ಬ್ರೇಕಿಂಗ್ ನ್ಯೂಸ್: ಸೋಲೊಪ್ಪಿಕ್ಕೊಳ್ಳಲು ಮುಂದಾದ ಕಾಂಗ್ರೆಸ್,ಬಿಜೆಪಿ ಸರ್ಕಾರ ರಚಿಸುವುದು ಖಚಿತ ! ಒಮ್ಮೆ ಓದಿ ಶೇರ್ ಮಾಡಿ ಬೆಂಬಲಿಸಿ !

ಕಳೆದ ಕೆಲವು ದಿನಗಳಿಂದ ರಾಜ್ಯರಾಜಕಾರಣದಲ್ಲಿ ಕ್ಷಿಪ್ರಕ್ರಾಂತಿ ನಡೆಯುತ್ತಿದೆ. ಈಗಾಗಲೇ ದೋಸ್ತಿ ಸರ್ಕಾರದ ಹಲವಾರು ಶಾಸಕರು ರಾಜೀನಾಮೆ ನೀಡಿ ಮುಂಬೈ ಹೋಟೆಲ್ಗಳಲ್ಲಿ ವಾಸ್ತವ್ಯ ಹೂಡಿದ್ದಾರೆ. ಇನ್ನು ಅತೃಪ್ತ ಶಾಸಕರ ಮನವೊಲಿಸಿ ಮತ್ತೊಮ್ಮೆ ಸರ್ಕಾರವನ್ನು ಸುಭದ್ರ ಪಡಿಸುತ್ತೇವೆ ಎಂದು ಹೋರಾಡಿದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಪರಮೇಶ್ವರ್, ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ರವರು ಕೊನೆಗೂ ಕೈಚೆಲ್ಲಿದ್ದಾರೆ. ಇಂದು ನಡೆದ ಮಹತ್ವದ ವಿದ್ಯಮಾನಗಳ ಬಳಿಕ ಕಾಂಗ್ರೆಸ್ ಪಕ್ಷವು ವಿರೋಧ ಪಕ್ಷದ ಸ್ಥಾನದಲ್ಲಿ ಕೂರಲು ರೆಡಿಯಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಮೂಲಕ ಕಾಂಗ್ರೆಸ್ ಪಕ್ಷವು ಸೋಲನ್ನು ಒಪ್ಪಿಕೊಂಡು ಜೆಡಿಎಸ್ ಪಕ್ಷದ ಜೊತೆ ಮೈತ್ರಿ ತೊರೆದುಕೊಳ್ಳಲು ನಿರ್ಧಾರ ಮಾಡಿದೆ ಎನ್ನಲಾಗಿದೆ.

ಅಧಿಕಾರಕ್ಕಾಗಿ ನಾಳೆ ಅಂದರೆ ಸೋಮವಾರ ಕಾಂಗ್ರೆಸ್ ಪಕ್ಷದ ಶಾಸಕರು ಕಾಂಗ್ರೆಸ್ ಶಾಸಕಾಂಗ ಸಭೆಯನ್ನು ನಡೆಸಲು ತೀರ್ಮಾನ ಮಾಡಿದ್ದು ಈಗಾಗಲೇ ಸರ್ಕಾರ ಉಳಿಸಿಕೊಳ್ಳುವ ಎಲ್ಲ ಪ್ರಯತ್ನಗಳು ವಿಫಲವಾಗಿರುವ ಕಾರಣ ರಾಜೀನಾಮೆ ನೀಡಿರುವ ಶಾಸಕರ ಮನವೊಲಿಸಲು ಪಕ್ಷಕ್ಕೆ ಸರ್ಕಾರ ರಚನೆ ಮಾಡಲು ಅನುವು ಮಾಡಿಕೊಡಲು ನಿರ್ಧಾರ ಮಾಡಿ ವಿರೋಧ ಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳುವ ಕುರಿತು ಚರ್ಚೆ ನಡೆಸಲಾಗುತ್ತದೆ. ಒಟ್ಟಿನಲ್ಲಿ ಈಗಾಗಲೇ ಎಲ್ಲಾ ಯೋಚನೆಗಳು ವಿಫಲಗೊಂಡಿರುವ ಕಾರಣ ನಾಳೆಯ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆ ಮಹತ್ವಪೂರ್ಣವಾಗಿದ್ದು, ಸುಪ್ರೀಂಕೋರ್ಟ್ ತೀರ್ಪಿಗೂ ಮುನ್ನವೇ ಕುಮಾರಸ್ವಾಮಿರವರ ರಾಜೀನಾಮೆ ನೀಡುವ ಮೂಲಕ ವಿಧಾನಸಭೆಯಲ್ಲಿ ಎರಡನೇ ಅತಿದೊಡ್ಡ ಪಕ್ಷವಾದ ಕಾಂಗ್ರೆಸ್ ಪಕ್ಷಕ್ಕೆ ವಿರೋಧ ಪಕ್ಷ ಸ್ಥಾನದಲ್ಲಿ ಕೂರಲು ಅನುವು ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ.

CongressJDSKannada NewsKarnataka BJPkarnataka politicsKarunaada Vaani