ಅಂತರ್ರಾಷ್ಟ್ರೀಯ ಮಾಧ್ಯಮಗಳಿಗೆ ಮರ್ಮಾಘಾತ ! ಅಮಿತ್ ಶಾ ಏಟಿಗೆ ಬೆಚ್ಚಿಬಿದ್ದ ಮಾಧ್ಯಮಗಳು

ಕೆಲವು ಪ್ರಸಿದ್ಧ ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ಸಾಲಿನಲ್ಲಿ ಕಂಡುಬರುವ ಬಿಬಿಸಿ ನ್ಯೂ ಸಂಸ್ಥೆ ಹಾಗೂ ಹಲ್ ಜರೀರ ಇಂಗ್ಲಿಷ್ ನ್ಯೂ ಸಂಸ್ಥೆಯು ಭಾರತದ ವಿರುದ್ಧ ಸುಖಾ ಸುಮ್ಮನೆ ನಕಲಿ ಆರೋಪಗಳನ್ನು ಮಾಡಿದ್ದರು. ಇತ್ತ ಅಖಂಡ ಭಾರತವನ್ನು ನಿರ್ಮಿಸಲು ಅಮಿತ್ ಶಾ ರವರು ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ವಾಪಸ್ಸು ತೆಗೆದುಕೊಂಡು, ಕಾಶ್ಮೀರದ ಮೇಲೆ ಸಂಪೂರ್ಣ ಹಕ್ಕು ಭಾರತಕ್ಕೆ ಇದೆ ಎಂದು ಭಾರತದ ವಿರೋಧಿ ರಾಷ್ಟ್ರಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದರು. ಅಷ್ಟೇ ಅಲ್ಲದೆ ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಚೀನಾ ಆಕ್ರಮಿತ ಕಾಶ್ಮೀರವನ್ನು ವಾಪಸ್ ತೆಗೆದುಕೊಳ್ಳುವ ಕಾಲ ಸಮೀಪದಲ್ಲೇ ಇದೆ ಎಂದು ಖಚಿತವಾಗಿ ಯಾವುದೇ ಹಿಂಜರಿಕೆಯಿಲ್ಲದೆ ಬಹಿರಂಗವಾಗಿ ಎಚ್ಚರಿಕೆ ರವಾನೆ ಮಾಡಿದ್ದರು.

ಹೀಗಿರುವಾಗ ಜಮ್ಮು ಕಾಶ್ಮೀರ ನಮ್ಮದು ಎಂದು ಇಡೀ ವಿಶ್ವಕ್ಕೆ ತಿಳಿದಿದೆ, ಆದರೆ ಕೆಲವು ಮಾಧ್ಯಮಗಳು ಇದನ್ನು ನಿರಾಕರಿಸುತ್ತವೆ. ವಿಪರ್ಯಾಸವೆಂದರೆ ಭಾರತ ದೇಶದಲ್ಲಿ ರಾಜಕೀಯ ನಡೆಸುತ್ತಿರುವ ಕೆಲವು ದೇಶ ದ್ರೋಹಿಗಳು ಸಹ ಇದೇ ಮಾತನ್ನು ಹೇಳುತ್ತಾರೆ. ಕೆಲವು ಭಾರತೀಯ ಮಾಧ್ಯಮಗಳ ಸುದ್ದಿ ಪ್ರಸಾರವನ್ನು ಮುಂದಿಟ್ಟುಕೊಂಡು ಅಂತರ್ರಾಷ್ಟ್ರೀಯ ಮಾಧ್ಯಮಗಳು ಸಹ ಭಾರತದ ವಿರುದ್ಧ ಸುದ್ದಿ ಪ್ರಸಾರ ಮಾಡಿದ್ದರು. ಅದರಲ್ಲಿಯೂ ಬಿಬಿಸಿ ನ್ಯೂಸ್ ಸಂಸ್ಥೆಯು ಒಂದು ಹೆಜ್ಜೆ ಮುಂದೆ ಹೋಗಿ ಪಾಕ್ ಆಕ್ರಮಿತ ಕಾಶ್ಮೀರ ಎನ್ನುವ ಬದಲು, ಭಾರತವೇ ಕಾಶ್ಮೀರವನ್ನು ಆಕ್ರಮಣ ಮಾಡಿಕೊಂಡಿದೆ ಎಂಬಂತೆ ಭಾರತ ಆಕ್ರಮಿತ ಕಾಶ್ಮೀರ ಎಂದು ಹೇಳಿಕೆ ನೀಡಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿತ್ತು. ಬಿಬಿಸಿ ನ್ಯೂಸ್ ಸಂಸ್ಥೆಯ ಈ ನಡೆಗೆ ಭಾರಿ ವಿರೋಧಗಳು ಕೇಳಿ ಬಂದಿದ್ದವು.

ಇಷ್ಟಕ್ಕೆ ಸುಮ್ಮನಾಗದ ಬಿಬಿಸಿ ಸಂಸ್ಥೆಯು ಹಾಗೂ ಹಲ್ ಜರೀರ ಇಂಗ್ಲಿಷ್ ಸಂಸ್ಥೆಯು ಕಾಶ್ಮೀರದಲ್ಲಿ ಹಿಂಸಾಚಾರ ನಡೆಸಲಾಗುತ್ತಿದೆ ಎಂದು ಕೆಲವು ವಿಡಿಯೋಗಳನ್ನು ಬಿಡುಗಡೆ ಮಾಡಿ ಭಾರತ ದೇಶವು ಕಾಶ್ಮೀರದಲ್ಲಿ ಹಿಂಸಾಚಾರವನ್ನು ನಡೆಸುತ್ತಿದೆ ಎಂದು ಸುದ್ದಿ ಪ್ರಸಾರ ಮಾಡಿದವು. ಮೊದಲೇ ಮಾಧ್ಯಮಗಳಿಗೆ ಖಡಕ್ ಎಚ್ಚರಿಕೆಯ ಸಂದೇಶ ರವಾನಿಸಿದ್ದ ಅಮಿತ್ ಶಾ ರವರು ಇದರಿಂದ ಮತ್ತಷ್ಟು ಕೆರಳಿದ್ದಾರೆ. ಮೊದಲೇ ಎಚ್ಚರಿಕೆ ನೀಡಿದಂತೆ ಇದೀಗ ಭಾರತದ ಗೃಹ ಸಚಿವರಾಗಿರುವ ಅಮಿತ್ ಶಾ ರವರು ಈ ಎರಡು ಅಂತರಾಷ್ಟ್ರೀಯ ಮಾಧ್ಯಮಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ಮೊದಲಿಗೆ ಈ ಎರಡು ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಜಮ್ಮು ಹಾಗೂ ಕಾಶ್ಮೀರ ದಲ್ಲಿ ನಡೆಯುತ್ತಿದೆ ಎನ್ನಲಾಗುತ್ತಿರುವ ಹಿಂಸಾಚಾರದ ವಿಡಿಯೋ ಚಿತ್ರೀಕರಣದ ಸಂಪೂರ್ಣ ಭಾಗವನ್ನು ಈ ಕೂಡಲೇ ಬಿಡುಗಡೆ ಮಾಡಿ, ತಾವು ಪ್ರಸಾರ ಮಾಡಿರುವ ಸುದ್ದಿ ಸತ್ಯ ಎಂಬುದನ್ನು ಸಾಬೀತು ಮಾಡಬೇಕು ಎಂದು ತಾಕೀತು ಮಾಡಿದೆ. ಒಂದು ವೇಳೆ ಈ ಎರಡೂ ಸಂಸ್ಥೆಗಳು ಈ ವಿಷಯವನ್ನು ಸತ್ಯ ಎಂದು ಸಾಬೀತು ಮಾಡಲು ವಿಫಲವಾದಲ್ಲಿ, ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಈ ಎರಡು ಸಂಸ್ಥೆಗಳ ವರ್ಚಸ್ಸಿಗೆ ಬಾರಿ ಹೊಡೆತ ಬೀಳಲಿದ್ದು, ಭಾರತದ ವಿಷಯಗಳು ಪ್ರಸಾರ ಮಾಡದಂತೆ ಸಂಪೂರ್ಣ ನಿಷೇಧ ಹೇರುವ ನಿರ್ಧಾರ, ಹಾಗೂ ಸಾವಿರಾರು ಕೋಟಿ ದಂಡ ಸೇರಿದಂತೆ ಬಹಿರಂಗವಾಗಿ ಕ್ಷಮೆಯಾಚಿಸಿ, ತಾವು ಮಾಡಿದ್ದು ತಪ್ಪು ಎಂದು ವಿಶ್ವದ ಮುಂದೆ ನಿಲ್ಲಬೇಕಾಗುತ್ತದೆ.