ಅವಕಾಶ ತಪ್ಪಿದ ತಕ್ಷಣ ಯು ಟರ್ನ್ ಹೊಡೆದ ರೇವಣ್ಣ ! ಬಾಯಿಗೆ ಬಂದಂತೆ ಬೈದು ರೊಚ್ಚಿಗೆದ್ದ ನೆಟ್ಟಿಗರು

ಮಾಜಿ ಲೋಕೋಪಯೋಗಿ ಸಚಿವ ರೇವಣ್ಣ ರವರ ವಿರುದ್ಧ ಜನರು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಮ್ಮೆ ಬಾರಿ ಆಕ್ರೋಶ ಹೊರಹಾಕಿದ್ದಾರೆ. ಈ ಬಾರಿಯೂ ಸಹ ಜನರ ಭಾವನೆಗಳನ್ನು ಕೆಣಕುವಂತೆ ರೇವಣ್ಣ ರವರು ಕೆಲವು ಪದಗಳನ್ನು ಬಳಸಿದ್ದು, ಜನರು ಇದರಿಂದ ಮತ್ತಷ್ಟು ಕೆರಳಿದ್ದಾರೆ. ಅಷ್ಟಕ್ಕೂ ರೇವಣ್ಣ ರವರು ಮಾಡಿದ್ದೇನು ಗೊತ್ತಾ? ನಿಮಗೆಲ್ಲರಿಗೂ ತಿಳಿದಿರುವ ಹಾಗೇ ರೇವಣ್ಣ ರವರು ಇಂದು ಬಿಜೆಪಿ ಪಕ್ಷದ ನಾಯಕ ಬಾಲಚಂದ್ರ ಜಾರಕಿಹೊಳಿರವರ ಮುಂದೆ ಚುನಾವಣೆಯಲ್ಲಿ ಸೋಲನ್ನು ಕಾಣುತ್ತೇನೆ ಎಂದು ತಿಳಿದು ಮುಜುಗರವನ್ನು ಕಡಿಮೆ ಮಾಡಿಕೊಳ್ಳಲು ನಾಮ ಪತ್ರ ಸಲ್ಲಿಸದೆ ಜಾರಕಿಹೊಳಿ ರವರು ಅವಿರೋಧವಾಗಿ ಆಯ್ಕೆ ಯಾಗುವಂತೆ ಮಾಡಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಕೆಎಂಎಫ್ ಅಧ್ಯಕ್ಷ ಹುದ್ದೆಯನ್ನು ತಮ್ಮ ಹಿಡಿತದಲ್ಲಿ ಇಟ್ಟಿಕೊಂಡು ಮೆರೆದಿದ್ದ ರೇವಣ್ಣ ರವರು ಇದೀಗ ಈ ಕುರಿತು ಪ್ರಶ್ನಿಸಿದಾಗ ಈ ಅಧ್ಯಕ್ಷ ಸ್ಥಾನ ಪುಟಗೋಸಿ ಎಂದು ನಾಲಿಗೆ ಹರಿ ಬಿಟ್ಟಿದ್ದಾರೆ.

ಸಮಿಶ್ರ ಸರ್ಕಾರ ನಡೆಸುತ್ತಿದ್ದೇವೆ ಎಂಬುದನ್ನು ಮರೆತು ಕಾಂಗ್ರೆಸ್ ನಾಯಕರನ್ನು ಹೈಜಾಕ್ ಮಾಡಿ ಕಾಂಗ್ರೆಸ್ ನಾಯಕರನ್ನು ಕೆರಳಿಸಿ, ಮೈತ್ರಿ ಸರ್ಕಾರ ಉರುಳುವಿಕೆ ಮತ್ತೊಂದು ಕಾರಣ ನೀಡಿದ್ದ ರೇವಣ್ಣ ರವರು ತಮ್ಮ ಬೇಳೆ ಬೆಂದಿಲ್ಲ ಎಂದು ತಿಳಿದ ತಕ್ಷಣ ಕೆಎಂಎಫ್ ಅಧ್ಯಕ್ಷ ಹುದ್ದೆಯನ್ನು ಪುಟಗೋಸಿ ಎಂದಿದ್ದಾರೆ. ತಮ್ಮ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಯೋಚಿಸಬೇಕು, ಅದನ್ನು ಬಿಟ್ಟು ಯಾವುದೋ ಪುಟಗೋಸಿ ಡೇರಿ ಅಧ್ಯಕ್ಷ ಸ್ಥಾನ ಎಂದು ಗುಡುಗಿದ್ದಾರೆ. ಬಹುಶಃ ಕರ್ನಾಟಕದ ಹಲವು ರೈತರು ಇದನ್ನೇ ನಂಬಿಕೊಂಡು ಇದ್ದಾರೆ ಎಂಬುದನ್ನು ಮರೆತಂತೆ ಕಾಣುತ್ತಿದೆ. ಅಷ್ಟೆಲ್ಲ ಇದ್ದಮೇಲೆ ಇಷ್ಟೆಲ್ಲ ಡ್ರಾಮಾ ಬೇಕಿತ್ತಾ, ಡೇರಿ ಅಧ್ಯಕ್ಷ ಹುದ್ದೆ ಎಂದರೆ ಲಕ್ಷಾಂತ್ರ್ರ ಕುಟುಂಬಗಳನ್ನು ಪೋಷಿಸುತ್ತಿರುವ ಸಂಸ್ಥೆಯ ಜವಾಬ್ದಾರಿ ಎಂದು ರೇವಣ್ಣ ಮರೆತ್ತಿದ್ದಾರೆ ಎಂದು ಜನ ಬಹಳ ಕೆಟ್ಟ ಪದಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಅಲ್ಲ ಸ್ವಾಮಿ ಅಧ್ಯಕ್ಷ ಹುದ್ದೆ ಕೈತಪ್ಪಿದ ತಕ್ಷಣ ವಾರ್ಷಿಕ 18 ಸಾವಿರ ಕೋಟಿ ವ್ಯವಹಾರ ನಡೆಸಿ ರೈತರಿಗೆ ಬೆನ್ನೆಲುಬಾಗಿರುವ ಸಂಸ್ಥೆಯ ಕುರಿತು ಈ ರೀತಿ ಮಾತನಾಡಬಹುದೇ?

BJP KarnatakaCongressH D RevannaJDSKannadaKannada NewsKarunaada VaaniKMF