ನಾಯ್ಡುಗೆ ಗಾಯದ ಮೇಲೆ ಬರೆ! ಕೈಕೊಟ್ಟ ನಾಯ್ಡು ಬಲಗೈ ಬಂಟ! ಮೋದಿ ಅಲೆಯಲ್ಲ ಸುನಾಮಿ

ಚಂದ್ರಬಾಬು ನಾಯ್ಡುರವರ ಪಕ್ಷದ ಸ್ಥಿತಿ ದಿನೇ ದಿನೇ ಕ್ಷೀಣಿಸುತ್ತಿದೆ, ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯಲ್ಲಿ ಇತ್ತೀಚೆಗೆ ಹಿಂದೆಂದೂ ಕಾಣದಂತಹ ಸೋಲನ್ನು ಕಂಡಿರುವ ಚಂದ್ರಬಾಬು ನಾಯ್ಡುರವರ ಪಕ್ಷವು ಇದೀಗ ಅಂತ್ಯದತ್ತ ಸಾಗುತ್ತಿದೆ ಎಂದು ರಾಜಕೀಯ ಪಂಡಿತರು ಲೆಕ್ಕಾಚಾರ ಹಾಕುತ್ತಿದ್ದಾರೆ. ದಿನೇದಿನೇ ಬಿಜೆಪಿ ಪಕ್ಷದ ಅಲೆ ಆಂಧ್ರಪ್ರದೇಶದಲ್ಲಿ ಹೆಚ್ಚಾಗುತ್ತಿದ್ದು, ಪಕ್ಷಾಂತರ ಗಳು ಹೆಚ್ಚಾಗಿವೆ. ಒಂದೆಡೆ ಭದ್ರವಾಗಿ ನೆಲೆಯೂರಿರುವ ವೈಎಸ್ಆರ್ ಕಾಂಗ್ರೆಸ್ ಪಕ್ಷ ಮತ್ತೊಂದೆಡೆ ಗೆದ್ದಿರುವ ಕೆಲವೇ ಕೆಲವು ನಾಯಕರು ಬಿಜೆಪಿ ಪಕ್ಷದತ್ತ ಒಲವು ತೋರುತ್ತಿರುವುದು ಚಂದ್ರಬಾಬು ನಾಯ್ಡು ರವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಕಳೆದ ಕೆಲವು ದಿನಗಳ ಹಿಂದೆ ನರೇಂದ್ರ ಮೋದಿ ರವರ ವಿರುದ್ಧ ತೊಡೆ ತಟ್ಟಿದ್ದ ಚಂದ್ರಬಾಬು ನಾಯ್ಡುರವರ ಕಥೆ ಇದೀಗ ಹೀನಾಯ ಸ್ಥಿತಿಗೆ ತಲುಪಿದೆ.

ಇತ್ತೀಚೆಗೆ ನಾಲ್ಕು ರಾಜ್ಯಸಭಾ ಸದಸ್ಯರು ಸೇರಿದಂತೆ ಹತ್ತು ಹಲವಾರು ನಾಯಕರು ಬಿಜೆಪಿ ಪಕ್ಷಕ್ಕೆ ವಲಸೆ ಹೋಗಿದ್ದರು. ಇವರ ಜೊತೆ ಇದೀಗ ನಾಯ್ಡುರವರ ಬಲಗೈ ಬಂಟ ಎನಿಸಿಕೊಂಡಿದ್ದ ತೆಲುಗು ದೇಶಂ ಪಾರ್ಟಿ ಯ ವಕ್ತಾರ ಲಂಕಾ ದಿವಾಕರ್ ಅವರು ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಇಷ್ಟು ದಿವಸ ಕೇವಲ ಊಹಾಪೋಹವಾಗಿ ಉಳಿದಿದ್ದ ಲಂಕ ದಿನಕರ್ ಅವರ ನಡೆ ಇದೀಗ ಸ್ಪಷ್ಟವಾಗಿದ್ದು ಬಿಜೆಪಿ ಪಕ್ಷದ ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಅವರ ಸಮ್ಮುಖದಲ್ಲಿ ಲಂಕಾ ದಿನಕರ್ ರವರು ಇಂದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಪಕ್ಷದ ರಾಷ್ಟ್ರೀಯ ವಕ್ತಾರರಾಗಿ ಸ್ಥಾನ ನಿರ್ವಹಿಸಿದ್ದ ಲಂಕಾ ದಿನಕರ್ ಅವರು, ಪಕ್ಷದ ಪ್ರಾಥಮಿಕ ಸದಸ್ಯತ್ವ ರಾಜೀನಾಮೆ ಸಲ್ಲಿಸುವ ಮುನ್ನ ತನ್ನ ಬೆಂಬಲಿಗರೊಂದಿಗೆ ಹಾಗೂ ಕುಟುಂಬಸ್ಥರೊಂದಿಗೆ ಚರ್ಚೆ ನಡೆಸಿ ನಿರ್ಧಾರ ತೆಗೆದುಕೊಂಡಿರುವುದಾಗಿ ರಾಜೀನಾಮೆ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.

APbjpChandra Babu Naidumodimodi vs restNarendra modiTDP