ಸಂಸತ್ತಿನಲ್ಲಿ ಸಿಡಿದ ಶೋಭಾ ಕರಂದ್ಲಾಜೆ ! ಕನ್ನಡಿಗರ ಪರವಾಗಿ ಧ್ವನಿ ಯಾವ ವಿಚಾರವಾಗಿ ಗೊತ್ತಾ??

ಹಲವಾರು ವರ್ಷಗಳಿಂದ ಕರ್ನಾಟಕ ರಾಜ್ಯದ ರೈತರಿಗೆ ಯಾಕೋ ಅದೃಷ್ಟ ಚೆನ್ನಾಗಿ ಇದ್ದಂತೆ ಕಾಣುತ್ತಿಲ್ಲ. ಒಂದು ವರ್ಷ ಅತಿವೃಷ್ಟಿಯಿಂದ ಬೆಳೆಗಳು ಹಾಳಾಗುತ್ತವೆ, ಮತ್ತೊಂದು ವರ್ಷ ಬೆಳೆ ಬೆಳೆಯಲು ಬಿಡಿ ಕುಡಿಯಲು ನೀರಿಲ್ಲ ದಂತಹ ಪರಿಸ್ಥಿತಿ ಎದುರಾಗುತ್ತದೆ, ಒಂದು ವೇಳೆ ಕ್ರೋಡೀಕರಣದ ನೀರಿನಿಂದ ಅದೇಗೋ ಬೆಳೆಬೆಳೆದು ಮಾರುಕಟ್ಟೆಗೆ ಕೊಂಡೊಯ್ದರೆ ರೈತರ ಬೆಳೆಗಳಿಗೆ ಸರಿಯಾದ ಬೆಲೆ ಸಿಗದೆ ಪರದಾಡುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಈ ವರ್ಷವೂ ಸಹ ರಾಜ್ಯವು ಬರದಿಂದ ತತ್ತರಿಸಿ ಹೋಗಿದೆ, ಮಳೆಗಾಲದಲ್ಲಿ ಸರಿಯಾಗಿ ಮಳೆಯಾಗದ ಕಾರಣ ಈಗಾಗಲೇ ನೀರಿನ ಕೊರತೆ ಉಂಟಾಗಿದ್ದು, ಒಂದು ವೇಳೆ ಹಿಂಗಾರು ಮಳೆಯೂ ಕೈ ಕೊಟ್ಟಲ್ಲಿ ಕರ್ನಾಟಕದ ಪರಿಸ್ಥಿತಿ ಇನ್ನು ಹದಗೆಡುವ ಸಾಧ್ಯತೆಗಳು ಹೆಚ್ಚಾಗಿವೆ.

ಇದೇ ವಿಚಾರವಾಗಿ ಇಂದು ಲೋಕಸಭೆಯಲ್ಲಿ ಘರ್ಜಿಸಿದ ಶೋಭಾ ಕರಂದ್ಲಾಜೆಯವರು, ಕರ್ನಾಟಕ ರಾಜ್ಯದ ಬಹುತೇಕ ಭಾಗಗಳಲ್ಲಿ ಮುಂಗಾರು ಮಳೆ ಸರಿಯಾಗಿ ಆಗದೆ ನೀರಿಗೆ ಹಾಹಾಕಾರ ಉಂಟಾಗುವಂತಹ ಪರಿಸ್ಥಿತಿ ಎದುರಾಗಿದ್ದು ಇಡೀ ರಾಜ್ಯದ ಜನರು ಜನ ಸಂಕಷ್ಟದಿಂದ ಬಳಲುತ್ತಿದ್ದಾರೆ, ಆದಕಾರಣ ಈ ಕೂಡಲೇ ಕೇಂದ್ರ ಸರ್ಕಾರವು ಈ ಸಮಸ್ಯೆಯನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕು. ಕರ್ನಾಟಕದ ಜೀವನದಿ ಕಾವೇರಿ ನೀರಿನ ಸಮಸ್ಯೆಗೆ ತಮಿಳುನಾಡು ಯಾವಾಗಲೂ ಕ್ಯಾತೆ ತೆರೆದಿರುತ್ತದೆ, ಈ ಬಾರಿ ನೀರು ಬಿಡಲು ಸಾಧ್ಯವೇ ಇಲ್ಲ. ದಯವಿಟ್ಟು ಈ ಕೂಡಲೇ ಕೇಂದ್ರ ಸರ್ಕಾರವು ಅಧಿಕೃತ ಆದೇಶವನ್ನು ಹೊರಡಿಸಬೇಕು ಎಂದು ತಮಿಳುನಾಡಿನ ಸದಸ್ಯರ ಕಡೆ ನೇರವಾಗಿ ಬೆಟ್ಟು ತೋರಿಸಿ ಮಾತಿನ ಪಟಾಕಿ ಸಿಡಿಸಿದರು. ಇನ್ನು ಇದಕ್ಕೆ ಪ್ರತಿಕ್ರಿಯಿಸಿದ ಜಲಶಕ್ತಿ ಸಚಿವ ಗಜೇಂದ್ರ ಶೇಖಾವತ್ ರವರು ಎಲ್ಲ ರಾಜ್ಯಗಳಲ್ಲಿ ನೀರಿನ ಸಮಸ್ಯೆ ಇದೆ, ಸಾಧ್ಯವಾದಷ್ಟು ರಾಜ್ಯಗಳು ಪರಸ್ಪರ ಮಾತನಾಡಿಕೊಂಡು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದರು.

bjpKarnataka BJPKarnataka water crisisshobha karandlaje