಸ್ತಾನವು ವಾಯು ಮಾರ್ಗವನ್ನು ಮುಚ್ಚಿದ್ದಲ್ಲಿ, ಭಾರತವು ತನ್ನ ಸಮುದ್ರ ಮಾರ್ಗದ ಮೂಲಕ ಕರಾಚಿಗೆ ತೆರಳುವ ಮಾರ್ಗವನ್ನು ಮುಚ್ಚಬೇಕು, ಅರಬ್ಬಿ ಸಮುದ್ರದ ಮೂಲಕ ಸಾಗುವ ಹಡಗುಗಳನ್ನು ನಿಲ್ಲಿಸಿದರೆ ಪಾಕಿಸ್ತಾನಕ್ಕೆ ದೊಡ್ಡ ಹೊಡೆತ ಬೀಳಲಿದೆ. ಕರಾಚಿ ಪಾಕಿಸ್ತಾನದ ಹಣಕಾಸು ಮತ್ತು ಕೈಗಾರಿಕಾ ಕೇಂದ್ರವಾಗಿರುವ ಕಾರಣ ಅಂದಾಜು ಜೆಡಿಪಿ 114 ಬಿಲಿಯನ್ ಡಾಲರ್ ಇದೆ. ಸುಮಾರು ಈ ಬಂದರು 26 ಮಿಲಿಯನ್ ಟನ್ ಸರಕುಗಳನ್ನು ಪ್ರತಿವರ್ಷ ನಿರ್ವಹಿಸುತ್ತದೆ ಹಾಗೂ ಸುಮಾರು 1600 ಹಡಗುಗಳು ವಾರ್ಷಿಕವಾಗಿ ಕರಾಚಿ ಬಂದರಿಗೆ ಭೇಟಿ ನೀಡುತ್ತವೆ. ಕಳೆದ ವರ್ಷ 1.3 ಬಿಲಿಯನ್ ರೂಪಾಯಿಗಳ ಆದಾಯವನ್ನು ಗಳಿಸಿದೆ. ಆದಕಾರಣ ಕರಾಚಿಯಲ್ಲಿ ದಾರಿಯಲ್ಲಿ ನೌಕ ದಿಗ್ಬಂಧ ವನ್ನು ಏರಿದರೆ ಪಾಕಿಸ್ತಾನದ ಅಂತ್ಯ ಬಹುತೇಕ ಖಚಿತವಾಗಿದೆ. ಹಾಗೂ ಉಗ್ರರ ನಾಡಿನಲ್ಲಿ ತುತ್ತು ಅನ್ನಕ್ಕೂ ಪರದಾಡುವಂತಹ ಪರಿಸ್ಥಿತಿ ಎದುರಾಗಲಿದೆ. ಈ ವಿಷಯ ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರ ಜೊತೆ ಶೇರ್ ಮಾಡಿ ಹಂಚಿಕೊಳ್ಳಿ, ಮತ್ತಷ್ಟು ಸುದ್ದಿಗಳಿಗಾಗಿ ಕರುನಾಡ ವಾಣಿ ಪೇಜನ್ನು ಲೈಕ್ ಮಾಡಿ ಫಾಲೋ ಮಾಡಿ.

bjpBJP KarnatakaIndia vs PakKannada NewskarachiKarunaada VaaniNarendra modiPakistanSubramanyan Swamy