ಮಾಯಾವತಿ ರವರಿಗೆ ಬಿಗ್ ಐಟಿ ಶಾಕ್ ! ಮೋದಿ ಕಾನೂನು ನೀಡಿದ ಏಟಿಗೆ ತತ್ತರಿಸಿದ ಮಾಯಾವತಿ ಸಹೋದರ ! ಬಾರಿ ಆಸ್ತಿ ವಶ

ನಿಮಗೆಲ್ಲರಿಗೂ ತಿಳಿದಿರುವ ಹಾಗೇ ಬಹುಜನ ಸಮಾಜ ಪಕ್ಷದ ಅಧ್ಯಕ್ಷೆ ಮಾಯಾವತಿ ರವರು ಮೊದಲಿನಿಂದಲೂ ನರೇಂದ್ರ ಮೋದಿರವರ ಆಡಳಿತ ವೈಖರಿಯನ್ನು ಭಾರಿ ಟೀಕೆ ಮಾಡುತ್ತಿದ್ದರು. ನರೇಂದ್ರ ಮೋದಿ ಅವರನ್ನು ಸೋಲಿಸುವ ಗುರಿಯೊಂದಿಗೆ ಕಳೆದ ಬಾರಿ ಲೋಕಸಭಾ ಚುನಾವಣೆಯನ್ನು ತನ್ನ ಬದ್ದ ಶತ್ರುವಾದ ಸಮಾಜವಾದಿ ಪಕ್ಷದ ಜೊತೆಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡು ಎದುರಿಸಿದ್ದರೂ ಸಹ ಮೈತ್ರಿಯು ಚುನಾವಣಾ ಫಲಿತಾಂಶದಲ್ಲಿ ಯಾವುದೇ ಲಾಭವನ್ನು ನೀಡಿರಲಿಲ್ಲ. ಕೆಲ ಸೀಟುಗಳನ್ನು ಮೈತ್ರಿ ಪಕ್ಷಗಳು ಗೆದ್ದುಕೊಂಡರೂ ಸಹ ನರೇಂದ್ರ ಮೋದಿರವರ ಅಲೆಯಲ್ಲಿ ಅಕ್ಷರಸಹ ಎಲ್ಲಾ ಪಕ್ಷಗಳಂತೆ ಬಹುಜನ ಸಮಾಜ ಪಾರ್ಟಿಯೂ ಸಹ ಕೊಚ್ಚಿಕೊಂಡು ಹೋಗಿತ್ತು. ಚುನಾವಣೆಯ ಫಲಿತಾಂಶ ಹೊರಬಿದ್ದ ಮೇಲೆ ನಾನು ದೇಶದ ಮುಂದಿನ ಪ್ರಧಾನಿ ಎಂದು ಹೇಳುತ್ತಿದ್ದ ಮಾಯಾವತಿಯವರು ತಣ್ಣಗಾಗಿದ್ದರು.

ಈ ವಿಚಾರ ಈಗ ಯಾಕೆ ಎಂದು ಕೇಳುತ್ತೀರಾ?? ಇದೀಗ ಆದಾಯ ತೆರಿಗೆ ಇಲಾಖೆಯು ಬೇನಾಮಿ ಪ್ರಕರಣದ ಅಡಿಯಲ್ಲಿ ಮಾಯಾವತಿ ರವರ ಸೋದರ ಮತ್ತು ಆತನ ಪತ್ನಿಗೆ ಸೇರಿದ ಭಾರಿ ಮೌಲ್ಯದ ಆಸ್ತಿ ಯನ್ನು ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿದೆ. ಈ ವಿಷಯ ಹೊರಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಬಹುಶಃ ಇದೇ ರೀತಿಯ ಕಾರ್ಯವೈಖರಿಗೆ ಮಾಯಾವತಿ ರವರು ನರೇಂದ್ರ ಮೋದಿ ಅವರ ವಿರುದ್ಧ ಟೀಕೆಗಳ ಸುರಿಮಳೆಯನ್ನು ಸುರಿಸುತ್ತಿದ್ದರು, ಈ ರೀತಿ ಬೇನಾಮಿ ಆಸ್ತಿಗಳನ್ನು ವಶಪಡಿಸಿಕೊಂಡರೆ ರಾಜಕಾರಣಿಗಳು ಬದುಕುವುದಾದರೂ ಹೇಗೆ ಎಂದು ಮಾಯಾವತಿ ರವರಿಗೆ ಪರೋಕ್ಷವಾಗಿ ಟಾಂಗ್ ನೀಡುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಟ್ರೆಂಡ್ ಸೃಷ್ಟಿಸಿದ್ದಾರೆ. ಪ್ರಕರಣದ ಸಂಪೂರ್ಣ ಮಾಹಿತಿಗಾಗಿ ಕೆಳಗಡೆ ಹೋದಿ ಹಾಗೂ ಯಾವ ಮಾಧ್ಯಮಗಳು ತಿಳಿಸಿದ ಈ ವಿಷಯವನ್ನು ನೀವೇ ಎಲ್ಲರಿಗೂ ಶೇರ್ ಮಾಡುವ ಮೂಲಕ ತಲುಪಿಸಿ.

ಇದೀಗ ಉತ್ತರಪ್ರದೇಶದಲ್ಲಿ ಆದಾಯ ತೆರಿಗೆ ಇಲಾಖೆಯು ಅಖಾಡಕ್ಕೆ ಇಳಿದಿದ್ದು, ಮಾಯಾವತಿ ರವರ ಸೋದರ ಮತ್ತು ಆತನ ಪತ್ನಿಗೆ ಸೇರಿದ 400 ಕೋಟಿ ಮೌಲ್ಯದ ಬೇನಾಮಿ ಜಾಗವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಸುಮಾರು ಏಳು ಎಕರೆ ಸ್ಥಳವನ್ನು ಮುಟ್ಟುಗೋಲು ಹಾಕಿಕೊಂಡಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬಹುಜನ ಸಮಾಜವಾದಿ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ರಾಗಿರುವ ಮಾಯಾವತಿ ಸಹೋದರನಿಗೆ ಬಿಗ್ ಶಾಕ್ ನೀಡಿದ್ದಾರೆ. ಬೇನಾಮಿ ಆಸ್ತಿ ವ್ಯವಹಾರ ನಿಷೇಧ ಕಾಯಿದೆ 1998 ರ ಅಡಿಯಲ್ಲಿ ಈ ಮುಟ್ಟುಗೋಲು ಆದೇಶವನ್ನು ನೀಡಲಾಗಿದೆ. ಈಗ ಮುಟ್ಟುಗೋಲು ಹಾಕಿಕೊಂಡಿರುವ ಆಸ್ತಿಯನ್ನು ಮಾಯವತಿ ಸಹೋದರ ಆನಂದಕುಮಾರ್ ಹಾಗೂ ಅವರ ಪತ್ನಿಗೆ ಸೇರಿದ ಬೇನಾಮಿ ಆಸ್ತಿ ಎಂದು ಪರಿಗಣಿಸಿ ಪ್ರಕರಣ ದಾಖಲು ಮಾಡಲಾಗಿದೆ.

2016ರಲ್ಲಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಬೇನಾಮಿ ಕಾಯ್ದೆ ಜಾರಿಗೆ ತಂದು ಈ ಕಾಯ್ದೆಯ ಅಡಿಯಲ್ಲಿ ಯಾರಾದರೂ ಬೇನಾಮಿ ಆಸ್ತಿ ಇಟ್ಟುಕೊಂಡು ತೆರಿಗೆಯನ್ನು ವಂಚನೆ ಮಾಡಿದ್ದಲ್ಲಿ ಅಂತವರಿಗೆ ಏಳು ವರ್ಷಗಳ ಕಾಲ ಶಿಕ್ಷೆಯಾಗುತ್ತದೆ ಹಾಗೂ ಮಾರುಕಟ್ಟೆಯ ಬೆಲೆಯ ಶೇಕಡ 25 ರಷ್ಟು ದಂಡ ವಿಧಿಸಲಾಗುತ್ತದೆ. ಈ ಕಾಯ್ದೆ ಹಲವಾರು ವರ್ಷಗಳಿಂದ ಜಾರಿಯಲ್ಲಿದ್ದರೂ, ನರೇಂದ್ರ ಮೋದಿ ರವರ ಸರ್ಕಾರ 2016ರಲ್ಲಿ ಕಠಿಣ ಶರತ್ತುಗಳ ಮೂಲಕ ಈ ಕಾಯ್ದೆಗೆ ತಿದ್ದುಪಡಿ ಮಾಡಿ ಅಪರಾಧಿಗಳಿಗೆ ಶಿಕ್ಷೆ ನೀಡುವಂತೆ ಆದೇಶ ನೀಡಿತ್ತು. ಇದೀಗ ಇದೇ ಬೇನಾಮಿ ಆಸ್ತಿಯ ಕಾಯ್ದೆಯ ಅಡಿಯಲ್ಲಿ ಆನಂದ್ ಕುಮಾರ್ ರವರ ಮೇಲೆ ಪ್ರಕರಣ ದಾಖಲಾಗಿರುವುದು ಮಾಯಾವತಿ ರವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

bjpKannada NewsKarunaada VaaniMaayavathimodimodi achievementNarendra modiScam