ದಶಕಗಳ ಕನ್ನಡಿಗರ ಕನಸು ನನಸು ಮಾಡಿದ ನಿತಿನ್ ಗಡ್ಕರಿ ! ಶಿವಮೊಗ್ಗ ಜಿಲ್ಲೆಯ ಜನರು ಫುಲ್ ಖುಷ್

ಕಳೆದ ಹಲವಾರು ವರ್ಷಗಳಿಂದ ಶಿವಮೊಗ್ಗ ಜಿಲ್ಲೆಯ ಜನರ ಬೇಡಿಕೆ ಈಡೇರುವ ಸಮಯ ಬಂದಿದೆ, ಇದು ಕೇವಲ ಶಿವಮೊಗ್ಗ ಜಿಲ್ಲೆಯ ಜನತೆಯ ಬೇಡಿಕೆ ಯಾಗಿರಲಿಲ್ಲ ಬದಲಾಗಿ ಶಿವಮೊಗ್ಗ ಜಿಲ್ಲೆಯ ಪ್ರಸಿದ್ಧ ಸಿಗಂದೂರು ಚೌಡೇಶ್ವರಿ ತಾಯಿಯ ದರ್ಶನಕ್ಕೆ ಬರುವ ಲಕ್ಷಾಂತರ ಭಕ್ತರ ಬೇಡಿಕೆಯಾಗಿತ್ತು. ಹೌದು ಅದುವೇ ಸಿಗಂದೂರು ಸೇತುವೆ, ಈ ಸೇತುವೆಯ ಬೇಡಿಕೆ ಹಲವಾರು ವರ್ಷಗಳಿಂದ ಕೇಳಿ ಬರುತ್ತಿದೆ. ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು 2009ರಲ್ಲಿ ಈ ಸೇತುವೆಯ ಕಾಮಗಾರಿಗೆ ಅನುದಾನ ಘೋಷಣೆ ಮಾಡಿದ್ದರು. ಆದರೆ ಕಾರಣಾಂತರಗಳಿಂದ ಯಡಿಯೂರಪ್ಪನವರು ರಾಜೀನಾಮೆ ನೀಡಿದ ನಂತರ ಬದಲಾದ ರಾಜಕೀಯ ಪರಿಸ್ಥಿತಿಯಿಂದ ಅನುದಾನ ಬಿಡುಗಡೆಯಾಗಿರಲಿಲ್ಲ. ಆದರೆ ಇದೀಗ ಕೊನೆಗೂ ಈ ಸೇತುವೆಯ ನಿರ್ಮಾಣಕ್ಕೆ ಮರುಜೀವ ಬಂದಂತಾಗಿದ್ದು, ಕೇಂದ್ರ ಸಚಿವ ನಿತಿನ್ ಗಡ್ಕರಿ ರವರು ಕಳೆದ ವರ್ಷ ಶಂಕುಸ್ಥಾಪನೆ ಮಾಡಿದ್ದ ನಂತರ ಟೆಂಡರ್ ಕರೆದಿದ್ದರು.

ಇದೀಗ ಸಿಗಂದೂರು ಸೇತುವೆ ನಿರ್ಮಾಣಕ್ಕೆ ಕಾಲ ಕೂಡಿ ಬಂದಿದ್ದು ಮಧ್ಯಪ್ರದೇಶದ ದಿಲೀಪ್ ಬಿಲ್ಡ್ಕಾನ್ ಲಿಮಿಟೆಡ್ ಹಾಗೂ ಚೀನಾ ಮೂಲದ ಶಾಂತಿ ರೋಡ್ ಅಂಡ್ ಬ್ರಿಡ್ಜ್ ಗ್ರೂಪ್ ಕಂಪನಿಗಳು ಒಪ್ಪಿಕೊಂಡಿದ್ದು ಬರೋಬ್ಬರಿ 360 ಕೋಟಿ ರು ವೆಚ್ಚದಲ್ಲಿ ಇನ್ನು ಕೆಲವೇ ಕೆಲವು ದಿನಗಳಲ್ಲಿ ಸೇತುವೆ ಕಾಮಗಾರಿ ಆರಂಭವಾಗಲಿದೆ. ಈ ಕಂಪನಿಗಳಿಗೆ ಇದೀಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಒಳನಾಡು ಜಲಸಾರಿಗೆ ಇಲಾಖೆ ಯಿಂದ ಅಧಿಕೃತ ಕಾರ್ಯಾದೇಶ ಸಿಗಬೇಕಾಗಿದೆ, ಈ ಅಧಿಕೃತ ಕಾರ್ಯದೇಶ ಕೈಗೆ ಬಂದ ಕೆಲವೇ ಕೆಲವು ದಿನಗಳಲ್ಲಿ ಕೆಲಸ ಆರಂಭವಾಗಲಿದ್ದು, ಸೇತುವೆ ಪೂರ್ಣಗೊಂಡರೆ 19000 ಜನರಿಗೆ ನಿತ್ಯ ಅನುಕೂಲವಾಗಲಿದೆ. ನಿತ್ಯ 19 ಸಾವಿರ ಜನರಿಗೆ ಅನುಕೂಲವಾಗುತ್ತದೆ ಎಂದರೇ ಇದರ ಮಹತ್ವ ನೀವೇ ಅರ್ಥ ಮಾಡಿಕೊಳ್ಳಿ. ಈ ಯೋಜನೆಯನ್ನು ಜಾರಿಗೊಳಿಸಿದ ಕ್ಕಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ರವರಿಗೆ ಕರುನಾಡ ವಾಣಿ ತಂಡದ ಕಡೆಯಿಂದ ಧನ್ಯವಾದಗಳು.