ಮೋದಿ ಏಟಿಗೆ ತತ್ತರಿಸಿದ ಟ್ರಂಪ್, ರೂಪಾಯಿಗೆ ಬರಲಿದೆ ಆನೆಬಲ ! ನಮೋ ರಾಜ ತಾಂತ್ರಿಕತೆಗೆ ಐತಿಹಾಸಿಕ ಜಯ, ವಿಶ್ವವೇ ಬೆರಗು

ಕಳೆದ ಕೆಲವು ದಿನಗಳಿಂದ ಅಮೇರಿಕ ದೇಶದ ವಿವಾದಾತ್ಮಕ ಅಧ್ಯಕ್ಷ ಎಂದೇ ಕುಖ್ಯಾತಿ ಪಡೆದುಕೊಂಡಿರುವ ಟ್ರಂಪ್ ರವರು ಇಡೀ ವಿಶ್ವವೇ ಭೀತಿಗೊಳ್ಳುವಂತೆ ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಇವರ ಹಲವಾರು ದ್ವಂದ ನೀತಿಗಳಿಂದ ಅದೆಷ್ಟೋ ಬಲಿಷ್ಠ ರಾಷ್ಟ್ರಗಳು ಇಂದು ಆರ್ಥಿಕ ವ್ಯವಸ್ಥೆಯ ಕುರಿತು ಆತಂಕಕ್ಕೆ ಒಳಗಾಗಿವೆ. ಇಡೀ ವಿಶ್ವದ ರಾಷ್ಟ್ರಗಳ ಮೇಲೆ ಹಲವಾರು ಷರತ್ತು ವಿಧಿಸಿ ಸರ್ವಾಧಿಕಾರ ಮೆರೆಯಲು ಟ್ರಂಪ್ ಈ ರೀತಿ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಇಷ್ಟು ಸಾಲದು ಎಂಬಂತೆ ಇದೀಗ ಚೀನಾ ದೇಶದ ವಿರುದ್ಧ ಕಾದಾಟ ಆರಂಭ ಮಾಡಿ ವಿಶ್ವದ ಆರ್ಥಿಕತೆಗೆ ಮತ್ತಷ್ಟು ಪೆಟ್ಟು ನೀಡಿದ್ದಾರೆ.

ಈ ರೀತಿಯ ಬೆಳವಣಿಗೆಗಳು ಭಾರತದ ಅರ್ಥ ವ್ಯವಸ್ಥೆಯ ಮೇಲು ಸಹ ಪರಿಣಾಮ ಬೀರಿದೆ. ಇದೇ ರೀತಿಯ ಬೆಳವಣಿಗೆಗಳಿಂದ ದಿನೇ ದಿನೇ ಕಳೆದ ಕೆಲವು ದಿನಗಳಿಂದ ಭಾರತದ ರೂಪಾಯಿ ಕುಸಿಯುತ್ತಿದೆ. ಹೀಗಿರುವಾಗ ಸರಿಯಾದ ಸಮಯಕ್ಕೆ ರೂಪಾಯಿ ಗೆ ಬಲ ತುಂಬಲು ಮೋದಿ ಮಾಡಿದ್ದ ಸಾಹಸಕ್ಕೆ ಇದೀಗ ಜಯ ಸಿಕ್ಕಿದೆ ಹಾಗೂ ಇದರಿಂದ ಟ್ರಂಪ್ ರವರ ಕಣ್ಣು ಮತ್ತಷ್ಟು ಕೆಂಪಗಾಗಿದೆ. ಅಷ್ಟಕ್ಕೂ ನಡೆದದ್ದೇನು ಗೊತ್ತಾ?? ಸಂಪೂರ್ಣ ವಿವರಿಗಳಿಗಾಗಿ ಕೆಳಗಡೆ ಓದಿ.

ಭಾರತ ಹಾಗೂ ರಷ್ಯಾ ದೇಶದ ನಡುವೆ ಎಸ್ -400 ಕ್ಷಿಪಣಿ ವ್ಯವಸ್ಥೆಗಳನ್ನೂ ಖರೀದಿಸಲು ಅಮೇರಿಕ ದೇಶದ ವಿರೋಧದ ನಡುವೆಯೂ ಒಪ್ಪಂದ ನಡೆದಿರುವುದು ನಿಮಗೆ ತಿಳಿದೇ ಇದೆ. ಮೊದಲಿಂದಲೂ ಭಾರತದ ಈ ನಿರ್ಧಾರವನ್ನು ವಾಪಸ್ಸು ತೆಗೆಸಿಕೊಳ್ಳುವಂತೆ ಅಮೇರಿಕ ದೇಶದ ಅಧ್ಯಕ್ಷ ಟ್ರಂಪ್ ರವರು ಒತ್ತಡ ಏರುತ್ತಿದ್ದರು, ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಮೋದಿ, ಟ್ರಂಪ್ ರವರಿಗೆ ತಕ್ಕ ಉತ್ತರ ನೀಡಿ ಒಪ್ಪಂದ ವಾಪಸ್ಸು ಪಡೆದುಕೊಳ್ಳುವುದಿಲ್ಲ ಎಂದು ತಿಳಿಸಿದ್ದರು. ಇದೀಗ ಮತ್ತೊಂದು ಹೊಡೆತ ಅಮೇರಿಕ ದೇಶಕ್ಕೆ ಬಿದ್ದಿದ್ದು ಈ ರಕ್ಷಣಾ ಒಪ್ಪಂದ ಹಾಗೂ ರಷ್ಯಾ ದೇಶದ ಜೊತೆಗಿನ ಮುಂದಿನ ಒಪ್ಪಂದಗಳ ವೆಚ್ಚವನ್ನು ಭಾರತ ಡಾಲರ್ ಗಳಿಗೆ ಬದಲಾಗಿ ರೂಪಾಯಿಗಳಲ್ಲಿ ಪಾವತಿಸಲಿದೆ.

ಇದರಿಂದ ನರೇಂದ್ರ ಮೋದಿ ರವರ ರಾಜ ತಾಂತ್ರಿಕತೆಗೆ ಮತ್ತೊಂದು ಐತಿಹಾಸಿಕ ಜಯ ಲಭಿಸಿದ್ದು, ಇನ್ನು ಮುಂದೆ ಅಂತಾರಾಷ್ಯಿಯ ಮಟ್ಟದಲ್ಲಿ ರೂಪಾಯಿ ಮತ್ತಷ್ಟು ಬಲಿಷ್ಠ ಗೊಳ್ಳಲಿದೆ. ಈ ವಿಷಯವನ್ನು ಖುದ್ದು ಖಚಿತ ಪಡಿಸಿರುವ ರಷ್ಯಾದ ಉನ್ನತ ರಾಜತಾಂತ್ರಿಕರು ರಷ್ಯಾದಿಂದ ಭಾರತ ದೇಶ ಆಮದು ಮಾಡಿಕೊಳ್ಳುತ್ತಿರುವ ಎಸ್ -400 ಕ್ಷಿಪಣಿ ವ್ಯವಸ್ಥೆಗೆ ಭಾರತ ರೂಪಾಯಿಗಳಲ್ಲಿ ಪಾವತಿಸಲಿದೆ ಎಂದು ಹೇಳಿದ್ದಾರೆ. ಈ ರೀತಿಯ ಮತ್ತಷ್ಟು ಸುದ್ದಿಗಳಿಗಾಗಿ ಕರುನಾಡ ವಾಣಿ ಪೇಜ್ ಅನ್ನು ಲೈಕ್ ಮಾಡಿ ಹಾಗೂ ಫಾಲೋ ಮಾಡಿ. ಧನ್ಯವಾದಗಳು

bjpDefense dealIAFIndian armyIndian DefenseNarendra modiRussiaRussia IndiaS 400Trump