ರೈತರಿಗೆ ಬಿಗ್ ಶಾಕ್, ತಮಿಳರ ಆರ್ಭಟ ! ಸರ್ಕಾರ ಸತ್ತು ಹೋಗಿದೆಯೇ?? ಹೀಗೆ ಮುಂದುವರೆದರೆ ಕನ್ನಡ ನಾಡು ಎನ್ನಡನಾಡು ಆಗುತ್ತದೆ !

ವಿಶೇಷ ಸೂಚನೆ: ಪಕ್ಷ, ಜಾತಿ-ಧರ್ಮ, ಅಭಿಮಾನ ಎಲ್ಲವನ್ನು ಮರೆತು ಕನ್ನಡಿಗರಾಗಿ ಈ ಲೇಖನ ಓದಿ. ಕರ್ನಾಟಕದ ಪರಿಸ್ಥಿತಿ ದಯವಿಟ್ಟು ಬೇರೆ ಯಾವುದೇ ರಾಜ್ಯಗಳಿಗೆ ಬರೆದೆ ಇರಲಿ ಎಂದು ನಾವು ಬೇಡಿಕೊಳ್ಳುತ್ತೇವೆ. ಇಲ್ಲಿ ಸರ್ಕಾರ ಇದೆಯೋ ಇಲ್ಲವೋ ಎಂಬ ಪ್ರಶ್ನೆ ಇಡೀ ಕರ್ನಾಟಕ ರಾಜ್ಯದ ಜನರಲ್ಲಿ ಮೂಡಿದೆ. ಆಡಳಿತ ಪಕ್ಷದ ಕೈಯಲ್ಲಿ ಒತ್ತಡ ಹೇರಿ ಕೆಲಸ ಮಾಡಿಸಬೇಕಾದ ವಿರೋಧ ಪಕ್ಷವೂ ಸಹ ಇದೀಗ ಅಧಿಕಾರದ ಗದ್ದುಗೆ ಏರುವ ಕನಸು ಕಾಣುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಇಡೀ ಭಾರತೀಯ ಇತಿಹಾಸದಲ್ಲಿ ಯಾವ ಅಭಿವೃದ್ಧಿಯ ವಿಚಾರದಲ್ಲೂ ಚರ್ಚೆ ನಡೆಯದ ರೀತಿ ಕಳೆದ ಕೆಲವು ದಿನಗಳಿಂದ ಕೇವಲ ತಮ್ಮ ಅಧಿಕಾರಕ್ಕಾಗಿ ವಿಧಾನ ಸಭೆಯಲ್ಲಿ ಚರ್ಚೆ ಮಾಡುತ್ತಿದ್ದಾರೆ. ನೀವು ಗೆಲ್ಲಿಸಿದ ರಾಜಕಾರಣಿಗಳು. ಬಹುಮತ ಇಲ್ಲ ಎಂದು ತಿಳಿದರೂ ಸಹ ಸುಖಾಸುಮ್ಮನೆ ವಿಧಾನಸಭೆಯ ಸಮಯವನ್ನು ವ್ಯರ್ಥ ಮಾಡಲಾಗುತ್ತಿದೆ. ಒಂದು ವೇಳೆ ಪ್ರತಿವರ್ಷ ಬೇಡ, ಐದು ವರ್ಷಕ್ಕೊಮ್ಮೆ ಈ ರೀತಿಯ ಚರ್ಚೆ ಅಭಿವೃದ್ಧಿಗಾಗಿ ನಡೆಸಿದ್ದರೆ ಬಹುಶಃ ಇಂದು ಕರ್ನಾಟಕ ರಾಜ್ಯ ನಂಬರ್ ಒನ್ ಸ್ಥಾನದಲ್ಲಿ ಮಾದರಿ ರಾಜ್ಯವಾಗಿತ್ತು.

ಆದರೆ ಇಡೀ ಕರ್ನಾಟಕದ ಇತಿಹಾಸದಲ್ಲಿ ಎಂದಿಗೂ ಅಭಿವೃದ್ಧಿಯ ವಿಚಾರವಾಗಿ ಇಷ್ಟು ಕೂಲಂಕುಶವಾಗಿ ತಮ್ಮ ಕ್ಷೇತ್ರಗಳ ಅಭಿವೃದ್ಧಿಯ ಬಗ್ಗೆ ಯಾವೊಬ್ಬ ಶಾಸಕರಾಗಲಿ ಅಥವಾ ಯಾವುದೇ ಪಕ್ಷದ ನಾಯಕರಾಗಿ ಯಲ್ಲಿ ಚರ್ಚೆ ಮಾಡಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ ದುರದೃಷ್ಟವಶಾತ್ ಜನರು ತಮ್ಮ ಜಾತಿಯ ನಾಯಕ, ನಮ್ಮ ಬಂಧು, ನಮ್ಮ ಸ್ನೇಹಿತ ಹೀಗೆ ಹಲವಾರು ಕಾರಣಗಳನ್ನು ಇಟ್ಟುಕೊಂಡು ಇನ್ನು ಅದೇ ನಾಯಕರನ್ನು ಬೆಂಬಲಿಸುತ್ತಾ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಕರ್ನಾಟಕ ರಾಜ್ಯದ ರೈತರಿಗೆ ಮತ್ತೊಂದು ಶಾಕ್ ಎದುರಾಗಿದೆ. ನೀವು ಹೇಳಿದರೆ ನಂಬುವುದು ಕಷ್ಟ ಆದರೆ ಖಾಸಗಿ ಕಂಪನಿಗಳ ದರ್ಬಾರ್ ಎಲ್ಲರಿಗೂ ತಿಳಿದೇ ಇದೆ ಆದರೆ ಒಂದು ಜಲಾಶಯ, ಯಾವುದೋ ಚಿಕ್ಕ ಜಲಾಶಯವಲ್ಲ ಬದಲಾಗಿ ಲಕ್ಷಾಂತರ ರೈತರಿಗೆ ಹಾಗೂ ಜನರಿಗೆ ಬೇಕಾದ ನೀರನ್ನು ಸರಬರಾಜು ಮಾಡುವ ಕಬಿನಿ ಜಲಾಶಯದ ನೀರಿನಲ್ಲಿ ಖಾಸಗಿ ಕಂಪನಿಗಳ ದರ್ಬಾರ್ ನಿಮಗೆ ತಿಳಿದಿದೆಯಾ?? ಅಲ್ಲಿ ನಡೆಯುತ್ತಿರುವ ತಮಿಳರ ದರ್ಬಾರ್ ನಿಮಗೆ ಗೊತ್ತೇ??

ಒಂದು ಕಡೆ ಕೆ ಆರ್ ಎಸ್ ಜಲಾಶಯದಿಂದ ತಮಿಳುನಾಡಿಗೆ ರಾತ್ರೋರಾತ್ರಿ ಹೆಚ್ಚುವರಿ ನೀರು ಹರಿಯುತ್ತಿದೆ ಈ ವಿಷಯ ರೈತರಿಗೆ ತಿಳಿದು ಬೀದಿಯಲ್ಲಿ ಕುಳಿತು ಗಲಾಟೆ ಮಾಡಿದರೂ ಯಾರೂ ಕೇಳುವವರಿಲ್ಲ. ಆದರೆ ಮತ್ತೊಂದೆಡೆ ಕಬಿನಿ ಜಲಾಶಯದಿಂದ ರಾತ್ರೋರಾತ್ರಿ ಒಂದು ಖಾಸಗಿ ಕಂಪನಿಯ ಅಧಿಕಾರಿಗಳು ಖಾಸಗಿ ಕಂಪನಿ ಗೇಟಿನ ಮೂಲಕ ನೀರು ತಮಿಳುನಾಡಿಗೆ ಹರಿದು ಬಿಡುತ್ತಿದ್ದಾರೆ. ಅಲ್ಲ ಸ್ವಾಮಿ ರಾಜ್ಯದ ರೈತರಿಗೆ ಹಲವಾರು ಬೆಳೆಗಳ ಮೇಲೆ ನಿಷೇಧ ಹೇರಿ ನೀರಿಲ್ಲ ಎಂಬ ಕಾರಣವನ್ನು ನೀಡಿ, ಅಡ್ಡಗಾಲು ಹಾಕುತ್ತಿರುವ ಸಂದರ್ಭದಲ್ಲಿ ಬರೋಬ್ಬರಿ ಕೇವಲ ಒಂದು ರಾತ್ರಿಯಲ್ಲಿ ಕಬಿನಿ ಜಲಾಶಯದಿಂದ ಒಂದು ಅಡಿ ನೀರು ಕಡಿಮೆಯಾಗುವುದು ಎಂದರೆ ಯಾರೂ ಕೇಳುವುದಿಲ್ಲ ಎಂಬ ಧೈರ್ಯವೇ?? ಸತ್ಯ ಹೇಳುತ್ತೀವಿ ಸ್ವಾಮಿ ಭಾರಿ ಪ್ರಮಾಣದ ನೀರನ್ನು ಖಾಸಗಿ ಕಂಪನಿಗಳ ಮೂಲಕ ಹರಿದು ತಮಿಳುನಾಡಿಗೆ ಹೋದರು ಕಾರಣವೇನು ಎಂಬುದನ್ನು ಕೇಳಲು ಯಾವರಾಜಕಾರಣಿಯೂ ಮುಂದೆ ಬಂದಿಲ್ಲ.

ಹೌದು ಕಬಿನಿ ಜಲಾಶಯದ ಬಳಿ ಇರುವ ಸುಭಾಷ್ ಪವರ್ ಕಂಪನಿಯಲ್ಲಿ ಹೆಚ್ಚು ತಮಿಳಿಗರು ಕೆಲಸ ಮಾಡುತ್ತಿದ್ದಾರೆ, ಇಡೀ ಕಂಪನಿಯಲ್ಲಿ ತಮಿಳರ ಆರ್ಭಟ ಭರ್ಜರಿಯಾಗಿ ನಡೆಯುತ್ತಿದೆ. ಇದೀಗ ಇದೇ ಕಂಪನಿಯ ಗೇಟ್ ಗಳಿಂದ ಮೂರು ಸಾವಿರಕ್ಕೂ ಹೆಚ್ಚು ಕ್ಯುಸೆಕ್ ನೀರನ್ನು ಒಂದೇ ರಾತ್ರಿಯಲ್ಲಿ ಹರಿದು ಬಿಡಲಾಗಿದೆ. ಜಲಾಶಯ ಭರ್ತಿಯಾಗಲು ಇನ್ನೂ 14 ಅಡಿ ಬಾಕಿ ಇತ್ತು, ನಿನ್ನೆ ರಾತ್ರಿ ಎಪ್ಪತ್ತು ಅಡಿ ನೀರಿತ್ತು. ಆದರೆ ಏಕಾಏಕಿ ಒಮ್ಮೆಲೆ ಒಂದು ಅಡಿ ನೀರು ಬಿಡುಗಡೆ ಮಾಡಲಾಗಿದೆ. ಸತ್ಯ ಹೇಳುತ್ತೇವೆ ಸ್ವಾಮಿ ಇದರ ಬಗ್ಗೆ ಯಾವೊಬ್ಬ ರಾಜಕೀಯ ನಾಯಕರು ಇದುವರೆಗೂ ಧ್ವನಿ ಎತ್ತಿಲ್ಲ, ಕರ್ನಾಟಕದ ಕಂಪನಿಯಲ್ಲಿ ತಮಿಳರ ಅರ್ಭಟ ಎಷ್ಟರ ಮಟ್ಟಕ್ಕೆ ಇದೆ ಹಾಗೂ ಕರ್ನಾಟಕ ರಾಜಕೀಯ ನಾಯಕರ ಕೆಲಸ ಎಷ್ಟು ಕೀಳು ಮಟ್ಟಕ್ಕೆ ಇಳಿದಿದೆ ಎಂಬುದಕ್ಕೆ ಇದಕ್ಕಿಂತ ಸ್ಪಷ್ಟ ಉದಾಹರಣೆ ಬೇಕಿಲ್ಲ.

Kabini DamKannada Newskarnatakakarnataka politicsKarnataka water crisisKarunaada VaaniTamilnadu