ಶಿವಸೇನಾಗೆ ಭರ್ಜರಿ ಗಿಫ್ಟ್ ನೀಡಲು ಮುಂದಾದ ಮೋದಿ

ಕಳೆದ ಚುನಾವಣೆಯ ಸಮಯದಲ್ಲಿ ಬಿಜೆಪಿ ಪಕ್ಷದ ವಿರುದ್ಧ ಹಾಗೂ ನರೇಂದ್ರ ಮೋದಿ ರವರ ವಿರುದ್ಧ ಹಲವಾರು ಬಾರಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಭಾರೀ ಸದ್ದು ಮಾಡಿತ್ತು, ಇನ್ನೇನು ಶಿವಸೇನಾ ಪಕ್ಷವು ಮೈತ್ರಿಯನ್ನು ಕಳೆದುಕೊಂಡಿತು ಎನ್ನುವಷ್ಟರಲ್ಲಿ ಬಿಜೆಪಿ ಪಕ್ಷದ ಚಾಣಕ್ಯ ಅಮಿತ್ ಶಾ ರವರು ಕಣಕ್ಕಿಳಿದು, ಶಿವಸೇನಾ ಪಕ್ಷದ ಜೊತೆ ಮೈತ್ರಿ ಮುಂದುವರಿಸಲು ಮಾತುಕತೆ ನಡೆಸಿದ್ದರು. ಅಷ್ಟಾದರೂ ಸುಮ್ಮನಾಗದ ಶಿವಸೇನ ಪಕ್ಷವು ಕೊನೆಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹೀನಾಯ ಸೋಲಿನ ನಂತರ ಬಿಜೆಪಿ ಪಕ್ಷದ ಜೊತೆ ಮೈತ್ರಿ ಮುಂದುವರಿಸಿಕೊಂಡು ಹೋಗುವುದಾಗಿ ಘೋಷಣೆ ಮಾಡಿ, ನರೇಂದ್ರ ಮೋದಿ ರವರ ಅಲೆಯಿಂದ ಸಂಪೂರ್ಣವಾಗಿ ಬಳಸಿಕೊಂಡು 18 ಸಂಸದರನ್ನು ಗೆಲ್ಲಿಸಿಕೊಂಡು ಚುನಾವಣಾ ಪೂರ್ವ ಮೈತ್ರಿ ಯಂತೆ ಎನ್ ಡಿ ಎ ಮೈತ್ರಿಕೂಟದಲ್ಲಿ ಗುರುತಿಸಿಕೊಂಡಿದೆ.  ಇದೇ ಶಿವಸೇನಾ ಪಕ್ಷಕ್ಕೆ ಇದೀಗ ನರೇಂದ್ರ ಮೋದಿ ರವರು ಭರ್ಜರಿ ಗಿಫ್ಟ್ ನೀಡಲು ಮುಂದಾಗಿದ್ದಾರೆ.

ಯಾರು ಊಹಿಸದ ರೀತಿಯಲ್ಲಿ ಸಂಸತ್ತಿನ ಸ್ಪೀಕರ್ ಸ್ಥಾನಕ್ಕೆ ಅಚ್ಚರಿಗೆ ಆಯ್ಕೆ ಮಾಡಿದ ನರೇಂದ್ರ ಮೋದಿ ಅವರು ಇದೀಗ ಎಲ್ಲ ರಾಜಕೀಯ ಪಂಡಿತರ ಲೆಕ್ಕಾಚಾರ ಗಳನ್ನು ಉಲ್ಟಾ ಮಾಡಲು ಮತ್ತೊಮ್ಮೆ ಸಿದ್ದರಾದಂತೆ ಕಾಣುತ್ತಿದೆ. ಹೌದು ರಾಜಸ್ಥಾನ ಬಿಜೆಪಿ ಪಕ್ಷದ ನಾಯಕ ಬಿರ್ಲಾ ರವರನ್ನು ಸ್ಪೀಕರ್ ಸ್ಥಾನಕ್ಕೆ ಅಚ್ಚರಿ ಆಯ್ಕೆ ಮಾಡಿದ ನರೇಂದ್ರ ಮೋದಿ ರವರು, ರಾಜ್ಯಸಭೆಯ ಸಂಖ್ಯಾ ಬಲಕ್ಕೆ ಅನುಕೂಲವಾಗುವಂತೆ ಉಪಸ್ಪೀಕರ್ ಸ್ಥಾನವನ್ನು ಒಡಿಸ್ಸಾದ ಬಿಜೆಡಿ ಪಕ್ಷಕ್ಕೆ ಅಥವಾ ಆಂಧ್ರಪ್ರದೇಶದಲ್ಲಿ ಭರ್ಜರಿಯಾಗಿ ಗೆದ್ದಿರುವ ವೈ ಎಸ್ ಆರ್ ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟು ಕೊಡಲಿದ್ದಾರೆ ಎಂಬ ಮಾಹಿತಿಗಳು ಕೇಳಿಬಂದಿದ್ದವು, ಆದರೆ ಇದೀಗ ಶಿವಸೇನಾ ಪಕ್ಷದ ಬೇಡಿಕೆಯಂತೆ ಉಪ ಸ್ಪೀಕರ್ ಸ್ಥಾನವನ್ನು ಶಿವಸೇನಾ ಪಕ್ಷಕ್ಕೆ ಬಿಟ್ಟುಕೊಡಲು ನರೇಂದ್ರ ಮೋದಿ ರವರು ಮುಂದಾಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

bjpKannadaKannada NewsKarunaada VaanimodiNarendra modiShiv Sena