370 ನೇ ವಿಧಿ ರದ್ದು ಬಹಿರಂಗವಾಗಿ ಬೆಂಬಲಿಸಿದ ಏಕೈಕ ಕಾಂಗ್ರೆಸ್ಸಿಗ ಯಾರು ಗೊತ್ತಾ??

ಭಾರತದ ಕೇಂದ್ರ ಗೃಹ ಸಚಿವರಾಗಿರುವ ಅಮಿತ್ ಶಾ ರವರು ರಾಜ್ಯಸಭೆಯಲ್ಲಿ ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನಗಳನ್ನು ರದ್ದು ಮಾಡಿ ಆದೇಶ ಹೊರಡಿಸಿದ ಕ್ಷಣದಿಂದಲೂ ಸಂಸತ್ತಿನಲ್ಲಿ ಕುಳಿತಿದ್ದ ಹಲವಾರು ಕಾಂಗ್ರೆಸ್ ಸಂಸದರು ಸೇರಿದಂತೆ ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರು ಇದನ್ನು ವಿರೋಧಿಸುತ್ತಾ ಬಂದಿದ್ದಾರೆ. ಸಂಸತ್ತಿನಲ್ಲಿ ಭಾರಿ ಗದ್ದಲದ ನಂತರ ಪ್ರತಿಭಟನೆಯ ವರೆಗೂ ಇವರ ವಿರೋಧ ತಲುಪಿತ್ತು, ಹೌದು ಕಾಂಗ್ರೆಸ್ ಪಕ್ಷದ ಪರವಾಗಿ ಬಹಿರಂಗವಾಗಿ ಇಲ್ಲಿಯವರೆಗೂ ಯಾರೂ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಈ ನಡೆಯ ಪರವಾಗಿ ಧ್ವನಿ ಎತ್ತಿರಲಿಲ್ಲ. ಆದರೆ ಇದೀಗ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಕೇಂದ್ರ ಸರ್ಕಾರದ ಈ ಕ್ರಮವನ್ನು ಸ್ವಾಗತ ಮಾಡಿದ್ದು, ವಿರೋಧ ಮಾಡುತ್ತಿರುವವರಿಗೆ ತಕ್ಕ ಉತ್ತರ ನೀಡಿದ್ದಾರೆ. ಇವರ ಈ ಪಕ್ಷಾತೀತ ಹೇಳಿಕೆಗೆ ನಮ್ಮ ಕಡೆಯಿಂದ ಇಂದ ಧನ್ಯವಾದಗಳು. ಮಾಹಿತಿಗಾಗಿ ಕೆಳಗಡೆ ಓದಿ

ಇದೀಗ ಕೇಂದ್ರ ಸರ್ಕಾರದ ಕ್ರಮದ ಕುರಿತು ಮಾತನಾಡಿರುವ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಅನುಭವಿ ರಾಜಕಾರಣಿ ಜನಾರ್ಧನ ದ್ವಿವೇದಿ ರವರು ತೀರ್ಪನ್ನು ಸ್ವಾಗತ ಮಾಡಿದ್ದು, ಇತಿಹಾಸದಲ್ಲಿ ಮಾಡಿದ ತಪ್ಪನ್ನು ಇಂದು ಕೇಂದ್ರ ಸರ್ಕಾರ ಸರಿಪಡಿಸಿದೆ ಎಂದು ಹೇಳಿಕೆ ನೀಡಿದ್ದಾರೆ. ನಾನು ರಾಜಕೀಯದ ಪಾಠಗಳನ್ನು ಕಲಿತಿದ್ದು ನನ್ನ ರಾಜಕೀಯ ಗುರುವಾದ ರಾಮ್ ಮನೋಹರ್ ಲೋಹಿಯಾ ಅವರ ಬಳಿ, ಅವರು ಸಹ ಮೊದಲಿನಿಂದಲೂ ಸಂವಿಧಾನದ 370ನೇ ವಿಧಿಯನ್ನು ವಿರೋಧ ಮಾಡುತ್ತಾ ರಾಜಕೀಯ ಜೀವನವನ್ನು ಕಳೆದಿದ್ದರು. ಇತಿಹಾಸದಲ್ಲಿ ಮಾಡಲಾಗಿದ್ದ ತಪ್ಪನ್ನು ಇದೀಗ ಸರಿಪಡಿಸಲಾಗಿದೆ ತಡವಾಗಿಯಾದರೂ ತಪ್ಪನ್ನು ತಿದ್ದಲಾಗಿದೆ ಎಂದು ದ್ವಿವೇದಿ ಹೇಳಿದರು.”ಇದು ನಮ್ಮ ಕಾಂಗ್ರೆಸ್ ಪಕ್ಷದ ಅಭಿಪ್ರಾಯವಲ್ಲ. ಕಾಂಗ್ರೆಸ್ ನ ಅಭಿಪ್ರಾಯ ಈ ಬಗ್ಗೆ ಬೇರೆಯೇ ಇರಬಹುದು. ಆದರೆ ನಾನು ನನ್ನ ವೈಯಕ್ತಿಕ ಅಭಿಪ್ರಾಯವನ್ನು ಹೇಳುತ್ತಿದ್ದೇನೆ. ಇನ್ನಾದರೂ ಜಮ್ಮು ಮತ್ತು ಕಾಶ್ಮೀರ ಅಭಿವೃದ್ಧಿಯನ್ನು ಕಾಣಲಿ ಎಂಬುದು ನನ್ನ ಹಾರೈಕೆ” ಎಂದು ಇದೇ ಸಮಯದಲ್ಲಿ ತಿಳಿಸಿದರು.